ಹಾಸನ | ಮೇ 20ರಂದು ದೇಶವ್ಯಾಪಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ; ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮೀ ಕರೆ

Date:

Advertisements

ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಗಳ ಜಂಟಿ ಸಮಿತಿ(ಜೆಸಿಟಿಯು) ನೇತೃತ್ವದಲ್ಲಿ ಭಾರತದ ಕಾರ್ಮಿಕರು ಮತ್ತೊಮ್ಮೆ ಮೇ 20ರಂದು ದೇಶವ್ಯಾಪಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ತಯಾರಾಗುತ್ತಿದ್ದಾರೆ. ಈ ಮುಷ್ಕರ ಬಹಳ ಪ್ರಾಮುಖ್ಯತೆ ಪಡೆದಿದೆ. ಅವತ್ತು ಇಡೀ ದೇಶದ ಕಾರ್ಮಿಕರು ತಮ್ಮ ಕೆಲಸ ನಿಲ್ಲಿಸುತ್ತಾರೆ ಎಂದು ಸಿಐಟಿಯುನ ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮೀ ತಿಳಿಸಿದ್ದಾರೆ.

ಮೇ 20ರಂದು ಕಾರ್ಮಿಕರ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರದ ಕುರಿತು ಹಾಸನ ನಗರದ ಆರ್ ಸಿ ರಸ್ತೆಯ ಶ್ರಮ ಕಚೇರಿಯಲ್ಲಿ ಸಿಐಟಿಯು ಜಿಲ್ಲಾ ಸಮಿತಿಯಿಂದ ನಡೆದ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದರು.

“ರೈತರು ಕೃಷಿ ಕೂಲಿ ಕಾರ್ಮಿಕರು ವಿದ್ಯಾರ್ಥಿ ಯುವಜನರು, ಮಹಿಳೆಯರು ಬೀದಿಗೆ ಇಳಿಯುತ್ತಿದ್ದಾರೆ. ಈ ಮುಷ್ಕರಕ್ಕೆ ಕಾರಣವೇನೆಂದರೆ ಈ ದೇಶದ ಸಂಪತ್ತನ್ನು ಸೃಷ್ಠಿ ಮಾಡುವ ಶ್ರಮಿಕರು ಅಂದರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು, ಅಸಂಘಟಿತ ಕ್ಷೇತ್ರದಲ್ಲಿ ಬರುವ ಕಾರ್ಮಿಕರು, ಸ್ಕೀಮ್ ನೌಕರರು, ಮಹಿಳೆಯರು ಮತ್ತು ಸ್ವಯಂ ಉದ್ಯೋಗಿಗಳು, ಮನೆಯಲ್ಲಿ ಕುಳಿತು ಬೀಡಿ ಕಟ್ಟುವವರು ಮತ್ತು ತೋಟದ ಕಾರ್ಮಿಕರು, ಹಮಾಲಿ ಕಾರ್ಮಿಕರು ಹೀಗೆ ವಿವಿಧ ಸ್ಥರದಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರೂ ಕೂಡ ಅಂದು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ” ಎಂದು ಹೇಳಿದರು.

Advertisements

“ಕಾರ್ಮಿಕರ ಆಕ್ರೋಶಕ್ಕೆ ಒಂದು ಪೂರಕವಾಗಿ ರೈತರೂ ಕೂಡ ತಮ್ಮ ಭೂಮಿಯನ್ನು ಕಳೆದುಕೊಂಡವರು ಬೆಳೆಗಳಿಗೆ ಬೆಂಬಲ ಸಿಗದವರು, ಮನರೇರಾ ಕೆಲಸಗಾರರು ಮುಷ್ಕರಕ್ಕೆ ಬರುತ್ತಿದ್ದಾರೆ. ಏಕೆಂದರೆ ಮೋದಿ ಸರ್ಕಾರ ಇಂದು ಹಿಂದೂ ಹಿಂದೂ ಎಂದು ಹೇಳುತ್ತಿದ್ದಾರೆ. ಹಿಂದೂಗಳು ಇದೇ ಶ್ರಮಿಕರು ಕಾರ್ಮಿಕರಾಗಿದ್ದಾರೆ. ಅದೇ ಶ್ರಮಿಕರ ಪರವಾಗಿರುವ ಕಾನೂನುಗಳನ್ನು ಬಂಡವಾಳಗಾರರ ಪರವಾಗಿ ಬದಲಾಯಿಸಿ 4 ಸಂಹಿತೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ನಮ್ಮ ದೇಶದ 29 ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳಾಗಿ ಬದಲಾಯಿಸಿದ್ದಾರೆ, ಅದರಲ್ಲಿ ವೇತನ ಸಂಹಿತೆಯೆಂದು ಕರೆಯುತ್ತಾರೆ” ಎಂದರು.

“ನಾವು ಎಲ್ಲ ಕೇಂದ್ರ ಕಾರ್ಮಿಕ ಸಂಘಟೆನೆಗಳು ಸಿಐಟಿಯು ಪ್ರತಿಪಾದನೆ ಮಾಡುತ್ತಿರುವುದು ಏನೆಂದರೆ, ನಮ್ಮ ದೇಶದಲ್ಲಿ 100ಕ್ಕೆ 80ರಷ್ಟು ಜನ ಯಾವುದೇ ಕಾನೂನು ವ್ಯಾಪ್ತಿಗೆ ಬರದೆ ಇರುವವರಿಗೆ ಕನಿಷ್ಠ ವೇತನ ಖಾತ್ರಿಪಡಿಸಬೇಕು. ದಿನಕ್ಕೆ 7ನೇ ವೇತನ ಆಯೋಗ ನಿಗದಿಪಡಿಸಿರುವ ₹600 ವೇಜಸ್‌ ಕೊಡಬೇಕೆಂದು ಆಗ್ರಹಿಸುತ್ತೇವೆ. ಅದಕ್ಕೆ ಬೇಕಾದ ಕಾನೂನುಗಳನ್ನು ತರಬೇಕೆಂದು ಹೇಳುತ್ತಿದ್ದೇವೆ. ಆದರೆ ಈ ಕೇಂದ್ರ ಸರ್ಕಾರ ಕನಿಷ್ಠ ವೇತನವನ್ನು ಕೂಡ ಜಾರಿ ಮಾಡದೆ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಬಂಡವಾಳಶಾಹಿಗಳು ಹೇಳುವ ಹಾಗೆ ದಿನಕ್ಕೆ ₹177 ಕೊಡಬೇಕೆಂದು ಹೇಳುತ್ತಿದ್ದಾರೆ. ಈ ವೇಜ್ ಕೋಡ್‌ನಲ್ಲಿ ಬೋನಸ್ ಗ್ರಾಜುಟಿ ಎಲ್ಲವೂ ಸಡಿಲವಾಗುತ್ತಿದೆ, ಇದರಿಂದ ದೇಶದಲ್ಲಿ ಇನ್ಮುಂದೆ ವೇತನ ಹೆಚ್ಚಾಗುವುದಿಲ್ಲ. ಇದಕ್ಕೆ ದೊಡ್ಡ ಪೆಟ್ಟುಬಿದ್ದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಇನ್ನೊಂದು ಗಂಭೀರ ವಿಷಯವೇನೆಂದರೆ ಸಂಘಗಳನ್ನು ಕಟ್ಟಿಕೊಳ್ಳುವ ಹಕ್ಕಿತ್ತು. 1926 ಆಕ್ಟ್‌ನಲ್ಲಿ ಹಲವಾರು ಬದಲಾವಣೆ ತಂದು ಮುಂದೆ ಯಾರೂ ಸಂಘಗಳನ್ನು ಕಟ್ಟದ ಹಾಗೆ ಕಾನೂನುಗಳನ್ನು ತಂದಿರುತ್ತಾರೆ. ಇದರ ಸಂಬಂಧ ಇನ್ಮುಂದೆ ನಮ್ಮ ದೇಶದ 30 ಕೋಟಿಗೂ ಹೆಚ್ಚು ಕಾರ್ಮಿಕರು ಯಾವುದೇ ಸಂಘಗಳನ್ನು ಕಟ್ಟಿಕೊಳ್ಳದೆ ಪ್ರಶ್ನೆ ಮಾಡುವ ಹಕ್ಕುಗಳನ್ನೂ ಕೂಡ ಕೇಂದ್ರ ಸರ್ಕಾರ ಕಿತ್ತುಹಾಕುತ್ತಿರುವುದು ದುರಂತದ ಸಂಗತಿಯಾಗಿದೆ. ಮತ್ತೊಂದು ಸಂಗತಿಯೆಂದರೆ ಕಾರ್ಮಿಕರಿಗೆ ಸಮಸ್ಯೆ ಹಾಗೂ ಅನ್ಯಾಯಗಳಾದರೆ ಅವರಿಗೆ ನ್ಯಾಯಾಲಯಗಳು ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದ್ದವು. ಆದರೆ ಈಗ ಅವುಗಳನ್ನೂ ಕೂಡ ರದ್ದುಮಾಡಿ ಕಾರ್ಮಿಕ ನಿಗಮಗಳನ್ನು ಸ್ಥಾಪಿಸಿ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಈ ಮೋದಿ ಸರ್ಕಾರ” ಎಂದು ಕಿಡಿಕಾರಿದರು.

ಈ ಸುದ್ದಿ ಓದಿದ್ದೀರಾ? ಮಾವಿನ ಹಣ್ಣಿಗೆ ಬಂಪರ್ ಬೆಲೆ ಇದ್ದರೂ ಮಳೆ ಗಾಳಿಯ ಆತಂಕದಲ್ಲಿ ರೈತರು!

“ಎಲ್ಲ ಸಮಸ್ಯೆಗಳನ್ನು ನಮ್ಮ ದೇಶದ ಕಾರ್ಮಿಕರು, ರೈತರು, ದುಡಿಯುವ ಮಹಿಳೆಯರು ಎದುರಿಸುತ್ತಿದ್ದಾರೆ. ಜತೆಗೆ ಎಲ್ಲ ಬಂಡವಾಳಿಗರ ಪರವಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಈ ಎಲ್ಲ ನೀತಿಗಳನ್ನು ವಿರೋಧಿಸಿ ಮೇ 20ರಂದು ದೇಶವ್ಯಾಪಿ ಮುಷ್ಕರ ಮಾಡುತ್ತಿದ್ದೇವೆ. ಈ ಮುಷ್ಕರದಲ್ಲಿ ಎಲ್ಲ ಕಾರ್ಮಿಕರು ಎಲ್ಲ ವಿಭಾಗದ ದುಡಿಯುವ ಜನರು ಪಾಲ್ಗೊಂಡು ದೇಶದ ಉತ್ಪಾದನೆಯನ್ನು ನಿಲ್ಲಿಸಿ ಸೇವೆಯನ್ನು ನಿಲ್ಲಿಸಿ ಕಾರ್ಮಿಕರ ಶಕ್ತಿಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಈ ಮುಷ್ಕರವನ್ನು ಬೆಂಬಲಿಸಬೇಕು” ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮೀ ಆಗ್ರಹಿಸಿದರು.

ಸಭೆಯಲ್ಲಿ ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಎಂ ಬಿ ಪುಷ್ಪಾ, ಜಿಲ್ಲಾದ್ಯಕ್ಷ ಧರ್ಮೇಶ್, ಅರವಿಂದ್ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X