ಹಾಸನ ಚಲೋ | ಪ್ರಜ್ವಲ್ ಗೆದ್ದರೂ- ಸೋತರೂ ಆತನನ್ನು ಒಪ್ಪಿಕೊಳ್ಳಬೇಡಿ: ಹೋರಾಟಗಾರ್ತಿ ಕೆ ನೀಲಾ

Date:

Advertisements

ಬಿಜೆಪಿಗರು ರಾಮಾಯಣ-ಮಹಾಭಾರತ ನಮ್ಮವು ಅಂತ ಹೇಳಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಮಹಾಭಾರತದ ದ್ರೌಪದಿ ಕತೆಯನ್ನೊಮ್ಮೆ ನೆನಪು ಮಾಡುತ್ತೇನೆ ಎಂದು ಹೋರಾಟಗಾರ್ತಿ ಕೆ ನೀಲಾ ಅವರು ಆರೋಪಿ ಪ್ರಜ್ವಲ್‌ ವಿರುದ್ಧ ಸಿಡಿದರು.

ಪ್ರಜ್ವಲ್‌ ಲೈಂಗಿಕ ಪ್ರಕರಣ ಖಂಡಿಸಿ ನಡೆದ ಹಾಸನ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕೌರವರು ಆಕೆಯ ವಸ್ತ್ರವನ್ನು ಎಳೆದಾಗ ಆಕೆಯ ಐವರು ಗಂಡಂದಿರು ಸಹಾಯಕ್ಕೆ ಬರುವುದಿಲ್ಲ. ಆಕೆ ಪ್ರತಿಜ್ಞೆ ಮಾಡಿದಂತೆ ದುಶ್ಯಾಸನನ ತೊಡೆ ಸೀಳಿ ಆ ರಕ್ತದಿಂದ ಮುಡಿಕಟ್ಟಿದಳು. ಹಾಗಾಗಿ ಪ್ರಜ್ವಲ್‌ ರೇವಣ್ಣ ನೀನು ನನ್ನ ಮೊಮ್ಮಗನ ವಯಸ್ಸಿನವನು. ಜೂನ್‌ 4ರ ನಂತರ ಗೆದ್ದುಬಿಡಬಹುದೆಂಬ ಅಹಂಕಾರ ನಿನಗಿದ್ದರೆ ಎಚ್ಚರಿಕೆ, ನಿನ್ನ ಅಟ್ಟಹಾಸಕ್ಕೆ ಕೊನೆಯಿದೆ” ಎಂದು ಗುಡುಗಿದರು.

“ಹಾನಸದ ಜನತೆಯೇ ನಿಮ್ಮಲ್ಲಿ ವಿನಂತಿ, ಪ್ರಜ್ವಲ್ ಗೆದ್ದರೂ- ಸೋತರೂ ಆತನನ್ನು ಒಪ್ಪಿಕೊಳ್ಳಬೇಡಿ. ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವನನ್ನು ಎಂಪಿ ಮಾಡಿದಿರಿ. ಅದರ ಪರಿಣಾಮವೇ ಹಾಸನದ ಹೆಣ್ಣುಮಕ್ಕಳನ್ನು ಶೋಷಣೆ ಮಾಡುವಂತಾಯಿತು. ಇಡೀ ಕರ್ನಾಟಕದ ಜನವೇ ಹಾಸನಕ್ಕೆ ಬರುವಂತಾಗಿದೆ” ಎಂದು ಹೇಳಿದರು.

Advertisements

“ಮಹಿಳೆಯ ದೇಹದ ಮೇಲೆ ರಾಜಕಾರಣ ಸಲ್ಲದು. ಈ ಹೋರಾಟಕ್ಕೆ ಇನ್ನೂ ತೀವ್ರತೆ ಬರಬೇಕು. ಮನುವಾದದ ಒಳಗೆ ಹೋಗದಂತೆ ಜನಚಳುವಳಿಯನ್ನು ಬೆಂಬಲಿಸೋಣ” ಎಂದು ಹೇಳಿದರು.

“ಜನತಾ ನ್ಯಾಯಾಲಯದಲ್ಲಿ ನಾವು ಗೆಲ್ಲುತ್ತೇವೆ. ಜನತಾ ನ್ಯಾಯಾಲಯವೇ ನಮ್ಮ ಮುಖ್ಯ ಕೋರ್ಟ್. ಇವತ್ತಿನ ವೇದಿಕೆಯೇ ನಮ್ಮ ಕೋರ್ಟ್. ಮೀಸೆ ಹೊತ್ತ ಗಂಡಸರಿಗೆ ಸಾವಿನ ಕದ ತಟ್ಟಿ ಜನ್ಮ ಕೊಟ್ಟಿದ್ದೇವೆ. ಅವರು ತಪ್ಪು ಮಾಡಿದಾಗ ಕಪಾಳಕ್ಕೆ ಹೊಡೆದು ಶಿಕ್ಷಿಸುವ ಅಧಿಕಾರ ನಮಗಿದೆ” ಎಂದರು.

“ಹೆಣ್ಣುಮಕ್ಕಳನ್ನು ಅಸಹಾಯಕತೆಯ ಖೆಡ್ಡಾಗೆ ತೋಡಿ, ವಿಡಿಯೋ ಮಾಡಿ, ಅವರ ಘನತೆಯನ್ನು ಉಲ್ಲಂಘಿಸಲಾಗಿದೆ. ಪ್ರಧಾನಿ ನಾನು ಜೈವಿಕವಾಗಿ ಬಂದಿಲ್ಲ, ದೇವರು ಕಳಿಸಿದ್ದಾನೆ ಎನ್ನುತ್ತಾರೆ. ಆದರೆ, ಈಗ ಹೇಳುತ್ತಿದ್ದೇನೆ ಈ ದೇಶದ ಪ್ರಧಾನಿ ತಾಯಿದ್ರೋಹಿ. ರಕ್ತ ಸುರಿಸಿ ಜನ್ಮ ಕೊಡುವವಳನ್ನು ಪೆನ್‌ಡ್ರೈವ್‌ನಲ್ಲಿ ನೋಡಿದ್ದೇವೆಂದು ಹೇಳುತ್ತೀರಿ, ನಾಚಿಕೆಯಾಗಬೇಕು. ವಿಡಿಯೋ ಮಾಡಿದ ಪ್ರಜ್ವಲ್, ಪೆನ್‌ಡ್ರೈವ್‌ ಹಂಚಿದವರು ಮತ್ತು ಜಿಲ್ಲಾಡಳಿತವನ್ನು ಪ್ರಶ್ನಿಸಬೇಕಿದೆ. ಪ್ರಸಾರವಾಗುವುದಕ್ಕೆ ಬಿಡಬೇಡಿರೆಂದು ಮನವಿ ಮಾಡಿದರೂ ಕ್ರಮವಹಿಸಲಿಲ್ಲ. ಹಾಸನದ ಡಿಸಿ, ಎಸ್‌ಪಿ ನೀವುಗಳು ಮಹಿಳೆಯರಾಗಿದ್ದುಕೊಂಡು ನೀವೂ ಕೂಡ ತಪ್ಪು ಮಾಡಿದ್ದೀರಿ. ನೀವೂ ತಪ್ಪಿತಸ್ಥರೆ. ಆ ವಿಡಿಯೋಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುವುದನ್ನು ತಡೆಯುವುದರಲ್ಲಿ ನೀವುಗಳು ವಿಫಲವಾಗಿದ್ದೀರಿ” ಎಂದು ಜಿಲ್ಲಾಡಳಿತವನ್ನು ದೂರಿದರು.

“ಸಂತ್ರಸ್ತ ಮಹಿಳೆ ಅನ್ನಬೇಡಿ, ಆ ಪದವನ್ನು ಕಿತ್ತು ಬಿಸಾಕಿ. ತೊಂದರೆಗೆ ಒಳಗಾದ ಮಹಿಳೆಯರ ಜತೆಗೆ ನಾವಿದ್ದೇವೆಂದು ಹೇಳುವುದಕ್ಕೆ ಇವತ್ತು ನಾವಿಲ್ಲಿ ಬಂದಿದ್ದೇವೆ. ಈ ಸರ್ಕಾರ ಮಹಿಳೆಯರನ್ನು ರಕ್ಷಿಸಬೇಕು. ಅವರ ಬದುಕನ್ನು ರಕ್ಷಿಸಲು ಮುಂದಾಗಿ ಅಂತ ಕೇಳಿದರೆ ಸಿದ್ದರಾಮಯ್ಯ ಅವರೇ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿರಿ, ಜವಾಬ್ದಾರಿ ವಂಚಿತರಾದಿರಿ” ಎಂದು ಕಿಡಿಕಾರಿದರು.

“ಬಿಜೆಪಿಯವರೇ, ನೇಹಾ ಪ್ರಕರಣಕ್ಕೆ ಕೋಮು ಬಣ್ಣ ಬಳಿದಿರಿ. ಹಾನಸಕ್ಕೆ ಬಂದು ಅತ್ಯಾಚಾರಿ ಪ್ರಜ್ವಲನಿಗೆ ವೋಟ್‌ ಹಾಕಿ ಅಂತ ಕೇಳಿದಿರಿ, ಪ್ರಧಾನಿ ಮೋದಿ, ಶೋಭಕ್ಕ, ಅಮಿತ್ ಶಾ ಎಲ್ಲರೂ ಎಲ್ಲಿದ್ದೀರಿ. ಹಾನಸಕ್ಕೆ ಕಾಂಗ್ರೆಸ್, ಬಿಜೆಪಿ- ಜೆಡಿಎಸ್ ಮೂರು ಪಕ್ಷದವರು ಯಾರೂ ಒಳ್ಳೆಯದನ್ನು ಮಾಡಿಲ್ಲ. ಹಾಸನದ ಜನತೆಯ ಬದುಕಲ್ಲಿ ಆಟ ಆಡಿದ್ದಾರೆ” ಎಂದು ನುಡಿದರು.

“ಪ್ರಜ್ವಲ್ ದೇವಲಾಪುರದ ಅರಣ್ಯದಲ್ಲಿ ಪ್ರಾಣಿಗಳನ್ನು ಭೇಟೆಯಾಡುತ್ತಾನೆ. ಜಿಂಕೆ, ಚೀತಾಗಳನ್ನು ಬೇಟಿಯಾಡುತ್ತಿರಲಿಲ್ಲವಾ? ಇದು ಈ ಜಿಲ್ಲೆಯ ಅಧಿಕಾರಿಗಳಿಗೆ ಗೊತ್ತಿರಲಿಲ್ಲವಾ? ಈಗ ನಾನು ಅವನು ಬೇಟೆಯಾಡುತ್ತಿದ್ದ ಬಗ್ಗೆ ಹೇಳಿದ್ದೇನೆ. ಡಿಸಿ-ಎಸ್‌ಪಿ ತಾಕತ್ತಿದ್ದರೆ ತನಿಖೆ ಮಾಡಿ” ಎಂದು ಸವಾಲು ಹಾಕಿದರು.

“ರೇವಣ್ಣನ ಅಸ್ಪೃಶ್ಯತೆ ಒಪ್ಪಬೇಡಿ, ರೇವಣ್ಣ ನೀವು ನಡೆಸಿರುವ ಅಸ್ಪೃಶ್ಯತೆಯ ಕರಾಳ ಮುಖವನ್ನು ಬಿಚ್ಚಿಡುತ್ತೇವೆ. ಇದು ಪ್ರಭುತ್ವದ ಕಾಲ. ಹಾಸನದಲ್ಲಿ ಹಾಸನದ ಜನತೆಯೇ ಪ್ರಭುಗಳು. ಹಾಸನದ ಜನತೆ ಯಾರದೇ ಪಾಳೇಗಾರಿಕೆಗೆ ಹೆದರಿ ಕೂರುವಂತಿಲ್ಲ. ಪಾಳೆಗಾರಿಕೆ ನಡೆಸಲು ಮುಂದಾದರೆ ಹೆದರದಿರಿ, ಬಾವುಟ ಹಿಡಿದು ಬೀದಿಗೆ ಇಳಿಯಿರಿ. ಪಾಳೆಗಾರಿಕೆಯ ಅಟ್ಟಹಾಸ ಮಟ್ಟಹಾಕಿ, ಪ್ರಜಾಪ್ರಭುತ್ವವನ್ನು ಮೆಟ್ಟಿನಿಲ್ಲಿ” ಎಂದು ಸಲಹೆ ನೀಡಿದರು.

“ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಒಡೆದರು ಬಿಜೆಪಿಗರು. ಈ ಪ್ರಕರಣದ ಮೂಲಕ ಹಾಸನದ ಗಂಡಸರು ಹೆಣ್ಣನ್ನು ಒಂಟಿಯಾಗಿ ಆಚೆ ಹೋಗದಂತೆ ಕಟ್ಟಿಹಾಕಲು ದಾರಿಮಾಡಿದ್ದೀರಿ. ಮನಸ್ಮೃತಿಯ ಅಣತಿಯನ್ನು, ಮಹಿಳೆಯರನ್ನು ಕಟ್ಟಿಹಾಕುವ ಕೆಲಸಕ್ಕೆ ಅವಕಾಶಮಾಡಿಕೊಟ್ಟಿದ್ದೀರಿ ಬಿಜೆಪಿಯವರೇ.
ಇನ್ನು ಎರಡನೆಯದಾಗಿ, ದೇವೇಗೌಡ ಹಾಗೂ ರೇವಣ್ಣ, ಕುಮಾರಸ್ವಾಮಿಯವರೇ ನಿಮ್ಮ ಮನೆಯ ಮಗನನ್ನು ಬೆಂಬಲಿಸಿ ಆ ಮೂಲಕ ಒಂದು ಪ್ರಾದೇಶಿಕ ಪಕ್ಷವನ್ನೇ ನಾಶ ಮಾಡಿದ್ದಾರೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಪ್ರಕರಣ | ಹಾಸನ ಚಲೋ; ವಿಕೃತ ಕಾಮಿ ಪ್ರಜ್ವಲ್ ಬಂಧನಕ್ಕೆ ಮೊಳಗಿದ ಘೋಷಣೆ

“ಹಾಸನದ ಮಹಿಳೆಯರ ಕಣ್ಣೀರ ಹನಿಗಳನ್ನು ಬಾವುಟವಾಗಿಸಿ ರಾಜ್ಯಾದ್ಯಂತ ಹೋರಾಟ ಮಾಡೋಣ. ಸ್ವಾಭಿಮಾನದ, ಮಹಿಳಾ ಅಸ್ಮಿತೆಯ ಚಳುವಳಿಯನ್ನು ಕಟ್ಟೋಣ, ಅಂಜಬೇಡಿ ನಿಮ್ಮೊಂದಿಗೆ ನಾವಿದ್ದೇವೆ” ಎಂದು ಉದ್ಘರಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X