ಓದಿದ ಶಾಲೆ ಹಾಗೂ ಗ್ರಾಮವನ್ನು ಮರೆಯದೆ ಋಣ ತೀರಿಸುವಲ್ಲಿ ಹಳೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕೆಪಿಎಸ್ ಶಾಲೆಯ ಪ್ರಾಂಶುಪಾಲ ಡಾ. ವೆಂಕಟಾಚಲಯ್ಯ ತಿಳಿಸಿದರು.
ಗುಬ್ಬಿ ತಾಲೂಕಿನ ಸಿಎಸ್ ಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಳೆ ವಿದ್ಯಾರ್ಥಿಗಳಿಂದ ನೂತನವಾಗಿ ನಿರ್ಮಿಸಿದ್ದ ಸೈಕಲ್ ಸ್ಟ್ಯಾಂಡ್, ಶಾಲಾ ಕಟ್ಟಡ, ಶುದ್ದ ನೀರಿನ ಘಟಕ, ನೂತನ ಶಾಲಾ ಕೊಠಡಿ ಉದ್ಘಾಟನೆ ಹಾಗೂ ಭೋಜನಾಲಯ ಮತ್ತು ಸಭಾಂಗಣ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಹಳೆಯ ವಿದ್ಯಾರ್ಥಿಗಳ ನಿರಂತರ ಯಶಸ್ಸು ಮತ್ತು ಬೆಳವಣಿಗೆಗೆ ಜೀವನಪರ್ಯಂತ ಕಲಿಕೆ ಅತ್ಯಗತ್ಯ. ಗ್ರಾಮದಲ್ಲಿ ಇಂತಹ ಸಂಘಟನೆಗಳು ಗಟ್ಟಿಯಾದರೆ ಗ್ರಾಮ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ.ಸಿ.ಎನ್. ಮಾತನಾಡಿ, ಸುಮಾರು 18 ಲಕ್ಷದ ವೆಚ್ಚದ ಕಾಮಗಾರಿ ಯಾಗಿದ್ದು, ಈ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುತ್ತೇವೆ. ಶಾಲೆಯ ಅಭಿವೃದ್ಧಿಗೆ ಹಾಗೂ ಮಕ್ಕಳ ಕಲಿಕೆಗೆ ಬೇಕಾದ ಪೂರಕ ಕೆಲಸ ಮಾಡಲು ಕೆಪಿಎಸ್ ಶಾಲೆಯ ಹಳೆಯ ವಿದ್ಯಾರ್ಥಿಗಳು ಶ್ರಮಿಸಲು ಸದಾ ಸಿದ್ದ ಎಂದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಗೋವಿಂದರಾಜು, ಮುಖ್ಯ ಶಿಕ್ಷಕಿ ಬಿ. ಹೆಚ್.ಗಂಗಮ್ಮ, ಎಸ್ ಡಿ ಎಂ ಸಿ ಅಧ್ಯಕ್ಷ ಗೋಪಾಲಕೃಷ್ಣ, ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಎಂ. ಡಿ. ನಯಾಜ್, ಉಪಾಧ್ಯಕ್ಷ ಕೆಂಪರಾಜು, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕಾರ್ಯಾಧ್ಯಕ್ಷರಾದ ಕೃಷ್ಣಮೂರ್ತಿ,ಎಸ್ ಡಿ ಎಂ ಸಿ ಸದಸ್ಯರು, ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಪೋಷಕರುಗಳು ಶಾಲಾ ಕಾಲೇಜಿನ ಬೋಧಕರು ಹಾಗೂ ಬೋಧಕೇತರರು ಮತ್ತಿತರರು ಉಪಸ್ಥಿತರಿದ್ದರು.