ಗುಬ್ಬಿ | ಮೀಸಲಾತಿ ಪಡೆದು ಬೆಳೆದವರೇ ಮತ್ತೇ ಮೀಸಲಾತಿ ಪಡೆಯುತ್ತಾರೆ : ಶಾಸಕ ಎಸ್.ಆರ್.ಶ್ರೀನಿವಾಸ್.

Date:

Advertisements

ಸಂವಿಧಾನ ಬದ್ಧ ಮೀಸಲಾತಿ ಪಡೆದು ಸಮಾಜದಲ್ಲಿ ಬೆಳೆದು ಗುರುತಿಸಿಕೊಂಡವರೇ ಮರಳಿ ಮೀಸಲಾತಿ ಪಡೆಯುತ್ತಿರುವುದು ಸೋಜಿಗದ ಸಂಗತಿ. ಶೋಷಿತ ವರ್ಗ ಹಳ್ಳಿಗಾಡಿನಲ್ಲಿ ಬಡತನದಲ್ಲೇ ಬದುಕು ಸಾಗಿಸುತ್ತಿದ್ದಾರೆ. ಇಂತಹ ಜನರ ಬಾಳಿಗೆ ಬೆಳಕು ನೀಡುವ ಚಿಂತನೆ ನಡೆಸಿ ಮೀಸಲಾತಿ ದೊರೆಕಿಸಿಕೊಟ್ಟರೆ ಅಂಬೇಡ್ಕರ್ ಜಯಂತಿ ಅರ್ಥ ಸಿಗುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟ ನಡೆಸಿದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಮಟೆ ಬಾರಿಸಿ ಕುಣಿದು ಕುಪ್ಪಳಿಸುವ ಬದಲು ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ಒದಗಿಸುವ ಚಿಂತನೆ ನಡೆಸಬೇಕು. ಅಂಬೇಡ್ಕರ್ ಕನಸು ಸಾಕರಗೊಳಿಸಲು ಶಿಕ್ಷಣ ಸಂಘಟನೆ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ಸಮಾನತೆ ಸಾರುವ ಕೆಲಸ 12 ನೇ ಶತಮಾನದಲ್ಲಿ ಬಸವಣ್ಣ ಅವರು ಕ್ರಾಂತಿ ನಡೆಸಿದ್ದರು. ಅಂಬೇಡ್ಕರ್ ಅವರು ಶಿಕ್ಷಣ ಮೂಲಕ ಸಂವಿಧಾನ ರಚಿಸಿ ಶೋಷಿತರು, ತುಳಿತಕ್ಕೆ ಒಳಗಾದವರ ಪರ ನಿಂತು ಕಾನೂನು ಮೂಲಕ ಅನುಕೂಲ ಮಾಡಿಕೊಟ್ಟರು. ಆದರೆ ಈಗ ಓದು ಬರಹ ಮಾಡದೆ ಕೇವಲ ಸರ್ಕಾರ ನೋಡುವ ಮೀಸಲಾತಿ ಸವಲತ್ತುಗಳತ್ತ ನೋಡುವುದು ಪದ್ಧತಿಯಾಗಿದೆ. ಕೇವಲ ಭಾಷಣ ಮೂಲಕ ಸಮಾನತೆ ಸಾರದೇ ವಾಸ್ತವ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು ಅಂಬೇಡ್ಕರ್ ಸಾಧನೆಗೆ ಕಾರಣವಾಗಿದ್ದು ಅಂದಿನ ಶೋಷಣೆ. ಅಸ್ಪೃಶ್ಯತೆ, ಜಾತಿ ಬೇದ, ಮೇಲು ಕೀಳು ಇವೆಲ್ಲಾ ನೋವು ಅನುಭವಿಸಿ ಬೀದಿಯಲ್ಲಿ ಓದಿ ಶಿಕ್ಷಣ ಪಡೆದರು. ಅದರ ಪರಿಣಾಮ ಸಂವಿಧಾನ ರಚನೆ. ಎಲ್ಲಾ ಜಾತಿ ವರ್ಗಕ್ಕೂ ಸಮಾನತೆಯ ಕಾನೂನು ಕ್ರಮ ರಚಿಸಿ ವಿಶ್ವ ಖ್ಯಾತಿ ಗಳಿಸಿದೆ ಎಂದರು.

Advertisements

ಉಪನ್ಯಾಸಕ ಡಾ.ಟಿ.ಎಚ್.ಮಂಜುನಾಥ್ ಮಾತನಾಡಿ 51 ಸಾವಿರ ಪುಸ್ತಕವನ್ನು ಅಧ್ಯಯನ ಮಾಡಿ ಸಂವಿಧಾನ ರಚಿಸಿದ ಅಂಬೇಡ್ಕರ್ ಜೀವನ ಬಡತನ, ಶೋಷಣೆ, ತುಳಿತ, ಅಪಮಾನ ಎಲ್ಲವೂ ಕಂಡಿತ್ತು. ಎಲ್ಲಾ ಅವಮಾನಗಳ ಮಧ್ಯೆ ಶಿಕ್ಷಣ ಪಡೆಯುವ ಹೋರಾಟದಲ್ಲಿ ಗೆಲುವು ಸಾಧಿಸಿದರು. 52 ಡಿಗ್ರಿ ಪಡೆದರು. ವಿದೇಶೀ ಪ್ರಜಾತಂತ್ರ ಅಧ್ಯಯನ ಮಾಡಿ ವಿಶ್ವ ಒಪ್ಪುವ ಸಂವಿಧಾನ ಭಾರತಕ್ಕೆ ರಚಿಸಿದರು. ಅರ್ಥಶಾಸ್ತ್ರಜ್ಞ, ವಕೀಲ, ಉಪನ್ಯಾಸಕ ಹೀಗೆ ಅನೇಕ ಹುದ್ದೆ ನಡೆಸಿ ರಾಜಕಾರಣ ಕೂಡಾ ನೋಡಿದರೂ ಆದರೆ ನಮ್ಮ ಜನರನ್ನು ಮುಖ್ಯವಾಹಿನಿಗೆ ತರುವ ಚಿಂತನೆ ಕನಸಿನಲ್ಲೂ ಜಪಿಸಿದ್ದರು. ನನ್ನ ಜನರ ಬಗ್ಗೆ ಕಣ್ಣೀರು ನಿರಂತರ ಹಾಕಿ ಸಂವಿಧಾನ ಶಕ್ತಿ ತಿಳಿಸಿದರು. ಅದರ ಪರಿಣಾಮ ಈಗ ಸಮಾಜ ಪರಿವರ್ತನೆಯತ್ತ ಸಾಗಿದೆ. ಇಂತಹ ಸಾಧನೆಗೆ ಭಾರತರತ್ನ ಪ್ರಶಸ್ತಿ ನೀಡಿರಲಿಲ್ಲ. ಆದರೆ ಅವರ ಹುಟ್ಟಿನಿಂದಲೇ ಬಿಆರ್ ಅಂದರೆ ಭಾರತ ರತ್ನ ಗಳಿಸಿದ್ದರು ಎಂದರು.

ತಹಶೀಲ್ದಾರ್ ಬಿ.ಆರತಿ ಮಾತನಾಡಿ ಅಂಬೇಡ್ಕರ್ ಚಿಂತನೆ ಫಲ ಎಲ್ಲಾ ವರ್ಗದ ಜನ ಶಿಕ್ಷಣ ಪಡೆದು ಉನ್ನತ ಸ್ಥಾನ ಗಳಿಸುತ್ತಿದ್ದಾರೆ. ಶಿಕ್ಷಣ ಕೆಲ ವರ್ಗಕ್ಕೆ ಸೀಮಿತವಾಗಿದ್ದ ಸಮಯದಲ್ಲಿ ಸಂವಿಧಾನ ಸರ್ವರಿಗೂ ಶಿಕ್ಷಣ ಹಕ್ಕು ನೀಡಿತ್ತು. ಈ ಪೈಕಿ ಮಹಿಳೆಯರಿಗೆ ಸಿಕ್ಕ ಶಿಕ್ಷಣ ಇಂದು ಎಲ್ಲಾ ರಂಗದಲ್ಲೂ ಮಹಿಳೆಯರ ಸಾಧನೆ ಎದ್ದು ಕಾಣುತ್ತಿದೆ. ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಗೊಳಿಸಲು ಶಿಕ್ಷಣ ನೀಡುವ ಕೆಲಸವನ್ನು ನಿರಂತರ ಮಾಡಬೇಕು ಎಂದರು.

1001300497

ಇದೇ ಸಂದರ್ಭದಲ್ಲಿ ಈದಿನ ಡಾಟ್ ಕಾಮ್ ಬಿಡುಗಡೆಗೊಳಿಸಿದ ಅರಿವೇ ಅಂಬೇಡ್ಕರ್ ಪುಸ್ತಕವನ್ನು ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆಗೊಳಿಸಿದರು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಿಂದ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಭಾವಚಿತ್ರವನ್ನು ಮೆರವಣಿಗೆ ಮೂಲಕ ಪ್ರವಾಸಿ ಮಂದಿರಕ್ಕೆ ಆಗಮಿಸಲಾಯಿತು.

ವೇದಿಕೆಯಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ, ಶಶಿಕುಮಾರ್, ಮಹಮದ್ ಸಾದಿಕ್, ಶ್ವೇತಾ, ತಾಪಂ ಇಓ ಶಿವಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ವೀಣಾ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್, ಮುಖಂಡರಾದ ಪಾಂಡುರಂಗ, ಚೇಳೂರು ಶಿವನಂಜಪ್ಪ, ಛಲವಾದಿ ಮಹಾಸಭಾದ ಅಧ್ಯಕ್ಷ ಈರಣ್ಣ, ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ, ತಾಲ್ಲೂಕು ಸಂಚಾಲಕ ಕಡಬ ಶಂಕರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್, ಬಿಆರ್ ಸಿ ಮಧುಸೂದನ್, ಕಸಾಪ ಅಧ್ಯಕ್ಷ ಯತೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪವಿತ್ರಾ ಸೇರಿದಂತೆ ಎಲ್ಲಾ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X