ಅಖಿಲ ಭಾರತ ವೀರಶೈವ ಮಹಾಸಭೆಯ ಗುಬ್ಬಿ ತಾಲ್ಲೂಕು ಘಟಕದಿಂದ ಶಿವಶರಣ ಹಾಗೂ ಶಿವಶರಣೆಯರಿಂದ ತಾಲ್ಲೂಕು ಮಟ್ಟದ ವಚನ ವಾಚನ ಸ್ಪರ್ಧೆಯನ್ನು ಇದೇ ತಿಂಗಳ 20 ರಂದು ಆಯೋಜಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪಟ್ಟಣದ ವಿವೇಕಾನಂದ ವಿದ್ಯಾಪೀಠ ಶಾಲೆಯಲ್ಲಿ ಜುಲೈ 20 ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಈ ವಾಚನ ಸ್ಪರ್ಧೆಯಲ್ಲಿ ಪ್ರತಿ ಸ್ಪರ್ಧಿಯು ಕನಿಷ್ಠ 25 ವಚನಗಳನ್ನು ಸುಶ್ರಾವ್ಯವಾಗಿ ಹಾಗೂ ನಿರರ್ಗಳವಾಗಿ ವಾಚನ ಮಾಡಬೇಕು. ವಾಚನ ಮಾಡುವ ವಚನವನ್ನು ಕೈಬರಹದಲ್ಲಿ ಒಂದು ಪ್ರತಿ ಹಾಗೂ ಜೆರಾಕ್ಸ್ ಎರಡು ಪ್ರತಿಯನ್ನು ತೀರ್ಪುಗಾರರಿಗೆ ನೀಡಬೇಕು ಎಂದು ತಿಳಿಸಿದ್ದಾರೆ.
ವಾಚನ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಆಯ್ಕೆಯಾದ ಮೂವರು ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 5 ಸಾವಿರ ನಗದು ಬಹುಮಾನ, ದ್ವಿತೀಯ ಸ್ಥಾನ ಗಳಿಸಿದವರಿಗೆ 3 ಸಾವಿರ ನಗದು ಬಹುಮಾನ ಹಾಗೂ ತೃತೀಯ ಸ್ಥಾನಕ್ಕೆ 2 ಸಾವಿರ ನಗದು ಬಹುಮಾನ ನೀಡಲಾಗುವುದು. ಭಾಗವಹಿಸಲು ಇಚ್ಚೆಯುಳ್ಳ ವಿದ್ಯಾರ್ಥಿಗಳು ಜುಲೈ 19 ರ ಸಂಜೆ 5 ಗಂಟೆಯೊಳಗೆ ಮೊಬೈಲ್ ಕರೆ ಮೂಲಕ ನೋಂದಾಯಿಸಿಕೊಳ್ಳಬಹುದು. ಸಂಪರ್ಕಿಸುವ ಮೊಬೈಲ್ ಸಂಖ್ಯೆ ಇಂತಿವೆ. ದಿವ್ಯಾಪ್ರಕಾಶ್ 7892199659, ಶಶಿಭೂಷಣ್ 9844277011, ಯತೀಶ್ 9008059322 ಹಾಗೂ ವಿಧೀಶ್ 9980609511.