ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿರುವುದು ಖಂಡಿತಾ ನನಗೆ ಖುಷಿಯ ವಿಚಾರ ಎಂದು ಹಾಸನದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಹೇಳಿದ್ದಾರೆ.
ಕಲಾವಿದೆಯೊಬ್ಬರು ನೀಡಿದ ಬಾಗೀನ ಸ್ವೀಕರಿಸಿ, ಉದ್ಘಾಟನೆಗೆ ಸರ್ಕಾರ ಆಯ್ಕೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, “ನನ್ನ ಆಯ್ಕೆಯನ್ನು ನಾವು ಹಲವು ಪ್ರಭೇದಗಳಲ್ಲಿ ನೋಡಬಹುದು. ಕೆಲವರು ಚಾಮುಂಡೇಶ್ವರಿ ತಾಯಿ ಅಂತೀರಿ, ನಿಮ್ಮ ಭಾವವನ್ನು ಗೌರವಿಸುತ್ತೇನೆ. ಅನೇಕರು ಇದನ್ನ ನಾಡ ಹಬ್ಬ ಅಂತಾರೆ ಅದನ್ನೂ ಗೌರವಿಸುತ್ತೇನೆ. ನಾಡ ಹಬ್ಬ, ಚಾಮುಂಡೇಶ್ವರಿ ತಾಯಿ ಅಂತಾ ಪ್ರೀತಿ ಅಭಿಮಾನದಿಂದ ಕರೀತೀರಿ. ನಾಡಹಬ್ಬ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಹಾಗಾಗಿ ಇದು ನನಗೂ ಪ್ರಿಯವಾಗಿದೆ. ನಾನು ಗೌರವಿಸುವ ಹಬ್ಬವಾಗಿದೆ” ಎಂದರು.
“ಎಲ್ಲರ ಜೊತೆಗೆ ಪ್ರೀತಿಯಿಂದ ಭಾಗಿಯಾಗುವ ಹಬ್ಬವಾಗಿದ್ದು, ನಾನು ತಂದೆ ತಾಯಿ ಜೊತೆ ಹಲವು ಬಾರಿ ಜಂಬೂಸವಾರಿ ನೋಡಲು ಹೋಗ್ತಿದ್ದೆ. ಈಗ ಸ್ವತಃ ನನಗೇ ದಸರಾ ಉದ್ಘಾಟನೆಗೆ ಆಹ್ವಾನ ಬಂದಿದೆ. ಹಾಗಾಗಿ ನನಗೆ ಸಂತೋಷವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಾಸನ | ಆಯತಪ್ಪಿ ಹೊಳೆಗೆ ಬಿದ್ದು ರೈತ ದುರ್ಮರಣ