ಹಾಸನ | ಉದ್ದೇಶಪೂರ್ವಕವಾಗಿ ಅಭಿವೃದ್ಧಿ ವಿಚಾರಗಳ ನಿರ್ಲಕ್ಷ್ಯ; ಆಳುವ ಸರ್ಕಾರಗಳ ವಿರುದ್ಧ ಎಸ್ ವರಲಕ್ಷ್ಮಿ ಆರೋಪ

Date:

Advertisements

ಆಳುವ ಸರ್ಕಾರಗಳು ಉದ್ದೇಶಪೂರ್ವಕವಾಗಿ ಹಾಸನ ಜನತೆಯ ಅಭಿವೃದ್ಧಿ ವಿಚಾರಗಳನ್ನು ನಿರ್ಲಕ್ಷಿಸುತ್ತಿರುವುದರಿಂದ ಜನತೆ ಸಂಕಷ್ಟದೆಡೆಗೆ ದೂಡಲ್ಪಡುತ್ತಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ ವಾದಿ)ದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಎಸ್ ವರಲಕ್ಷ್ಮಿ ದೂರಿದರು.

ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ಸೀತಾರಾಂ ಯೆಚೂರಿ ನಗರ ಕಾಂ. ಬುದ್ದದೇವ ಸಭಾಂಗಣದಲ್ಲಿ ಜಿ ವಿ ಶ್ರೀರಾಮರೆಡ್ಡಿ ವೇದಿಕೆಯಲ್ಲಿ ಸಿಪಿಎಂ ಹಾಸನ ಜಿಲ್ಲಾ ಘಟಕದ 12ನೇ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.

“ಮೂರನೇ ಅವಧಿಗೆ ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರು ಆರಂಭದ ದಿನದಿಂದಲೂ ತಾನೂ ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ ಮತ್ತು ಜನತೆಯ ಪ್ರಧಾನ ಸೇವಕರೆಂಬ ಜನಪ್ರಿಯ ಘೋಷಣೆಗಳನ್ನು ಹೇಳುತ್ತಲೇ ಬರುತ್ತಿದ್ದಾರೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆಸಿದ ಕೋವಿಡ್ ಹಗರಣಕ್ಕೆ ಶಿಕ್ಷೆ ಕೊಡಿಸುತ್ತಾರೆಯೇ? ಕೊರೊನಾ ಚಿಕಿತ್ಸೆಗಾಗಿ ಒಂದು ಪಿಪಿಇ ಕಿಟ್‌ಗೆ ಮಾರುಕಟ್ಟೆಯಲ್ಲಿ ₹317 ಇದ್ದರೆ, ಬಿಜೆಪಿಯವರು ₹2,500 ನೀಡಿದ್ದಾರೆ. ಅದೇರೀತಿ ಐಸಿಯು ಬೆಡ್‌ಗೆ ಮಾರುಕಟ್ಟೆಯಲ್ಲಿ ₹98,000 ಇದ್ದರೆ ಇವರು ₹2 ಲಕ್ಷ ನೀಡಿದ್ದಾರೆಂದು ತನಿಖಾ ಏಜೆನ್ಸಿಗಳ ಮಾಹಿತಿ ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ದೇಶದ ಚುಕ್ಕಾಣಿ ಹಿಡಿದಿರುವ ಮೋದಿಯವರು ಏನು ಹೇಳುತ್ತಾರೆ? ಜನತೆ ಕ್ಷಮಿಸಲಾರದ ಈ ತಪ್ಪಿಗೆ ಶಿಕ್ಷೆ ಏನು” ಎಂದು ವರಲಕ್ಷ್ಮಿ ಪ್ರಶ್ನಿಸಿದರು.‌

Advertisements
ಸಿಪಿಐಎಂ 7

“ದೇಶ ಕಂಡ ಬೃಹತ್ ಹಗರಣವಾದ ಚುನಾವಣಾ ಬಾಂಡ್ ಮೂಲಕ ಅಪಾರ ಪ್ರಮಾಣದ ಹಣ ಸಂಗ್ರಹಿಸಿರುವ ಬಿಜೆಪಿ ದೇಶದಲ್ಲಿ ಅಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಸುವ ಮೂಲಕ ಅಧಿಕಾರಕ್ಕೆ ಬರುತ್ತಿದೆ. ಜನತೆಗೆ ವಿರೋಧವಾದ ಕಾನೂನುಗಳನ್ನು ಮತ್ತು ನೀತಿಗಳನ್ನು ಜಾರಿ ಮಾಡುತ್ತಿದೆ. ರೈತರ ಭೂಮಿಯ ಮೇಲೆ ಕಣ್ಣು ಹಾಕಿರುವ ಸರ್ಕಾರಗಳು ಪ್ರತಿ ತಾಲೂಕುಗಳಲ್ಲಿ ಕನಿಷ್ಟ 10 ಎಕರೆಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಮೀಸಲಿಡುವ ಆದೇಶ ಹೊರಡಿಸಿದೆ. ಇದನ್ನು ವಿರೋಧಿಸಿ ರೈತರು ನಮ್ಮ ಭೂಮಿಯನ್ನು ನಮಗೆ ಬಿಡಿ ಎಂಬ ಹೋರಾಟವನ್ನು ಸಂವಿಧಾನ ಸಮರ್ಪಣಾ ದಿನವಾದ ನವೆಂಬರ್‌ 26ರಿಂದ ಹೋರಾಟ ನಡೆಸಲಿದ್ದಾರೆ. ಇದಕ್ಕೆ ಸಿಪಿಎಂ ಬೆಂಬಲ ನೀಡಲಿದೆ” ಎಂದು ಹೇಳಿದರು.

“ಐಎಂಎಫ್‌ ವರದಿಯಂತೆ ಗ್ರಾಮೀಣ ಪ್ರದೇಶಗಳು ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿವೆ. ಗ್ರಾಮೀಣ ಜನತೆ ಕೂಡ ಅಪೌಷ್ಠಿಕತೆ ಸೇರಿದಂತೆ ವಿವಿಧ ಕಾರಣಗಳಿಂದ ಜೀವಿತಾವಧಿ 60 ವರ್ಷಕ್ಕೆ ಇಳಿದಿದೆ. ಇದಕ್ಕೆ ಬೆಲೆ ಏರಿಕೆ ಮತ್ತು ದುಡಿಮೆಯ ಕೂಲಿ ಕಡಿಮೆಯಾಗಿರುವುದು ಕಾರಣವಾಗಿದೆ. ಹಾಗಾಗಿ ವಿವಿಧ ದುಡಿಯುವ ವರ್ಗಗಳ ಕನಿಷ್ಠ ಕೂಲಿಯನ್ನು ಕನಿಷ್ಠ ₹36,000 ಏರಿಸಬೇಕೆಂದು ಡಿಸೆಂಬರ್‌ನಲ್ಲಿ ಹೋರಾಟ ನಡೆಸಲಾಗುವುದು” ಎಂದು ತಿಳಿಸಿದದರು.

“ದೇಶದಲ್ಲಿ ಉದ್ಯೋಗ ನಷ್ಟ ತೀವ್ರಗತಿಯಲ್ಲಿ ಏರುತ್ತಿದೆ. ಸರ್ಕಾರಗಳೂ ಕೂಡ ಅದೇ ದಾರಿಯಲ್ಲಿ ಸಾಗುತ್ತಿದೆ. ಅದಕ್ಕೆ ಉದಾಹರಣೆ ಎಂಬಂತೆ ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ನಿರ್ವಾಹಕರಹಿತ 5000 ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸುವ ಬಗ್ಗೆ ಹೇಳಿದ್ದಾರೆ. ರಾಜ್ಯವೊಂದರಲ್ಲೇ 11 ಲಕ್ಷ ಉದ್ಯೋಗಗಳು ಖಾಲಿಯಿವೆ. ಹಾಗಾಗಿ ಸರ್ಕಾರಗಳೇ ಜನರನ್ನು ಸಂಕಷ್ಟಕ್ಕೆ ದೂಡುತ್ತಿವೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸರ್ಕಾರಿ ನೌಕರರ ಸಂಘದ ಚುನಾವಣೆ; ಬಹುತೇಕ ಇಲಾಖೆಗಳಲ್ಲಿ ಅಚ್ಚರಿ ಫಲಿತಾಂಶ ಪ್ರಕಟ

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಕಾರ್ಯದರ್ಶಿ ಮಂಡಳಿ ಸದಸ್ಯ ನವೀನ್‌ ಕುಮಾರ್ ಮತ್ತು ಹಾಸನ ಸ್ಥಳೀಯ ಸಮಿತಿ ಕಾರ್ಯದರ್ಶಿ ಪೃಥ್ವಿ ಮಾತನಾಡಿದರು. ಜಿ ಪಿ ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು.

ಆಕರ್ಷಕ ಮೆರವಣಿಗೆ ಬಹಿರಂಗ ಸಭೆಗೂ ಮುನ್ನ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮಹಾವೀರ ವೃತ್ತದ ಮೂಲಕ ಸಾಲಗಾಮೆ ಗೇಟ್ ಬಳಿಯಿಂದ ನೀಲಕಂಠೇಶ್ವರ ಸಮುದಾಯ ಭವನದವರೆಗೂ ಕೆಂಪು ಸೀರೆಯುಟ್ಟ ಮಹಿಳೆಯರು ಮತ್ತು ಕೇಂಪು ಶರ್ಟ್ ಧರಿಸಿದ ಪುರುಷ ಸದಸ್ಯರು ಆಕರ್ಷಕ ಮೆರವಣಿಗೆ ನಡೆಸಿದರು. ಈ ವೇಳೆ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಘೋಷಣೆ ಕೂಗಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X