ಗುಬ್ಬಿ | ಗೂಗಲ್ ಲೊಕೇಶನ್ ಬಳಸಿ ಕಳ್ಳತನ : ಖತರ್ನಾಕ್ ಕಳ್ಳರ ಬಂಧನ

Date:

Advertisements

ಗೂಗಲ್ ಲೊಕೇಶನ್ ಬಳಸಿ ನಿಯರೆಸ್ಟ್ ಟೆಂಪಲ್ ಫಾರ್ ಮಿ ಎಂದು ಸರ್ಚ್ ಮಾಡಿ ಹತ್ತಿರದ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಸಿ.ಎಸ್.ಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ನಡೆದಿದೆ.

ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ಕೊಡಗೇಹಳ್ಳಿ ಗ್ರಾಮದ ಕೋಡಿಕೆಂಪಮ್ಮ ದೇವಸ್ಥಾನದ ಬಾಗಿಲು ಬೀಗ ಮುರಿದು ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಲು ದೇವಸ್ಥಾನದ ಒಳಗೆ ಹೋಗಿ ಹುಂಡಿಯನ್ನು ಹೊರಗಡೆ ತಂದಾಗ ಗ್ರಾಮಸ್ಥರ ಕೂಗಾಟ ಕೇಳಿಸಿಕೊಂಡ ಕಳ್ಳರು ಹುಂಡಿಯನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ದೇವಸ್ಥಾನದ ಬಳಿ ಬಿಟ್ಟು ಓಡಿ ಹೋಗಿದ್ದ ಪ್ರಕರಣ ಭೇದಿಸಿದ್ದ ಸಿ.ಎಸ್.ಪುರ ಪೊಲೀಸರು ಖತರ್ನಾಕ್ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ.

ಬಂದಿತ ಆರೋಪಿಗಳನ್ನ ನರಸಿಂಹಮೂರ್ತಿ(21) ವರ್ಷ ಮತ್ತೊಬ್ಬ ನಾಗರಾಜು(18) ಎನ್ನಲಾಗಿದೆ. ಇಬ್ಬರು ವ್ಯಕ್ತಿಗಳ ವಿಳಾಸ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೋಕಿನ ಕಾರೆಹಳ್ಳಿ ಮಜರೇ ಬೊಮ್ಮನಹಳ್ಳಿ ಗ್ರಾಮ ಎಂದು ತಿಳಿದು ಬಂದಿದೆ. ಇಬ್ಬರ ತಂದೆಯ ಹೆಸರು ವಸಂತಕುಮಾರ್ ಎಂದು ಇದ್ದು ಇಬ್ಬರು ಸಹೋದರರು ಎನ್ನಲಾಗುತ್ತಿದೆ.

Advertisements

ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ಮೊದಲಿಗೆ ಕಳ್ಳತನಕ್ಕೆ ಬಳಸಿದ್ದ ಕೆಎ 02 ಎಡಿ 6543 ಎಂಬ ಕಾರಿನ ಮಾಲೀಕರ ವಿಳಾಸ ಸಂಗ್ರಹಿಸಿ ಪ್ರಕರಣ ಕೈಗೆತ್ತಿಕೊಂಡ ಇಬ್ಬರು ಆರೋಪಿಗಳನ್ನ ದಸ್ತಗಿರಿ ಮಾಡಿ ವಿಚಾರ ಮಾಡಲಾಗಿ ಆರೋಪಿತರು ಗೂಗಲ್ ಲೊಕೇಶನ್ ನಲ್ಲಿ ಟೆಂಪಲ್ ನಿಯರ್ ಫಾರ್ ಮಿ ಎಂದು ಸರ್ಚ್ ಮಾಡಿ ಊರುಗಳಿಂದ ಹೊರಗಡೆ ಒಂಟಿಯಾಗಿರುವ ಮತ್ತು ಭದ್ರತೆ ಇಲ್ಲದಿರುವ ಹುಂಡಿ ಹೊಡೆದರೆ ಅಲ್ಲಿ ಹಣ ಇದ್ದೇ ಇರುತ್ತೆ ಎಂದು ತಿಳಿದು ದೇವಸ್ಥಾನದ ಹುಂಡಿ ಹಣ ಮತ್ತು ದೇವರ ಒಡವೆಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಜೊತೆಗೆ ದೇವಸ್ಥಾನಗಳಲ್ಲಿ ಹುಂಡಿ ಕಳ್ಳತನ ಮಾಡಿದ್ದ ಹಣದಿಂದ ಮೇಲ್ಕಂಡ ಕೆಎ 02 ಎಡಿ 6543 ಎಂಬ ಟೊಯೋಟೊ ಇಟಿಯೋಸ್ ಕಾರನ್ನು ಖರೀದಿ ಮಾಡಿ ಕಳ್ಳತನಗಳಿಗೆ ಬಳಸುತ್ತಿದ್ದು ಎಂಬುದು ತಿಳಿಯುವುದರ ಜೊತೆಗೆ ಈ ಕಾರ್ಯಾಚರಣೆಯಿಂದ ಸಿ.ಎಸ್.ಪುರ ಪೊಲೀಸ್ ಠಾಣೆ ಸೇರಿದಂತೆ ಗುಬ್ಬಿ ಮತ್ತು ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಗಳಿಗೆ ಸೇರಿದ ಒಟ್ಟು ಎಂಟು ಪ್ರಕರಣಗಳನ್ನು ಭೇದಿಸುವಲ್ಲಿ ಸಿ.ಎಸ್.ಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿರಾ ಉಪ ವಿಭಾಗದ ಪೊಲೀಸ್ ಉಪಾಧೀಕ್ಷರಾದ ಬಿ.ಕೆ.ಶೇಖರ್ ಅವರ ಮಾರ್ಗಸೂಚನೆ ಮೇರೆಗೆ ಗುಬ್ಬಿ ವೃತ್ತದ ಸಿಪಿಐ ರಾಘವೇಂದ್ರ.ಟಿ.ಆರ್ ನೇತೃತ್ವದ ಸಿ.ಎಸ್ ಪುರ ಪಿಎಸ್ಐ ಶಿವಕುಮಾರ್ ತಂಡದಲ್ಲಿ ಸಿಬ್ಬಂದಿಗಳಾದ ಸಿದ್ದರಾಜು, ರಾಜು, ವಿಜಯಕುಮಾರ್,ಮತ್ತು ಭೀಮೇಶ್ ಎಂಬ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಪ್ರಶಂಸಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X