ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಯ ನಂತರದಲ್ಲಿ ಸರ್ಕಾರದ ಪರವಾಗಿ ನಾಮ ನಿರ್ದೇಶಿತ ಸದಸ್ಯರಾಗಿ ಎಂ.ವಿ.ಶ್ರೀನಿವಾಸಯ್ಯ ನೇಮಕಗೊಂಡಿದ್ದಾರೆ.
ಮಾಜಿ ಶಾಸಕ ವೀರಣ್ಣಗೌಡರ ಪುತ್ರ ಶ್ರೀನಿವಾಸಯ್ಯ ಸುದ್ದಿಗಾರರ ಜೊತೆ ಮಾತನಾಡಿ ಕೃಷಿಕರ ಪರ ಕೆಲಸ ಮಾಡುವ ಪಿಎಲ್ ಡಿ ಬ್ಯಾಂಕ್ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ನಿರ್ದೇಶಕರ ಜೊತೆ ಶ್ರಮಿಸುತ್ತೇವೆ. ಸರ್ಕಾರದ ಮೂಲಕ ಹೆಚ್ಚಿನ ಸಹಕಾರ ಪಡೆದು ಎಲ್ಲರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಬ್ಯಾಂಕ್ ಅಭಿವೃದ್ದಿ ಪಡಿಸುತ್ತವೆ ಎಂದರು.