ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಆಟವಿ ಮಹಾಸ್ವಾಮಿಗಳಿಂದ ಸ್ಥಾಪಿತ ಗುಬ್ಬಿ ತೊರೆಮಠಕ್ಕೆ ನೂತನ ಪಟ್ಟಾಧಿಕಾರಿಗಳ ನೇಮಕ ಮಾಡುವ ಹಿನ್ನಲೆ ಎರಡು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಂಡು ಗುರುವಾರ ನೂತನ ಶ್ರೀ ಚಂದ್ರಶೇಖರ ಸ್ವಾಮೀಜಿಗಳನ್ನು ಶ್ರೀ ಅಟವಿ ಚನ್ನಬಸವ ಶಿವಯೋಗಿ ಸ್ವಾಮೀಜಿ ಎಂದು ನಾಮಕರಣ ಮಾಡಿ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಯಿತು.
ಬೆಳಿಗ್ಗೆ ವಿವಿಧ ಧಾರ್ಮಿಕ ಕೈಂಕರ್ಯ ವಿಧಿವತ್ತಾಗಿ ನಡೆಸಿ ಚಿಕ್ಕ ತೊಟ್ಲುಕೆರೆ ಮಠದ ಶ್ರೀ ಅಟವಿ ಶಿವಲಿಂಗ ಸ್ವಾಮಿಗಳ ಮೂಲಕ ದೀಕ್ಷೆ ಪಡೆದು ಉತ್ತರಾಧಿಕಾರಿ ನೇಮಕದ ಎಲ್ಲಾ ಪ್ರಕ್ರಿಯೆಯನ್ನು ಸಂಗೋಪವಾಗಿ ನಡೆಸಲಾಯಿತು. ನಂತರ ಮಾತನಾಡಿದ ಶ್ರೀ ಅಟವಿ ಶಿವಲಿಂಗ ಸ್ವಾಮೀಜಿಗಳು ಜಿಲ್ಲೆಯಲ್ಲಿನ ಧಾರ್ಮಿಕ ಪರಂಪರೆಯುಳ್ಳ ಕೆಲ ಮಠಗಳ ಪೈಕಿ ಆಟವಿ ಶ್ರೀಗಳಿಂದ ಸ್ಥಾಪಿತ ತೊರೆಮಠ ಕೂಡಾ ಗುರು ಪರಂಪರೆ ಉಳಿಸಿಕೊಂಡು ಬೆಳೆದಿದೆ. ಶ್ರೀ ರಾಜಶೇಖರ ಶ್ರೀಗಳು ಲಿಂಗೈಕ್ಯರಾದ ಬಳಿಕ ತೊರೆಮಠದ ಚಟುವಟಿಕೆಗಳು ಕುಂಠಿತವಾಗಿತ್ತು. ಮಠದ ಅಭಿವೃದ್ದಿಗೆ ಮಠದ ಭಕ್ತರು ಹಾಗೂ ಹದಿನೆಂಟು ಕೋಮಿನ ಜನರು ಸಭೆ ನಡೆಸಿ ಉತ್ತರಾಧಿಕಾರಿಗಳ ನೇಮಕಕ್ಕೆ ನಿರ್ಧರಿಸಿ ಜನವರಿ 15 ರ ನಂತರ ಉತ್ತರಾಯಣ ಕಾಲದಲ್ಲಿ ಶ್ರೀ ಚಂದೇಶೇಖರ ದೇವರು ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಯಿತು. ಆರ್ಥಿಕ ಕೊರತೆ ಹಿನ್ನಲೆ ಕಾರ್ಯಕ್ರಮಕ್ಕೆ ನೂತನ ಶ್ರೀಗಳು ಎರಡು ದಿನದ ಭಿಕ್ಷಾಟನೆ ಮೂಲಕ ಧಾರ್ಮಿಕ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ತೊರೆಮಠದ ನೂತನ ಉತ್ತರಾಧಿಕಾರಿ ಶ್ರೀ ಅಟವಿ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ ತೊರೆ ಮಠದ ಎಲ್ಲಾ ಧಾರ್ಮಿಕ ಚಟುವಟಿಕೆಗಳು ಮೊದಲಿನಂತೆ ನಡೆಸುತ್ತೇವೆ. ಶ್ರೀ ಅಟವಿ ಶಿವಯೋಗಿ ಸ್ವಾಮಿಗಳ ಆಶೀರ್ವಾದ ಪಡೆದು ಮಠದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿ, ಭಕ್ತರ ಸಲಹೆಗಳನ್ನು ಆಲಿಸಿ ಮಠ ಮುನ್ನೆಡೆಸುವ ಭರವಸೆ ನೀಡಿದರು. ಇತ್ತೀಚಿಗೆ ಲಿಂಗೈಕ್ಯರಾದ ಶ್ರೀ ರಾಜಶೇಖರ ಶ್ರೀಗಳ ಶಿಕ್ಷನಾಗಿ ಈಗಾಗಲೇ ಮಠದ ಎಲ್ಲಾ ಧಾರ್ಮಿಕ ಕೈಂಕರ್ಯ ತಿಳಿದಿದೆ. ಹದಿನೆಂಟು ಕೋಮಿನ ಜನರ ಸೇವೆಗೆ ದಕ್ಕೆ ಬಾರದಂತೆ ಆದಾಯ ಮೂಲ ಹೆಚ್ಚಿಸಿ ಮಠವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಮ್ಮಡಿಹಳ್ಳಿ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಗುಳೇದಗುಡ್ಡ ಮಠದ ಶ್ರೀ ಕಾಶಿನಾಥ ಸ್ವಾಮೀಜಿ, ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಆಲೂರು ಮಠದ ಶ್ರೀ ಶಿವಬಸವ ಸ್ವಾಮೀಜಿ, ಬೆಳ್ಳಾವಿ ಮಠದ ಶ್ರೀ ಕಾರದ ವೀರ ಬಸವ ಸ್ವಾಮೀಜಿ, ಗುಡ್ಡದ ಅನ್ವೇರಿ ಮಠದ ಶ್ರೀ ಶಿವಯೋಗಿಶ್ವರ ಸ್ವಾಮೀಜಿ, ಮುಂಡರಗಿ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಂಕಲಗಿ ಮಠದ ಶ್ರೀ ಅಮರ ಸಿದ್ದೇಶ್ವರ ಸ್ವಾಮೀಜಿ, ಶಿವಗಂಗೆ ಪೀಠದ ಶ್ರೀ ಜ್ಞಾನಾನಂದ ಪುರಿ ಸ್ವಾಮೀಜಿ, ತೆವಡೇಹಳ್ಳಿ ಮಠದ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಎಲ್ಲಾ ರಾಜಕೀಯ ಮುಖಂಡರು, ಹದಿನೆಂಟು ಕೋಮಿನ ಮುಖಂಡರು, ಸದಸ್ಯರು ಇದ್ದರು