ನಿಶ್ಚಿತವಾಗಿದ್ದ ಮದುವೆಯೊಂದು ಕೊನೆ ಕ್ಷಣದಲ್ಲಿ ಮುರಿದು ಬಿದ್ದಿರುವ ಘಟನೆ ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದಿದೆ.
ಹಾಸನ ತಾಲ್ಲೂಕಿನ ಬೂವನಹಳ್ಳಿ ಗ್ರಾಮದ ಪಲ್ಲವಿ ಮತ್ತು ಆಲೂರು ತಾಲ್ಲೂಕಿನ ಈಶ್ವರಹಳ್ಳಿ ಕೂಡಿಗೆಯ ಸರ್ಕಾರಿ ಶಾಲಾ ಶಿಕ್ಷಕ ವೇಣುಗೋಪಾಲ್.ಜಿ ಅವರ ಮದುವೆ ಶುಕ್ರವಾರ ನಿಗದಿಯಾಗಿತ್ತು. ಪಲ್ಲವಿ ಎಂಬ ವಧು ತಾಳಿ ಕಟ್ಟುವ ಮುಹೂರ್ತದ ವೇಳೆಯಲ್ಲಿ ಪಲ್ಲವಿಗೆ ಬಂದ ಒಂದು ಕರೆಯ ನಂತರ ಆಕೆ ತಕ್ಷಣವೇ ಮದುವೆಯನ್ನು ನಿರಾಕರಿಸಿ,
ಈ ಮದುವೆ ಬೇಡ” ಎಂದು ಹಠ ಹಿಡಿದು ಮದುವೆಯನ್ನು ನಿಲ್ಲಿಸಿ, ನಾನು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ, ಆಗುವುದಾದರೆ ಅವನನ್ನೇ ಆಗುವುದು ಎಂದು ಮದುವೆ ಮಂಟಪದಲ್ಲಿರುವ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡು ನನಗೆ ಈ ಮದುವೆ ಬೇಡ ಎಂದು ನಿರಾಕರಿಸಿದ್ದಾಳೆ. ವಧುವಿನ ಪೋಷಕರು ಎಷ್ಟೇ ಹೇಳಿದರೂ ಆಕೆ “ಮದುವೆ ಬೇಡವೇ ಬೇಡ” ಎಂದು ದೃಢವಾಗಿ ಹೇಳಿದ್ದಾರೆ. ಈ ವಿಚಾರ ತಿಳಿದ ವರ ವೇಣುಗೋಪಾಲ್ ಕೂಡ, ಈ ಮದುವೆಗೆ ನಮ್ಮ ಒಪ್ಪಿಗೆ ಕೂಡ ಇಲ್ಲ ಎಂದು ಹೇಳಿದರು.
ಇದನ್ನೂ ಓದಿದ್ದೀರಾ?ಹಾಸನ l ತಾಳಿ ಕಟ್ಟಿಸಿಕೊಂಡು ಪದವಿ ಪರೀಕ್ಷೆ ಬರೆಯಲು ಬಂದ ವಧು
ಈ ಘಟನೆ ಕುರಿತು ಸ್ಥಳಕ್ಕೆ ಬಡಾವಣೆ ಮತ್ತು ನಗರ ಠಾಣೆ ಪೊಲೀಸರು ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದ್ದಾರೆ. ವಧು ಪಲ್ಲವಿಯ ನಿರ್ಧಾರ ಬದಲಾಗದ ಕಾರಣ, ಪಲ್ಲವಿಯ ಪೋಷಕರು ಕಣ್ಣೀರಿಟ್ಟಿದ್ದಾರೆ.