ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆಲ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಗುಬ್ಬಿ ಸರ್ಕಲ್ ಬಳಿ ಆತ್ಮೀಯ ಸ್ವಾಗತ ಕೋರಿದ ಕಾಂಗ್ರೆಸ್ ಮಹಿಳಾ ಘಟಕ ಸಚಿವರಿಗೆ ಸನ್ಮಾನಿಸಿ ಗೌರವಿಸಿದರು.
ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಗುಬ್ಬಿ ವೀರಣ್ಣ ವೃತ್ತದ ಬಳಿ ಪಟಾಕಿ ಸಿಡಿಸಿ ಸ್ವಾಗತ ಕೋರಿ ಪುಷ್ಪ ಹಾರಗಳೊಂದಿಗೆ ಸನ್ಮಾನ ಸ್ವೀಕರಿಸಿದ ಗೃಹ ಸಚಿವರು ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಮಹಿಳಾ ಘಟಕ ನಿರಂತರ ಕೆಲಸ ಮಾಡಬೇಕಿದೆ. ಮುಂಬರುವ ಎಲ್ಲಾ ಚುನಾವಣೆಗೆ ಪಕ್ಷ ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಮುಖ್ಯ. ನಮ್ಮ ಗ್ಯಾರಂಟಿ ಯೋಜನೆಗಳ ಅನುಕೂಲವನ್ನು ಮತದಾರರಿಗೆ ತಿಳಿಸುವ ಜೊತೆ ಮಹಿಳಾ ಸದಸ್ಯರ ಸಂಖ್ಯೆ ಹೆಚ್ಚಿಸಿ ಪಕ್ಷ ಸಂಘಟನೆ ಮಾಡುವಂತೆ ಕರೆ ನೀಡಿದರು.
ತಾಲ್ಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯಮ್ಮ ಮಾತನಾಡಿ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆ ಬಡ ಮತ್ತು ಮಧ್ಯಮ ವರ್ಗಕ್ಕೆ ಚೈತನ್ಯ ತುಂಬಿದೆ. ಮಹಿಳೆಯರಿಗೆ ಆರ್ಥಿಕ ಸಬಲತೆ ನೀಡಿದ ಗೃಹಲಕ್ಷ್ಮಿ ಯೋಜನೆಯಿಂದ ಗೃಹೋಪಯೋಗಿ ವಸ್ತು ಖರೀದಿ, ತೋಟದಲ್ಲಿ ಕೊಳವೆಬಾವಿ ಕೊರೆಸಿದ ಉದಾಹರಣೆ ಇದೆ. ಈ ಯೋಜನೆಯ ಫಲ ಮುಂದಿನ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ನೀಡುವ ಕೆಲಸ ಮಹಿಳೆಯರು ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವೈ.ಟಿ.ದೇವರಾಜ್, ಗುಬ್ಬಿ ಎಸ್ಟಿ ಘಟಕದ ನರಸಿಂಹಮೂರ್ತಿ, ಅಡವೀಶಯ್ಯ, ರಮೇಶ್, ವಿರೂಪಾಕ್ಷ, ಮಹಿಳಾ ಘಟಕದ ರತ್ನಮ್ಮ, ಗಂಗಮ್ಮ, ಶಂಕರಮ್ಮ, ಸಿದ್ದಮ್ಮ, ಸಣ್ಣಲಿಂಗಮ್ಮ, ಓಬಳಮ್ಮ ಇತರರು ಇದ್ದರು.