ಹಾಸನ ತಾಲೂಕಿನ ದುದ್ದ ಹೋಬಳಿ ವ್ಯಾಪ್ತಿಯ ಹೊನ್ನಾವರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ ನಡೆದಿದ್ದು, ಪಿ ಕೆ ಸುರೇಶ್ ಎಂಬುವವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕು ದಂಡಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಯೂ ಆದ ಶ್ವೇತಾ ಎನ್ ರವೀಂದ್ರ ಅವರ ಸಮ್ಮುಖದಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಪಿ ಕೆ ಸುರೇಶ್ ಎಂಬುವವರನ್ನು ಪಂಚಾಯಿತಿ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ವಿದ್ಯಾರ್ಥಿವೇತನ ನೀಡಿ ಉನ್ನತ ಶಿಕ್ಷಣಕ್ಕೆ ಒತ್ತು ನೀಡಿ; ಎಐಡಿಎಸ್ಒ ಆಗ್ರಹ
ಈ ವೇಳೆ ಹೊನ್ನಾವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಾರ್ವತಮ್ಮ, ಪಂಚಾಯಿತಿ ಸದಸ್ಯರು, ತಾಲೂಕು ಕಚೇರಿ ಸಿರಸ್ತೆದಾರ ಸೈಯದ್ ಅಸ್ಮತುಲ್ಲಾ ಖಾದ್ರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್ ಪ್ರಭ, ಚುನಾವಣಾ ಶಾಖೆ ಮಂಜುನಾಥ್ ಬಿ ಎಂ, ಗ್ರಂಥಾಲಯ ಸಹಾಯಕ ಪಾಂಡುರಂಗ ಹಿರೀಕಡಲೂರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.