ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯ ಓಂಕಾರ್ ವಲಯದ ದೇಶಿಪುರ ಕಾಲೋನಿಯಲ್ಲಿ ಹುಲಿ ದಾಳಿಗೆ ಸಿಲುಕಿ ಮೃತಪಟ್ಟ ಪುಟ್ಟಮ್ಮ ಎಂಬ ಮಹಿಳೆಯ ಕುಟುಂಬಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಎಂಇಐ ಸಂಸ್ಥೆಯ ಅಧ್ಯಕ್ಷ ಎಸ್ ಮನೋಹರ್ ₹50,000 ನಗದು ಧನ ಸಹಾಯ ನೀಡಿದರು.
ಈ ಸಂದರ್ಭದಲ್ಲಿ ಅವರು ಮೃತ ಪುಟ್ಟಮ್ಮನ ಮಕ್ಕಳ ವಿದ್ಯಾಭ್ಯಾಸಕ್ಕೆ ಮುಂದಿನ ದಿನಗಳಲ್ಲಿ ಸಂಪೂರ್ಣ ಸಹಾಯ ನೀಡುವುದಾಗಿ ಭರವಸೆ ನೀಡಿದರು. ಜೊತೆಗೆ ಗ್ರಾಮದಲ್ಲಿ ನೆರೆದಿದ್ದ ಇತರ ಮಕ್ಕಳಿಗೂ ಸಹ ಧನ ಸಹಾಯ ಹಾಗೂ ಸಿಹಿ ತಿನಿಸುಗಳನ್ನು ವಿತರಿಸಿದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ದೇಶಿಪುರ ಕಾಲೋನಿಯ ಶಾಲಾ ಮಕ್ಕಳಿಗೆ ಸಮವಸ್ತ್ರ, ಶಾಲೆಗೆ ಅಗತ್ಯವಿರುವ ಪೀಠೋಪಕರಣಗಳು ಮತ್ತು ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗಳನ್ನು ಕಲ್ಪಿಸುವ ಭರವಸೆಯನ್ನು ಕೂಡ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚಾಮರಾಜನಗರ | ದಲಿತ ಸಮುದಾಯದ ರೈತರ ಜಮೀನಿನಲ್ಲಿ ರಸ್ತೆ ನಿರ್ಮಾಣ; ತಹಶೀಲ್ದಾರ್ ನಡೆಗೆ ಖಂಡನೆ
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎ ಆನಂದ್, ಪುಟ್ಟರಾಜು ನವೀನ್ ಸುಂಕದಕಟ್ಟೆ, ಜಗದೀಶ್ ಪ್ರವೀಣ್ ರಾವ್, ಮಾಧವಹನೂರು, ಕಿರಣ್, ಅಭಿಲಾಷ್ ಹಾಗೂ ದೇಶಿಪುರ ಕಾಲೋನಿ ಗ್ರಾಮಸ್ಥರು ಉಪಸ್ಥಿತರಿದ್ದರು.
