ಗುಬ್ಬಿ | ಪೊಲೀಸರ ಕಾವಲಿನಲ್ಲಿ ಲಿಂಕ್ ಕೆನಾಲ್ ಕಾಮಗಾರಿ ಪುನರಾರಂಭ : ಸಿಡಿದೆದ್ದ ರೈತರಿಂದ ಹೋರಾಟ ಆರಂಭ

Date:

Advertisements

ತುಮಕೂರು ಜಿಲ್ಲೆಯ ಜೀವನಾಡಿ ಹೇಮಾವತಿ ನೀರು ನಮ್ಮಿಂದ ಕಿತ್ತುಕೊಳ್ಳುವ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಪೈಪ್ ಲೈನ್ ಕಾಮಗಾರಿ ಸ್ಥಗಿತ ಗೊಳಿಸಲು ಕಳೆದ ಒಂದು ವರ್ಷದಿಂದ ನಿರಂತರ ಹೋರಾಟ ನಡೆಸಿದ್ದ ರೈತರಿಗೆ ಶುಕ್ರವಾರ ಪೊಲೀಸರ ಕಾವಲಿನಲ್ಲಿ ಕೆಲಸ ಆರಂಭಿಸಿದ್ದು ಶಾಕ್ ನೀಡಿದೆ. ಈ ಹಿನ್ನಲೆ ರೊಚ್ಚಿಗೆದ್ದ ರೈತರು ಕಾಮಗಾರಿ ಸಮೀಪದಲ್ಲಿ ಸಂಕಾಪುರ ಬಳಿ ಹೋರಾಟ ಆರಂಭಿಸಿದ್ದಾರೆ.

ಮಾಗಡಿಯತ್ತ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಪೈಪ್ ಲೈನ್ ಕಾಮಗಾರಿ ಬಗ್ಗೆ ಈ ಹಿಂದೆ ಬಿಜೆಪಿ ಸರ್ಕಾರ ರದ್ದುಗೊಳಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಭಾವಿಗಳ ಕಣ್ಣು ಹೇಮಾವತಿ ನೀರಿನ ಮೇಲೆ ಬಿದ್ದಿದೆ. ಹೇಮಾವತಿ ನೀರು ಮುಖ್ಯನಾಲೆಯಿಂದ ಪೈಪ್ ಮೂಲಕ ನೀರು ಹರಿಸುವುದು ಕಾನೂನು ಬಾಹಿರ. ಯಾವುದೇ ಹಂಚಿಕೆ ನಡೆಯದೇ ಏಕಾಏಕಿ ಕಾಮಗಾರಿ ಆರಂಭಿಸಿ ಕಾನೂನು ಕೈಗೆತ್ತಿಕೊಂಡು ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ರೈತ ಮುಖಂಡರು, ರಾಜಕೀಯ ಮುಖಂಡರು, ಹಲವು ಮಠಾಧೀಶರು ಒಗ್ಗೂಡಿ ಬೃಹತ್ ಹೋರಾಟ ನಡೆಸಿದ್ದರು. ಲಿಂಕ್ ಕೆನಾಲ್ ವಿರೋಧಿ ಸಮಿತಿ ರಚಿಸಿ ಹೋರಾಟದ ರೂಪವನ್ನು ಉಗ್ರ ಗೊಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಪಾದಯಾತ್ರೆ, ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರ ಮನೆಗೆ ಮುತ್ತಿಗೆ ಹೀಗೆ ಹೋರಾಟ ನಿರಂತರ ನಡೆಸಲಾಯಿತು. ಸರ್ಕಾರ ಕಾಮಗಾರಿ ಮಾಡುವುದಿಲ್ಲ ಎಂದು ಹೇಳಿಕೊಂಡೇ ಸರ್ಕಾರಿ ಜಾಗದಲ್ಲಿ ಕೆನಾಲ್ ತೆಗೆಯುವ ಕೆಲಸ ಆಗಾಗ್ಗೆ ನಡೆಸಿ ರೈತರನ್ನು ಕೆಣಕಿ ಕೊನೆಗೆ ಶುಕ್ರವಾರ ಮುಹೂರ್ತ ನಿಗದಿ ಮಾಡಿ ಸಾವಿರ ಪೊಲೀಸರ ಸರ್ಪಗಾವಲಿನಲ್ಲಿ ಕಾಮಗಾರಿ ನಡೆಸಲು ಅನುವು ಮಾಡಲಾಗಿದೆ. ರೈತರಿಗೆ ದಿಗ್ಬಂಧನ ಹಾಕಿ ಕಾಮಗಾರಿಯ ಸುತ್ತಲಿನ ಎಲ್ಲಾ ರಸ್ತೆ ಬಂದ್ ಮಾಡಲಾಗಿದೆ. ಹೋರಾಟಕ್ಕೆ ತೆರಳಿದ್ದ ರೈತರನ್ನು ಅಲ್ಲಲ್ಲೇ ನಿಲ್ಲಿಸಿ ಹೋರಾಟ ಹತ್ತಿಕ್ಕುವ ಕೆಲಸ ನಡೆಸಲಾಗಿದೆ. ಈ ಹಿನ್ನಲೆ ಆಕ್ರೋಶಗೊಂಡ ರೈತರು ಸಂಕಾಪುರ ಅತ್ತಿಕಟ್ಟೆ ಗೇಟ್ ಬಳಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಅತ್ತಿಕಟ್ಟೆ ಸಂಪಿಗೆ ರಸ್ತೆಯಲ್ಲಿ ಪೊಲೀಸರು ರೈತರನ್ನು ಅಡ್ಡಗಟ್ಟಿದ ಹಿನ್ನಲೆ ರಸ್ತೆಯಲ್ಲೇ ಪ್ರತಿಭಟನೆಯನ್ನು ರೈತಸಂಘದ ನೇತೃತ್ವದಲ್ಲಿ ಆರಂಭಿಸಿದರು. ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ ಸರ್ಕಾರ ಸ್ಥಳೀಯ ಜನಪ್ರತಿನಿಧಿಗಳ ಹಾಗೂ ರೈತ ಮುಖಂಡರ ಸಲಹೆ ಪಡೆದಿಲ್ಲ. ಜಿಲ್ಲೆಗೆ ಹಂಚಿಕೆಯಾದ 24 ಟಿಎಂಸಿ ನೀರು ಕದ್ದೊಯ್ಯುವ ಯೋಜನೆ ಸಂಪೂರ್ಣ ಅಕ್ರಮ ಆಗಿದೆ. ಡಿಸಿಎಂ ಶಿವಕುಮಾರ್ ಅವರು ಅಧಿಕಾರಿಗಳನ್ನು ಪೊಲೀಸರ ಜೊತೆ ಕಳುಹಿಸಿ ಕಾಮಗಾರಿ ಮಾಡಿರುವುದು ಸರಿಯಲ್ಲ. ರೈತರನ್ನು ತಡೆಗಟ್ಟಿ ಪೊಲೀಸರ ಭಯ ತೋರಿಸುವ ಇವರ ದಬ್ಬಾಳಿಕೆಗೆ ತಕ್ಕ ಉತ್ತರ ರೈತರೇ ನೀಡುತ್ತಾರೆ. ರೈತ ಸಂಘ ಸಹ ಮುಂದಿನ ದಿನದಲ್ಲಿ ಉಗ್ರ ಹೋರಾಟ ಕೈಗೊಳ್ಳಲಿದೆ ಎಂದರು.

Advertisements

ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ ಸಂಸದ ಸೋಮಣ್ಣ ಅವರು ಪತ್ರಿಕೆಯಲ್ಲಿ ಹೇಳಿಕೆ ನೀಡಿ ಈ ಪೈಪ್ ಲೈನ್ ಕಾಮಗಾರಿ ವಿರೋಧ ಇದೆ ಎನ್ನುತ್ತಾರೆ. ಆದರೆ ರೈತರ ಹೋರಾಟಕ್ಕೆ ಬರುತ್ತಿಲ್ಲ. ಬರೀ ರೈಲ್ವೆ ಸೇತುವೆ ಮಾಡುತ್ತಾ ಇದ್ದರೆ ಆಗೋಲ್ಲ. ರೈತರಿಗೆ ಅವಶ್ಯ ಕೃಷಿಗೆ ನೀರನ್ನು ಉಳಿಸಿಕೊಡಿ. ಡಿಕೆಶಿ ಜೊತೆ ಚರ್ಚೆ ಮಾಡಿ ಎಂದ ಅವರು ಜಿಲ್ಲೆಯಲ್ಲಿ ಇಬ್ಬರು ಸಚಿವರು ಕೇವಲ ಕಾಂಗ್ರೆಸ್ ಸಚಿವರು ಎನಿಸಿದ್ದಾರೆ. ಕಾಂಗ್ರೆಸ್ ಶಾಸಕರೂ ಸಹ ಒಂದು ಮಾತು ಆಡುತ್ತಿಲ್ಲ ಎಂದು ಕಿಡಿಕಾರಿದರು.

ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ ಹೇಮಾವತಿ ಜಿಲ್ಲೆಗೆ ತರಲು ನಡೆದ ಹೋರಾಟ ವೈ.ಕೆ.ರಾಮಯ್ಯ ಅವರನ್ನು ಸ್ಮರಿಸಬೇಕು. ಅಂದಿನ ಕಿಚ್ಚು ಇಂದು ಕಾಣುತ್ತಿಲ್ಲ. ಇಂದಿನ ರಾಜಕಾರಣಿಗಳು ಸ್ವಾರ್ಥಕ್ಕೆ ನಿಂತಿದ್ದಾರೆ. ಆಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು ಎಂಬ ಗುಂಪೇ ಕಾಣುತ್ತಿದೆ. ಇವರಿಗೆ ಅಧಿಕಾರಿಗಳು ದಲ್ಲಾಳಿಗಳಂತೆ ವರ್ತಿಸುತ್ತಾರೆ ಎಂದು ಗುಡುಗಿ ಜೈಲಿನಲ್ಲೇ ಉಪವಾಸ ಮಾಡೋಣ. ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮುಂದುವರೆಸಿ ಎಂದು ಕರೆ ನೀಡಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಅವೈಜ್ಞಾನಿಕ ಪೈಪ್ ಲೈನ್ ಕಾಮಗಾರಿಯಲ್ಲಿ 800 ಮೀಟರ್ ಪೈಪ್ ಹಾಕಲೇಬೇಕು ಎಂದು ಹಠಕ್ಕೆ ಬಿದ್ದ ಸರ್ಕಾರ ಅಧಿಕಾರವನ್ನು ಬಳಸಿಕೊಂಡು ಮುಂದುವರೆದಿದೆ. ಆದರೆ ಕೈಗೆ ಬಳೆ ತೊಟ್ಟುಕೊಳ್ಳುವ ಕೆಲಸ ಮಾಡದೇ ಜಿಲ್ಲೆಯ ಮುಖಂಡರು ಹೋರಾಟಕ್ಕೆ ಧುಮುಕಬೇಕು ಎಂದ ಅವರು ಗುಬ್ಬಿ ಶಾಸಕರು ಸಚಿವರಾಗುವ ಆಸೆಯಲ್ಲಿ ರೈತರನ್ನು ಬಲಿ ಕೊಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗೋದಿಲ್ಲ. ನೀವು ಸಚಿವರಾಗಲ್ಲ ಎಂದು ಖಡಕ್ ಪ್ರತಿಕ್ರಿಯೆ ನೀಡಿದರು.

ನಂತರ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ತಹಶೀಲ್ದಾರ್ ಅವರು ಪ್ರತಿಭಟನಾಕಾರರನ್ನು ತಡೆಯುವ ಪ್ರಯತ್ನ ಮಾಡಿದರು. ಎಲ್ಲಾ ಹೋರಾಟಗಾರರನ್ನು ಬಸ್ಸಿನಲ್ಲಿ ಹೊರ ವಲಯದಲ್ಲಿ ಅತಿಥಿಯಾಗಿಸಿಕೊಂಡು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹತ್ತಿಕ್ಕುವಲ್ಲಿ ಯಶಸ್ವಿಯಾದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಎಚ್.ಟಿ.ಭೈರಪ್ಪ, ಬಿ.ಎಸ್.ಪಂಚಾಕ್ಷರಿ, ಸಿದ್ದರಾಮಯ್ಯ, ಗಿರೀಶ್, ರಾಜಶೇಖರ್, ನಂದೀಶ್, ರೈತ ಸಂಘದ ಶಂಕರಪ್ಪ, ಸಿ.ಜಿ.ಲೋಕೇಶ್, ಸತ್ತಿಗಪ್ಪ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X