ಬೆಂಗಳೂರು ಹಾಗೂ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಎನ್‌ಎಚ್75ನ ಸಕಲೇಶಪುರ ತಾಲೂಕು ಆನೆಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಮಹಲ್ ಗ್ರಾಮದಲ್ಲಿ ಭಾರತ್ ಒನ್ ಜನಸೇವಾ ಸಂಪರ್ಕ ಕೇಂದ್ರವನ್ನು ನಿರ್ಮಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜುನಾಥ್ ತಿಳಿಸಿದರು.
“ಆನೆಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇವಾ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು. ಈ ಸೇವಾ ಕೇಂದ್ರದಿಂದ ಸುತ್ತಮುತ್ತಲಿನ 4 ಪಂಚಾಯಿತಿಗಳಾದ ಕ್ಯಾಮನಳ್ಳಿ, ಕ್ಯಾನಳ್ಳಿ, ಹೆಬ್ಬಸಾಲೆ ಹಾಗೂ ಬ್ಯಾಕರವಳ್ಳಿ ವ್ಯಾಪ್ತಿಯ ಜನರಿಗೆ ಅನುಕೂಲವಾಗಲಿದೆ” ಎಂದು ಹೇಳಿದರು.
“ಭಾರತ್ ಒನ್ ಜನಸಂಪರ್ಕ ಸೇವಾ ಕೇಂದ್ರ ಮಾಡಿರುವುದರಿಂದ ರೈತರಿಗೆ ಬೇಕಾಗುವ ಕೃಷಿಗೆ ಸಂಬಂಧಪಟ್ಟ ಸಲಕರಣೆಗಳು, ಎಲ್ಲ ರೀತಿಯ ಸಬ್ಸಿಡಿಯ ಉಪಕರಣಗಳು, ಆನ್‌ಲೈನ್ ಸೇವೆಗಳಾದಂತಹ ಪಹಣಿ, ಅರ್‌ಟಿಸಿ ಸರ್ವಿಸ್ ಪರ್ಸನಲ್ ಲೋನ್ಸ್, ಹಲವು ರೀತಿಯ ಉದ್ದಿಮೆದಾರರಿಗೆ ಸಿಗಬೇಕಾದಂತ ಹಣಕಾಸು ಸಹಾಯದ ಅರ್ಜಿಗಳು, ಜನರಿಗೆ ಬೇಕಾದ ಹೆಲ್ತ್ ಕಾರ್ಡ್‌ಗಳು ಹೀಗೆ ಹಲವು ರೀತಿಯಲ್ಲಿ ಉಪಯೋಗವಾಗುತ್ತದೆ” ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಾಡುಕೋಣ ದಾಳಿ: ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯ
“ನಮ್ಮ ಈ ಭಾರತ್ ಒನ್ ಜನಸಂಪರ್ಕ ಸೇವೆಯನ್ನು ಒದಗಿಸಲಾಗಿದೆ. ಸುತ್ತಮುತ್ತಲಿನ ಎಲ್ಲ ಗ್ರಾಮಸ್ಥರು ಇದರ ಸದುಪಯೋಗಗಳನ್ನು ಪಡೆದುಕೊಳ್ಳಬೇಕು” ಎಂದು ನಾಗೇಶ್ ಎಂ ಎಚ್ ಮಾಗೇರಿ ತಿಳಿಸಿದರು.
ಈ ವೇಳೆ ತಾಲೂಕು ಒನ್ ಅಧಿಕಾರಿ, ಭಾರತ್ ಒನ್ ಜನಸಂಪರ್ಕ ಕೇಂದ್ರದ ಸಂಪರ್ಕ ಅಧಿಕಾರಿಗಳು, ಜಾನಕೆರೆ ಲೋಕೇಶ್ ಮತ್ತು ಗ್ರಾಮಸ್ಥರು ಇದರು.
