ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಗಮನಕ್ಕೆ ಬಾರದಂತೆ ಬ್ಯಾಗ್‌ನಲ್ಲಿದ್ದ 4 ಲಕ್ಷ ರೂ. ಹಣವನ್ನು ಕದ್ದಿರುವ ಘಟನೆ ಹಗರೆ-ಹಾಸನ ಮಾರ್ಗದಲ್ಲಿ ಭಾನುವಾರ ನಡೆದಿದೆ.
ಬೇಲೂರು ತಾಲೂಕು ಮಾದಿಹಳ್ಳಿ ಹೋಬಳಿ ಕಲ್ಯಾಣಪುರದ ಎಂ.ಎಸ್ ನಳಿನ ಹಾಗೂ ರವಿಕುಮಾರ್ ದಂಪತಿ ಹಣ ಕಳೆದುಕೊಂಡವರು. ಮಹಾರಾಷ್ಟ್ರದಲ್ಲಿ ಕೆಲಸ ಮಾಡಿಕೊಂಡಿರುವ ದಂಪತಿ ಇತ್ತೀಚೆಗೆ ಊರಿಗೆ ಬಂದಿದ್ದರು.
ಕಳೆದ ಫೆ. 28 ರಂದು ಮಹಾರಾಷ್ಟ್ರದಿಂದ ಪತಿ ರವಿಕುಮಾರ್ ಅವರೊಂದಿಗೆ ಕಲ್ಯಾಣಪುರಕ್ಕೆ ಬಂದು, ಸೈಟ್ ಮಾರಾಟ ಮಾಡಿ 4 ಲಕ್ಷ ಹಣದೊಂದಿಗೆ ಬೆಂಗಳೂರಿಗೆ ಪ್ರಯಾಣ ಮಾಡಲು ಭಾನುವಾರ ಮಧ್ಯಾಹ್ನ 12.30 ರಲ್ಲಿ ಕಲ್ಯಾಣಪುರದಿಂದ ಖಾಸಗಿ ವಾಹನದಲ್ಲಿ ಹಗರೆಗೆ, ಅಲ್ಲಿಂದ ಹಾಸನಕ್ಕೆ ಕೆಎ-18-ಎಫ್-0894 ನಂಬರಿನ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ರಾಷ್ಟ್ರೀಯ ಹೆದ್ದಾರಿ 75ರ ಹಲವು ಕಾಮಗಾರಿ ಸ್ಥಳ ಪರಿಶೀಲಿಸಿದ ಸಂಸದ ಶ್ರೇಯಸ್ ಎಂ ಪಟೇಲ್
ಹಗರೆಯಿಂದ ಹಾಸನಕ್ಕೆ ಬರಲು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದು, ಹೊಸ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ಬ್ಯಾಗ್ ನೋಡಿಕೊಂಡಾಗ ಹಣ ಕಳುವಾಗಿರುವುದು ತಿಳಿದಿದೆ. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
