ಹಗ್ಗಜಗ್ಗಾಟ, ಗುಂಡು ಎಸೆತ, ಮಡಿಕೆ ಹೊಡೆಯುವುದು, ನಿಂಬೆ ಚಮಚ ಓಟ, ಮ್ಯೂಸಿಕಲ್ ಚೇರ್ ಹೀಗೆ ಅನೇಕ ಕ್ರೀಡೆಗಳ ಆಟವಾಡಿದ ಪೌರ ಕಾರ್ಮಿಕರು ನಿತ್ಯದ ಜಂಜಾಟದಿಂದ ಹೊರತಾದ ಮನರಂಜನೆ ಅನುಭಿಸಲು ಸ್ಥಳೀಯ ಪಟ್ಟಣ ಪಂಚಾಯಿತಿ ಎಲ್ಲಾ ಪೌರ ಸಿಬ್ಬಂದಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಗುಬ್ಬಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಪೌರ ಕಾರ್ಮಿಕರ ಕ್ರೀಡಾಕೂಟವನ್ನು ಉದ್ಘಾಟಿಸಿದ ಪಪಂ ಅಧ್ಯಕ್ಷೆ ಮಂಗಳಮ್ಮ ಹಾಗೂ ಉಪಾಧ್ಯಕ್ಷೆ ಮಮತಾ ಪಟ್ಟಣ ಸ್ವಚ್ಚತೆ ಬಗ್ಗೆ ನಿತ್ಯ ತಮ್ಮನ್ನೇ ತೊಡಗಿಸಿಕೊಂಡ ಕಾರ್ಮಿಕರು ಪೌರ ಕಾರ್ಮಿಕರ ದಿನಾಚರಣೆಯನ್ನು ಸಂತೋಷದಿಂದ ಆಚರಣೆ ಮಾಡಲು ಈ ವಿಶೇಷ ಕ್ರೀಡಾಕೂಟ ಆಯೋಜಿಸಲಾಗಿದೆ. ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಆಟಗಳನ್ನು ಸ್ಥಳೀಯ ಶ್ರೀ ಚನ್ನಬಸವೇಶ್ವರ ಯುವಕ ಸಂಘ ಅಚ್ಚುಕಟ್ಟಾಗಿ ನಿರ್ವಹಿಸಿತು.
ಕ್ರೀಡಾಕೂಟಕ್ಕೆ ಶುಭ ಕೋರಿದ ಪಪಂ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಮಹಮ್ಮದ್ ಸಾದಿಕ್, ಜಿ.ಸಿ.ಕೃಷ್ಣಮೂರ್ತಿ, ಆನಂದ್ ಎಲ್ಲಾ ಆಟದಲ್ಲೂ ತಮ್ಮನ್ನು ತೊಡಗಿಸಿಕೊಂಡು ಪೌರ ಕಾರ್ಮಿಕರ ಜೊತೆ ಸಂತಸ ಹಂಚಿಕೊಂಡರು. ಕ್ರೀಡಾ ಮನೋಭಾವ, ಸ್ಫೂರ್ತಿ ತುಂಬಿ ಕ್ರೀಡೆಯಲ್ಲಿ ತೊಡಗುವ ಜೊತೆಗೆ ಕಾರ್ಮಿಕರ ಆರೋಗ್ಯ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಆರೋಗ್ಯ ನಿರೀಕ್ಷಕಿ ವಿದ್ಯಾಶ್ರೀ, ಸಿಬ್ಬಂದಿಗಳಾದ ಲೋಕನಾಥ್, ಪ್ರೀತಂ, ಆಂತರಾಜು, ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಕಾರ್ಯದರ್ಶಿ ಸಿ.ಆರ್. ಶಂಕರ್ ಕುಮಾರ್, ದೈಹಿಕ ಶಿಕ್ಷಕ ಗಿರೀಶ್ ಇತರರು ಇದ್ದರು.