ಕಳ್ಳತನ ಮಾಡಿ ಹಸುವನ್ನು ಜಾನುವಾರು ಸಂತೆಯಲ್ಲಿ ಮಾರಾಟ ಮಾಡುವ ವೇಳೆ ಸಿಕ್ಕಿಬಿದ್ದ ಕಳ್ಳನಿಗೆ ಹಲ್ಲೆ ಮಾಡಿರುವ ಘಟನೆ ಹಾಸನ ನಗರದ ಸಂತೆಪೇಟೆಯಲ್ಲಿ ನಡೆದಿದೆ.
ಹಸುವಿನ ಮಾಲೀಕರು ಹುಡುಕಿಕೊಂಡು ಜಾನುವಾರು ಸಂತೆಗೆ ಬಂದಿದ್ದ ವೇಳೆ, ಕಳ್ಳತನ ಮಾಡಿದ ವ್ಯಕ್ತಿ ಅದೇ ಜಾನುವಾರು ಸಂತೆಗೆ ಹಸುವನ್ನು ಮಾರಾಟ ಮಾಡಲು ಬಂದಿರುವ ಸಮಯದಲ್ಲಿ ಹಸುವಿನ ಮಾಲೀಕರಿಗೆ ಸಿಕ್ಕಿ ಬಿದ್ದಿದ್ದಾನೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಾಡಾನೆ ಪ್ರತ್ಯಕ್ಷ: ಮನೆಗೆ ನುಗ್ಗಲು ಯತ್ನ
ಹೆಚ್ಚು ಬೆಲೆ ಬಾಳುವ ಹಸು ಹುಡುಕಿ ಸುಸ್ತಾಗಿದ್ದ ಮಾಲೀಕರು ಸಂತೆಯಲ್ಲಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಬಂದಾಗ, ಮಾರಾಟ ಮಾಡುತ್ತಿರುವುದನ್ನು ಗಮನಿಸಿ ಮಾಲೀಕರು ಹಾಗೂ ಸಾರ್ವಜನಿಕರು ಕಳ್ಳತನ ಮಾಡಿದ ವ್ಯಕ್ತಿಗೆ ಹಲ್ಲೆ ಮಾಡಿದ್ದಾರೆ.