ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ವಕೀಲರ ಸಂಘದ ಕಚೇರಿಯಲ್ಲಿ, ಜೆ.ಎಂ.ಎಫ್.ಸಿ. ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ವಕೀಲರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಬುಧವಾರ ಆಯೋಜಿಸಲಾಯಿತು.
ಕಳೆದ ಮೂರು ವರ್ಷದ ಹಿಂದೆ ಬೆಂಗಳೂರಿನಿಂದ ಸಕಲೇಶಪುರಕ್ಕೆ ವರ್ಗಾವಣೆಗೊಂಡಿದ್ದ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಧನಲಕ್ಷ್ಮಿ ಅವರಿಗೆ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಗ್ರಾಮಾಂತರ ಮತ್ತು ಹಳ್ಳಿಗಳಿಂದ ನೊಂದು ಬಂದಂತಹ ಕಕ್ಷಿದಾರರಿಗೆ ರಾಜಿ ಸಂಧಾನದ ಮೂಲಕ ಅದಾಲತ್ ನಲ್ಲಿ ಸಾವಿರಾರು ಕೇಸುಗಳನ್ನು ಬಗೆ ಹರಿಸಿದ್ದಾರೆ. ಇವರ ಕರ್ತವ್ಯದ ಸಮಯದಲ್ಲಿ ಅಂಗನವಾಡಿ ,ತಾಲೂಕ್ ಪಂಚಾಯಿತಿ, ಶಾಲಾ ಕಾಲೇಜು, ಆಸ್ಪತ್ರೆಗಳು, ಬಂಧಿ ಖಾನೆ, ಸಮಾಜ ಕಲ್ಯಾಣ ಇಲಾಖೆ, ಹಾಗೂ ಗ್ರಾಮ ಪಂಚಾಯಿತಿ, ಮುಂತಾದ ಕಡೆಗಳಲ್ಲಿ ಅತಿ ಹೆಚ್ಚು ಕಾನೂನು ಮಾಹಿತಿ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ ಎಂದು ವಕೀಲರ ಸಂಘದ ಮುಖ್ಯಸ್ಥರು ಮಾತಾಡಿದರು.
ಇದನ್ನೂ ಓದಿದ್ದೀರಾ?ಹಾಸನ l ಕಾಡೆಮ್ಮೆಗಳ ಹಾವಳಿ: ಬೆಳೆ ನಾಶ ರೈತರಲ್ಲಿ ಆತಂಕ
ಈ ವೇಳೆ ನ್ಯಾಯಾಧೀಶರು ಮಾತನಾಡಿ “ಇಲ್ಲಿನ ವಕೀಲರು ನ್ಯಾಯದಾನ ಮಾಡುವ ಸಮಯದಲ್ಲಿ ತಮಗೆ ಸಹಕರಿಸಿದ ರೀತಿಯನ್ನು ಕಂಡು ಎಲ್ಲರೂ ನನ್ನನ್ನು ಕುಟುಂಬದ ಸದಸ್ಯರಂತೆ ಕಂಡರೂ ಎಂದು ಸ್ಮರಿಸಿದರು” ಎಂದು ತಿಳಿಸಿದರು. ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಅಪರ ಸರ್ಕಾರಿ ವಕೀಲರು, ಹಿರಿಯ ಮತ್ತು ಕಿರಿಯ ವಕೀಲರು ನ್ಯಾಯಾಂಗ ಇಲಾಖೆಯ ನೌಕರರು ಹಾಗೂ ಇನ್ನಿತರರಿದ್ದರು.