ಕಳೆದ ವಾರ ಯಲಬರ್ಗಾ ಸಂಗನಾಳ ಗ್ರಾಮದಲ್ಲಿ ದಲಿತ ವ್ಯಕ್ತಿಗೆ ಕ್ಷೌರ ಮಾಡಲು ನಿರಾಕರಿಸಿ ಕೊಲೆಗೈದ ಮುದಕಪ್ಪ ಹಡಪದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಎಸ್‌ಡಿಪಿಐ ಪ್ರತಿಭಟನೆ ನಡೆಸಿತು.
ಕನಕಗಿರಿ ತಾಲೂಕಿನ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಿಲ್ಲೆಯಾದ್ಯಂತ ಅಸ್ಪ್ರಶ್ಯತೆ, ಜಾತೀಯತೆ, ಕೋಮು ದ್ವೇಷ ಘಟನೆಗಳು ನಿರಂತರವಾಗಿ ಜರುಗುತ್ತಿವೆ. ಇಂತಹ ಘಟನೆಗಳು ನಡೆಯದಂತೆ ಕಡಿವಾಣ ಹಾಕಲು ಪೊಲೀಸರು ಜನರಿಗೆ ಕಾನೂನಿನ ಅರಿವು ಮೂಡಿಸಬೇಕುʼ ಎಂದು ಆಗ್ರಹಿಸಿದರು.
ʼಕ್ಷೌರ ಮಾಡಿಕೊಳ್ಳಲು ಹೋದ ದಲಿತ ಯುವಕನ ಜೊತೆ ಜಗಳ ತೆಗೆದು ಕ್ಷೌರ ಮಾಡಲು ನಿರಾಕರಿಸಿದಲ್ಲದೆ ಯುವಕನನ್ನು ಕೈಯಲ್ಲಿನ ಚಾಕುನಿಂದ ಹೊಟ್ಟೆಗೆ ಇರಿದು ಬರ್ಬದ ಹತ್ಯೆಗೈದ ಘಟನೆ ಜಾತಿಯತೆಯ ಕೌರ್ಯಕ್ಕೆ ತಾಜಾ ಉದಾಹರಣೆಯಾಗಿದೆ. ಕೂಡಲೇ ಸರ್ಕಾರ ಕೊಲೆಯಾದ ದಲಿತ ಯುವಕನ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕುʼ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರ ಸಮಿತಿಯ ಎಸ್‌ಡಿಪಿಐ ತಾಲೂಕಾಧ್ಯಕ್ಷ ಅಜ್ಮೀರ್ ಸಿಂಗ್ಹಾಳ್, ಉಪಾಧ್ಯಕ್ಷ ದಾವೂದ್, ಕಾರ್ಯದರ್ಶಿ ಇಮ್ರಾನ್ ಸೇರಿದಂತೆ ಪ್ರಮುಖರಾದ ಅಲ್ತಾಫ್, ದಸಂಸ ತಾಲೂಕು ಅಧ್ಯಕ್ಷ ಅಧ್ಯಕ್ಷ ಹನುಮೇಶ, ದಸಂಸ ಗಂಗಾವತಿ ಅಧ್ಯಕ್ಷ ಭಾಷಾ ಹಾಗೂ ಯೋಗಪ್ಪ ಆದಿಮನಿ, ರಮೇಶ್ ನಾಯಕ್ ಹುಲಿಹೈದರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.