ಹಾಸನ | ಪೋಲಿಯೊ ಜಾಗೃತಿ ಅಭಿಯಾನದಲ್ಲಿ ₹30 ಕೋಟಿ ಬೆಲೆ ಬಾಳುವ ಶ್ವಾನ ಪ್ರದರ್ಶನ!

Date:

Advertisements

ಪೋಲಿಯೊ ನಿರ್ಮೂಲನೆಗಾಗಿ ಲಸಿಕೆ ಬಗ್ಗೆ ಪ್ರಾಮುಖ್ಯತೆ ತಿಳಿಸಲು ಹಾಸನ ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಆವರಣದಿಂದ ಹೇಮಾವತಿ ಪ್ರತಿಮೆವರೆಗೂ ಜಾಗೃತಿ ಅಭಿಯಾನ ಕೈಗೊಳ್ಳಲಾಯಿತು. ಈ ಮಧ್ಯೆ ₹30 ಕೋಟಿ ದುಬಾರಿ ಬೆಲೆ ಬಾಳುವ ಪಾಂಡಾ ಶ್ವಾನವನ್ನು(ಪಾಂಡಾ ಡಾಗ್) ಪ್ರದರ್ಶಿಸಲಾಯಿತು.

ರೋಟರಿ ಕ್ಲಬ್‌ನ ಅಧ್ಯಕ್ಷರಾದ ಬಿ.ವಿ ವಿಜಯ್ ರವರು ಮಾತನಾಡಿ, ಪೋಲಿಯೊ ಎಂಬುದು ಒಂದು ಮಾರಣಾಂತಿಕ ಕಾಯಿಲೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆ ಸರ್ಕಾರದ ಜೊತೆ ಸೇರಿಕೊಂಡು ಇದರ ನಿರ್ಮೂಲನೆಗೆ ಕೆಲಸ ಮಾಡುತ್ತಿದೆ. ಸಾರ್ವಜನಿಕರು ನವಂಬ‌ರ್ ತಿಂಗಳಲ್ಲಿ ನಡೆಯುವ ಪೋಲಿಯೊ ಲಸಿಕೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಹಾಸನ 12

ಅಭಿಯಾನದಲ್ಲಿ ಹಾಸನ, ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್, ರೋಟರಿ ಕ್ಲಬ್ ಆಫ್ ಹಾಸನ ಹೊಯ್ಸಳ ರೋಟರಿ ಕ್ಲಬ್ ಆಫ್ ಚನ್ನರಾಯಪಟ್ಟಣ ವಿಷನ್, ಮತ್ತು ರಾಯಲ್ ಅಪೋಲ್ಲೋ ಇಂಟರ್‌ನ್ಯಾಶನಲ್ ಶಾಲೆಯ ಇಂಟರಾಕ್ಟ್‌ ಕ್ಲಬ್‌ನಿಂದ ಪೋಲಿಯೊ ಜಾಗೃತಿ ಅಭಿಯಾನವು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಯಿತು. ಅದರಲ್ಲೂ ಅಪರೂಪದ ದುಬಾರಿಯಾಗಿ ಬೆಲೆ ಬಾಳುವ ಪಾಂಡಾ ಡಾಗ್ ಎಲ್ಲರನ್ನೂ ಆಕರ್ಷಿಸಿತು.

Advertisements

ಈ ಸುದ್ದಿ ಓದಿದ್ದೀರಾ:ಚಿಕ್ಕಮಗಳೂರು | ಮೂಲಸೌಕರ್ಯವನ್ನೇ ಕಾಣದ ಸಂಸೆ ಗ್ರಾಮ; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ

ಅಭಿಯಾನದ ಜಾಥಾದಲ್ಲಿ ರಾಯಲ್ ಅಪೋಲೋ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲ ರವಿಕುಮಾರ್, ಅಸಿಸ್ಟೆಂಟ್ ಗವರ್ನರ್ ರೋಟರಿಯೇನ್ ಮೋಹನ್, ಸದಸ್ಯರಾದ ವಿಜಯಕುಮಾರ್, ಪ್ರಕಾಶ್, ಶಿವಕುಮಾರ್, ಬಾಲಾಜಿ, ಕಾರ್ಯದರ್ಶಿ ನಳಿನಿ ಇನ್ನಿತರರು ಭಾಗವಹಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

Download Eedina App Android / iOS

X