ಹೆಜ್ಜೇನು ದಾಳಿಯಿಂದ ವೃದ್ದೆ ನಿಂಗಾಜಮ್ಮ ತೀವ್ರ ಅಸ್ವಸ್ಥಗೊಂಡಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದಿದೆ.
ಕೆರೆಗೋಡು ಗ್ರಾಮದ ಶಾಮಯ್ಯ ಎಂಬುವವರ ಪತ್ನಿ ನಿಂಗಾಜಮ್ಮ(62) ಅಸ್ವಸ್ಥಗೊಂಡಿರುವ ಮಹಿಳೆ. ಬುಧವಾರ ಸಂಜೆ ಜಮೀನಿನ ಬಳಿ ಕೆಲಸ ಮಾಡುತ್ತಿದ್ದ ವೇಳೆ ದಿಢೀರನೇ ಹೆಜ್ಜೇನು ದಾಳಿ ಮಾಡಿದೆ. ಈ ವೇಳೆ ನಿಂಗಾಜಮ್ಮ ಜೋರಾಗಿ ಕಿರುಚಿಕೊಂಡಿದ್ದರಿಂದ ಸುತ್ತಲ ಜಮೀನಿನಲ್ಲಿದ್ದ ಜನರು ನಿಂಗಾಜಮ್ಮ ಅವರನ್ನು ರಕ್ಷಿಸಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು.
ಇದನ್ನೂ ಓದಿದ್ದೀರಾ?ಹಾಸನ l ನ.20ರಂದು ಜಿಲ್ಲಾ ಮಟ್ಟದ ಯುವಜನೋತ್ಸವ
ಹೆಜ್ಜೇನು ದಾಳಿಯಿಂದ ಅಸ್ವಸ್ಥಗೊಂಡ ನಿಂಗಾಜಮ್ಮ ಅವರನ್ನು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
