ಕೃಷಿ ಪ್ರಧಾನವಾಗಿರುವ ಹಾಸನ ಜಿಲ್ಲೆಯ ಅಭಿವೃದ್ಧಿಯಲ್ಲಿ ಕೈಗಾರಿಕೆ, ಉದ್ಯೋಗ ಸೃಷ್ಟಿ ಮತ್ತು ವಾಣಿಜ್ಯ ಬೆಳವಣಿಗೆಗಳ ಸಾಧ್ಯತೆಗಳು ಎಂಬ ವಿಷಯದ ಕುರಿತು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಸನ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.
ಹಾಸನ ಜಿಲ್ಲೆಯ ಸಮಗ್ರ ಮತ್ತು ಸಮರ್ಪಕ ಅಭಿವೃದ್ಧಿಯ ಕುರಿತು ಸಿಐಟಿಯು, ಕೆಪಿಆರ್‌ಎಸ್, ಎಸ್‌ಎಫ್‌ಐ, ಡಿವೈಎಫ್‌ಐ, ಡಿಎಚ್‌ಎಸ್, ಶ್ರಮ ನೇತೃತ್ವದಲ್ಲಿ ಅಕ್ಟೋಬರ್ 20ರಂದು ಹಾಸನದ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಹಾಸನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಬೃಹತ್ ವಿಚಾರ ಸಂಕಿರಣದ ಅಂಗವಾಗಿ ಪದವಿ ಮತ್ತು ಸ್ನಾತ್ತಕ್ಕೋತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಪದವಿ ಮತ್ತು ಸ್ನಾತ್ತಕೋತ್ತರ ಎರಡೂ ವಿಭಾಗದಲ್ಲಿ ಆಯ್ಕೆಯಾದ ಪ್ರಬಂಧಗಳಿಗೆ ಸೂಕ್ತ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು ಹಾಗೂ ಆಯ್ಕೆಯಾದ ಪ್ರಬಂಧಗಳನ್ನು “ಅಭಿವೃದ್ಧಿ ಪಥ” ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆಯ ವಿವರಗಳು :
- ಪ್ರಬಂಧವನ್ನು ಕಳುಹಿಸುವ ಕೊನೆಯ ದಿನಾಂಕ : 10 ಅಕ್ಟೋಬರ್ 2024.
- ಪ್ರಬಂಧವು 1000 ಪದಗಳು ಮೀರದಂತಿರಲಿ (ಎ4 ಅಳತೆಯ 4 ಪುಟಗಳು).
- ಪ್ರಬಂಧವನ್ನು ಕೈಬರಹದಲ್ಲಿ ಅಥವಾ ವರ್ಡ್ ಪೈಲ್ ಮೂಲಕ ನುಡಿಯಲ್ಲಿ ಟೈಪ್ ಮಾಡಿ ಕಳುಹಿಸಬಹುದು.
- ಪ್ರಬಂಧದ ಕೊನೆಯಲ್ಲಿ ತಮ್ಮ ವಿದ್ಯಾಭ್ಯಾಸ, ಕಾಲೇಜು ಹಾಗೂ ವಾಸದ ಅಂಚೆ ವಿಳಾಸದೊಂದಿಗೆ, ಮೊಬೈಲ್ ಮತ್ತು ವಾಟ್ಸ್ ಆಪ್ ನಂಬರ್ ಕಡ್ಡಾಯವಾಗಿ ಬರೆಯಬೇಕು.
- ಪ್ರಬಂಧವನ್ನು ಅಂಚೆ, ಈಮೇಲ್ ಮೂಲಕ ಕಳುಹಿಸಬಹುದು ಅಥವಾ ನೇರವಾಗಿ ತಲುಪಿಸಬಹುದು.
ಪ್ರಬಂಧಗಳನ್ನು ಕಳುಹಿಸಬೇಕಾದ ಅಂಚೆ ವಿಳಾಸ “ಶ್ರಮ” ಮಿಷನ್ ಆಸ್ಪತ್ರೆ ಎದುರು, ಆರ್ ಸಿ ರಸ್ತೆ, ಹಾಸನ– 573201 ದೂರವಾಣಿ : 9632251484, 9448702074.
ಈ ಮೈಲ್ ವಿಳಾಸ shramatrusthassan@gmail.com
hrnkumar12@gmail.com