ಡಾ. ಬಿ.ಆರ್. ಅಂಬೇಡ್ಕರ್ ಅವರ 134 ನೇ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ 118 ನೇ ಜನ್ಮ ದಿನಾಚರಣೆಯನ್ನು ಹಾಸನ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಬಾಬು ಜಗಜೀವನ್ ರಾಮ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗುರುವಾರ ಯಶಸ್ವಿಯಾಗಿ ನಡೆಸಲಾಯಿತು.
ಜಯಂತಿಗಳು ಮಹಾನ್ ನಾಯಕರ ಆಶಯ ಹಾಗೂ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸಲು ಇರುವಂತವು. ಅಂಬೇಡ್ಕರ್ ಅವರು ಇರದೇ ಇದ್ದಿದ್ದರೆ ಇಂದು ನಾವು ಈ ಕಾರ್ಯಕ್ರಮ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ 3 ಅಂಬೇಡ್ಕರ್ ಅವರು ದೇವರಾದರೆ ಸಮಾಜಕ್ಕೆ ಅಪಾಯ, ಮಹಾನ್ ನಾಯಕರು ದೇವರಾಗುವ ಬದಲು, ವಿಮೋಚಕರಾಗಿಯೇ ಇರಬೇಕು. ಇಲ್ಲದಿದ್ದರೆ ಸಮುದಾಯ ಮತ್ತೆ ಪತನದತ್ತ ಸಾಗುತ್ತದೆ ಎಂಬುದನ್ನು ಮರೆಯ ಬಾರದು ಎಂದು ಅರಕಲವಾಡಿ ನಾಗೇಂದ್ರ ಮಾತಾಡಿದರು.
ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಶೇ.49.5ರಷ್ಟು ಮೀಸಲಾತಿ ಸರ್ಕಾರಿ ಕ್ಷೇತ್ರದಲ್ಲಿ ಮಾತ್ರ ಇದೆ. ದೇಶದಲ್ಲಿ ಸರ್ಕಾರಿ ಕ್ಷೇತ್ರ ಇರುವುದು ಕೇವಲ ಶೇ.2ರಷ್ಟು ಮಾತ್ರ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಖಾಸಗಿ ಕ್ಷೇತ್ರದಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸದೃಢರಾಗಬೇಕು. ಭೂಮಿ, ಕೈಗಾರಿಕೆ ಸೇರಿದಂತೆ ಇತರೆ ರೂಪದಲ್ಲಿದ್ದು, ಹೆಚ್ಚಿನ ಪ್ರಮಾಣ ಉಳ್ಳವರ ಕೈವಶದಲ್ಲಿಯೇ ಇದೆ. ಶೇ. 2 ರಷ್ಟು ಮೀಸಲಾತಿಯಲ್ಲಿ ಶೇ. 1ರಷ್ಟು ಮೀಸಲಾತಿ ಉಳ್ಳವರಿಗೆ ಸೇರಿದೆ. ಇದೆಲ್ಲವನ್ನೂ ಅರಿತು ಜೀವನ ಶೈಲಿ ರೂಪಿಸಿಕೊಳ್ಳಬೇಕು. ಆರ್ಥಿಕವಾಗಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸದೃಢರಗಬೇಕು ಎಂದು ನಾಗೇಂದ್ರ ಮಾತಾಡಿದರು.
ಇದನ್ನೂ ಓದಿದ್ದೀರಾ?ಹಾಸನ l ಪಹಲ್ಗಾಮ್ ಉಗ್ರರ ದಾಳಿ: ವಕೀಲರ ಪ್ರತಿಭಟನೆ
ಈ ವೇಳೆ ಜಿಲ್ಲಾ ಬಾಬೂಜಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬಸವರಾಜು, ಗೌರವಾಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಸೋಮಶೇಖರ್, ದಾಸಪ್ಪ, ಹಿರಿಯ ದಲಿತ ಮುಖಂಡ ಹೆಚ್.ಪಿ.ಶಂಕರ್ ರಾಜು, ಸಮಾಜ ಸೇವಕ ಧರ್ಮಪ್ಪ ನಾಯಕ, ದಂಡೋರ ಮಂಜುನಾಥ್, ಜಾಂಬವ ಸೇನೆಯ ಅರಕಲಗೂಡು ನಿಂಗರಾಜು, ಕೆ.ಡಿ.ಎಸ್. ಎಸ್ ತಾಲೂಕು ಸಂಚಾಲಕ ಬಾಣಾವರ ಮಹೇಶ್, ಆಲೂರು ವೆಂಕಟಯ್ಯ, ಅರಸಪ್ಪ ಹೊಳೆನರಸೀಪುರ ನಾಗರಾಜ್ ಇನ್ನಿತರರಿದ್ದರು.