ನಿಯಮ ಬಾಹಿರವಾಗಿ ಪಾವತಿಸಿದ ಆರೋಪದ ಮೇಲೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಪಂ ಪಿಡಿಒ ಎಚ್. ಸಿ ಶಿವಕುಮಾರ್ ಅವರನ್ನು ಅಮಾನತು ಮಾಡಿ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಜಿ. ಪ್ರಭು ಆದೇಶ ಹೊರಡಿಸಿದ್ದಾರೆ.
ಹಾಗಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿ ಯೋಜನೆಯಡಿ ಜಲ್ಲಿ ರಸ್ತೆ ಕಾಮಗಾರಿ, ಅಮೃತ ಸರೋವರ ನಿರ್ಮಾಣ, ಕೆರೆ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸದೆ ನಿಯಮಬಾಹಿರವಾಗಿ ಕಾಮಗಾರಿಯ ಕೂಲಿಯ ಮೊತ್ತವನ್ನು ಪಾವತಿಸಿ ಹಣ ದುರುಪಯೋಗ ಪಡಿಸಿಕೊಂಡು ಕರ್ತವ್ಯ ಲೋಪವೆಸಗಿರುವುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು ಈ ಹಿನ್ನೆಲೆಯಲ್ಲಿ ಇಲಾಖೆ ನೌಕರರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುನಲ್ಲಿ ಇರಿಸಲಾಗಿದೆ.
ನರೇಗಾ ಯೋಜನೆಯಡಿ ನಿಯಮಬಹಿರವಾಗಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಬಗ್ಗೆ ಗುಬ್ಬಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಗತ್ಯ ದಾಖಲೆಗಳೊಂದಿಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದಾಗ ಕರ್ತವ್ಯ ಲೋಪ ಕಂಡು ಬಂದಿದ್ದು ಅಮಾನತ್ತಿಗೆ ಆದೇಶಿಸಿದ್ದಾರೆ.