ಕೋರ್ಟ್ ವಿಚಾರಣೆಗೆ ಆಗಮಿಸುತ್ತಿದ್ದವರ ಮೇಲೆ ಸಿನೀಮಿಯ ಶೈಲಿಯಲ್ಲಿ ನಡೆದ ದಾಳಿ, ಹಲ್ಲೆಯಿಂದ ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಕೋರ್ಟ್ ಎದುರಿನ ರಸ್ತೆಯಲ್ಲಿ ಕಂಡುಬಂದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಪಟ್ಟಣದ ಕೋರ್ಟ್ ಎದುರಿನ ರಸ್ತೆಯಲ್ಲಿ ವಿಚಾರಣೆಗೆ ಹಾಜರಾಗಲು ಆಗಮಿಸುತ್ತಿದ್ದ ಕುಟುಂಬವೊಂದರ ಮೇಲೆ ಸಿನೀಮಿಯ ಶೈಲಿಯಲ್ಲಿ ದಾಳಿ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿ ಗ್ರಾಮದ ಕುಟುಂಬವು ಕೌಟುಂಬಿಕ ಕಲಹದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ದಿನೇಶ್ ಎಂಬಾತನಿಂದ ಹಲ್ಲೆ ನಡೆದಿದೆ ಎಂಬ ಆರೋಪ ವ್ಯಕ್ತವಾಗಿದೆ.
ಈ ಸುದ್ದಿ ಓದಿದ್ದೀರಾ? ಚಳ್ಳಕೆರೆ | ಕುವೆಂಪು ನಾಡು ನುಡಿಯ ಪ್ರತಿಪಾದಕರಾಗಿ ನಮಗೆ ಬಹಳ ಮುಖ್ಯರಾಗಿದ್ದಾರೆ: ತಾರಿಣಿ ಶುಭದಾಯಿನಿ
ಅನೇಕ ಅಪರಿಚಿತ ಕೀಡಿಗೇಡಿಗಳ ಗುಂಪು ಕುಟುಂಬದ ಮೇಲೆ ದಾಳಿ ಮಾಡಿದ್ದು, ಈ ವೇಳೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.