ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೀನಾಕ್ಷಿ ಗಿರಿರಾಜ್ ಟ್ರಸ್ಟ್ ಚನ್ನರಾಯಪಟ್ಟಣ ಹಾಗೂ ಮನುಜ ಮತ ವೇದಿಕೆಯಿಂದ ಹೊನ್ನಾಶೆಟ್ಟಿ ಗಿರಿರಾಜ್ ಅವರ ಭುವನ ಭಾಗ್ಯ ಕಾದಂಬರಿ ಲೋಕಾರ್ಪಣೆ ಮತ್ತು ಹೊನ್ನಾವರ ಪುಟ್ಟರಾಜು ಹೆಚ್ ಎಲ್ ಇವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಡಿ. ವೈ ಎಸ್ ಪಿ ರವಿ ಪ್ರಸಾದ್ ಮಾತನಾಡಿ, ವಿದ್ಯಾಭ್ಯಾಸ ಹಾಗೂ ಜೀವನವನ್ನು ಯಾವ ರೀತಿಯಲ್ಲಿ ನಿರ್ವಹಿಸಿಕೊಳ್ಳಬೇಕು ಎಂಬುದನ್ನು ಕಲಿಯಬೇಕು. ಮಕ್ಕಳು ಓದುವ ಕಡೆ ಆಸಕ್ತಿ ಕೊಟ್ಟು ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಬೇಕು” ಎಂದು ತಿಳಿಸಿದರು.

ಸಾಹಿತಿ, ನಾಟಕಗಾರ, ಕವಿ, ಕಾದಂಬರಿಕಾರರಾದ ಗಿರಿರಾಜ್ ಹೊನ್ನಾಶೆಟ್ಟಿ ಮಾತನಾಡಿ, ಹಲವಾರು ಪುಸ್ತಕಗಳನ್ನು ಬರೆದಿದ್ದೇನೆ. ಭುವನ ಭಾಗ್ಯ ಎಂಬ ಕಾದಂಬರಿಯಲ್ಲಿ ಇವತ್ತಿನ ದಿನದಲ್ಲಿ ತಿಳಿದುಕೊಳ್ಳಬೇಕಾದ ಮಾಹಿತಿಯನ್ನು ಓದುವ ಮಕ್ಕಳು ಆಲಿಸಿ ಅವರು ಕೂಡ ಬರವಣಿಗೆ ಶೈಲಿ ವೃದ್ಧಿಸಬೇಕು” ಎಂದು ಹೇಳಿದರು.
ಶಾಸಕ ಪ್ರೊ.ಗಂಗೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ ಸಿ ಜಿ ಯತೀಶ್ವರ್, ಹೆಚ್. ಎಲ್ ಪುಟ್ಟರಾಜು, ದಿನೇಶ್, ಈ ದಿನ.ಕಾಮ್ ವರದಿಗಾರ್ತಿ ಗಿರಿಜಾ ಎಸ್.ಜಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಸ್ಥಳೀಯರು ಉಪಸ್ಥಿತರಿದ್ದರು.

