ಧರ್ಮ, ಸಂಸ್ಕೃತಿ ಮತ್ತು ಸಮಾಜಸೇವೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ತಾಲ್ಲೂಕಿನ ಕೊಡಿಯಾಲ ಗ್ರಾಮದ ವೇದ ಬ್ರಹ್ಮ ವೀರೇಶಾರಾಧ್ಯ ಅವರಿಗೆ ಅಖಿಲ ಕರ್ನಾಟಕ ಸಾಂಸ್ಕೃತಿಕ ಪ್ರತಿಷ್ಠಾನಾ ಹಾಗೂ ಕನ್ನಡ ಸಮಾಜ ಸಾಂಸ್ಕೃತಿಕ ಸಂಘ ಪ್ರಸಕ್ತ ಸಾಲಿನ ಧಾರ್ಮಿಕ ಸೇವಾರತ್ನ ರಾಜ್ಯ ಪ್ರಶಸ್ತಿ ನೀಡಿದೆ.
ಬೆಂಗಳೂರಿನ ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಧಾರ್ಮಿಕ ಸೇವಾರತ್ನ ಪ್ರಶಸ್ತಿ ಪಡೆದ ವೀರೇಶಾರಾಧ್ಯ ಅವರು ಶ್ರೀ ಸುಬ್ರಹ್ಮಣ್ಯ ಶಾಂತಿಧಾಮ ಟ್ರಸ್ಟ್ ಮೂಲಕ ಧಾರ್ಮಿಕ ಆಚರಣೆ, ಪ್ರಚಾರ ಹಾಗೂ ಜನಮನ್ನಣೆ ಕಾರ್ಯಕ್ರಮ ನಿರಂತರವಾಗಿ ನಡೆಸಿದ್ದಾರೆ. ಧಾರ್ಮಿಕತೆ ಮೂಲಕ ನೂರಾರು ಮಂದಿಗೆ ನೈತಿಕ ಶಕ್ತಿ ತುಂಬಿದ್ದಾರೆ. ಸಂಸ್ಕೃತಿ ಉಳಿಸುವ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತಿರುವುದನ್ನು ಗುರುತಿಸಿದ ಸಂಘ ಈ ಪ್ರಶಸ್ತಿ ನೀಡಿ ಗೌರವಿಸಿದೆ.
ಧಾರ್ಮಿಕ ಸಮಾಜಸೇವೆಗೆ ವೀರೇಶಾರಾಧ್ಯ ಅವರಿಗೆ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗಡೆ, ಸಾಹಿತಿ ಡಾ.ಗುರುವಂತ ಮಂಜು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ.ಪ್ರಭಾಕರ್ ರೆಡ್ಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.