ಬಸ್ಸಿನಲ್ಲಿ ಹೋಗುವಾಗ ಮಹಿಳೆಯ ಬ್ಯಾಗಿನಲ್ಲಿದ್ದ, ಸುಮಾರು 4.90 ಲಕ್ಷ ರೂ. ಬೆಲೆಯ ಚಿನ್ನದ ಆಭರಣ ಕಳ್ಳತನ ಮಾಡಿರುವ ಘಟನೆ, ಹಾಸನ ಜಿಲ್ಲೆ ಬೇಲೂರು ತಾಲೂಕಿಗೆ ಸಮೀಪವಿರುವ ಜಾವಗಲ್ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣ ಹೋಬಳಿ ಎಸ್ ಬಿದರೆ ಗ್ರಾಮದ ಚೈತ್ರ ಎಂಬುವರು ಮೇ 18 ರಂದು ತಮ್ಮ ಮಕ್ಕಳು ಮತ್ತು ಅಕ್ಕನೊಂದಿಗೆ ಬಿದರೆ ಗ್ರಾಮದಿಂದ ಬೇಲೂರಿನ ಸಂಬಂಧಿಕರ ಗೃಹಪ್ರವೇಶಕ್ಕೆ ಹೋಗಬೇಕೆಂದು ಪ್ರಯಾಣ ಬೆಳೆಸುವಾಗ ಘಟನೆ ನಡೆದಿದೆ. ಕಳ್ಳತನವಾದ ಬ್ಯಾಗಿನಲ್ಲಿ 34 ಗ್ರಾಂ ತೂಕದ ಚಿನ್ನದ ಲಾಂಗ್ ಸರ, 17 ಗ್ರಾಂ ತೂಕದ ಸರ, 8 ಗ್ರಾಂ ತೂಕದ ಚಿನ್ನದ ಓಲೆ, 3 ಗ್ರಾಂ ತೂಕದ ಚಿನ್ನದ ಉಂಗುರಗಳು ಇದ್ದವೆಂದು ತಿಳಿದು ಬಂದಿದೆ.
ಇದನ್ನೂ ಓದಿದ್ದೀರಾ?ಹಾಸನ l ವರುಣನ ಅಬ್ಬರ; ಯಲ್ಲೋ ಅಲರ್ಟ್ ಘೋಷಣೆ
ಬಿದರೆ ಗ್ರಾಮದಿಂದ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಹೊರಟು ಜಾವಗಲ್ ಬಸ್ ನಿಲ್ದಾಣಕ್ಕೆ ಬಂದು, ನಂತರ ಬೇಲೂರು ಕಡೆಗೆ ಹೋಗುವ ಬಸ್ಸಿನಲ್ಲಿ ಘಟನೆ ನಡೆದಿದೆ ಎಂದು ತಿಳಿಸಲಾಗಿದೆ. ಈ ಕುರಿತು ಜಾವಗಲ್ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.