ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಎನ್‌ಡಿಎ ಬೆಂಬಲಿತ ಹೊಸಹಳ್ಳಿ ಸುಧಾಕರ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ತಾಲ್ಲೂಕು ದಂಡಾಧಿಕಾರಿ ಅರವಿಂದ್ ಕಾರ್ಯನಿರ್ವಹಿಸಿದರು. ಈ ಹಿಂದೆ ಉಪಾಧ್ಯಕ್ಷರಾಗಿದ್ದ ರೂಪ ರಂಜೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಕಾರಣ ಸಾಮಾನ್ಯ ವರ್ಗದ ಉಪಾಧ್ಯಕ್ಷರ ಸ್ಥಾನ ಮಂಗಳವಾರ ನಡೆದ ಚುನಾವಣೆಯಲ್ಲಿ ಹೊಸಹಳ್ಳಿ ಹೆಚ್ ಆರ್ ಸುಧಾಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಪಘಾತ: ಸವಾರ ಗಂಭೀರ
ಈ ವೇಳೆ ಮಾಜಿ ಶಾಸಕರಾದ ಹೆಚ್ ಕೆ ಕುಮಾರಸ್ವಾಮಿ, ದೊಡ್ಡದಿಣ್ಣೆ ಸೋಮಶೇಖರ್, ವಳಲಹಳ್ಳಿ ಅಶ್ವತ್, ರಾಜೇಗೌಡ, ಹೆತ್ತೂರು ಹೋಬಳಿ ಶಕ್ತಿ ಕೇಂದ್ರ ಅಧ್ಯಕ್ಷರಾದ ರಾಜೇಗೌಡ, ನಾಗಭೂಷಣ್ ಹಾಗೂ ವಳಲಹಳ್ಳಿ ಬೆಳೆಗಾರರಿದ್ದರು.
