ಹಾಸನ ಜಿಲ್ಲೆಯ ಬೇಲೂರು ನಗರದ ತಹಶೀಲ್ದಾರ್ ಕಚೇರಿ ಹಿಂಬಾಗ ಹಲವು ವರ್ಷಗಳ ಹಿಂದೆ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ನೆಟ್ಟಿದ್ದ ಗಿಡಗಳನ್ನು ದ್ವಂಸ ಮಾಡಲಾಗಿದೆ ಎಂದು ಸಾಲುಮರದ ತಿಮ್ಮಕ್ಕ ಫೌಂಡೇನ್ ಅಧ್ಯಕ್ಷ ಉಮೇಶ್ ಆರೋಪಿಸಿದ್ದಾರೆ.
ಸಾಲುಮರದ ತಿಮ್ಮಕ್ಕ ಪುತ್ರ ಉಮೇಶ್ ಸ್ಥಳಕ್ಕೆ ಭೇಟಿ ನೀಡಿ, “ಚೆನ್ನಾಗಿ ಬೆಳೆದಿದ್ದ ಗಿಡಗಳನ್ನು ವಿನಾಕಾರಣ ನಾಶ ಮಾಡಲಾಗಿದೆ. ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಆವರಣ ಸ್ವಚ್ಛತೆ ಹೆಸರಿನಲ್ಲಿ ಗಿಡ ಮರಗಳ ನಾಶವಾಗಿದೆ” ಎಂದು ಕಿಡಿಕಾರಿದರು.

ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಆಸ್ಪತ್ರೆಯ ಆಡಳಿತ ಅಧಿಕಾರಿಗೆ ಬೋವಿ ಸಮಾಜದಿಂದ ಸನ್ಮಾನ
“ಗಿಡಮರ ನಾಶಮಾಡಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯ ಮಾಡಿದ್ದಾರೆ.