ಹೆಮ್ಮೆಯ ಸಾಹಿತಿ ಶ್ರೀಮತಿ ಬಾನು ಮುಷ್ತಾಕ್ ಅವರಿಗೆ ಬೂಕರ್ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಈ ಸಂಭ್ರಮಾಚಾರಣೆಯನ್ನು ಕನ್ನಡ ಸಾಹಿತ್ಯ ಪರಿಷತ್, ಜನಪರ ಚಳುವಳಿಗಳು, ಕನ್ನಡಪರ ಸಂಘಟನೆಗಳು, ಸಂಘಸಂಸ್ಥೆಗಳು ಹಾಗೂ ನಾಗರಿಕ ಸಮಿತಿ ವತಿಯಿಂದ ಹಾಸನ ಜಿಲ್ಲೆಯ ಹಾಸನಾಂಬ ಕಲಾಕ್ಷೇತ್ರದಲ್ಲಿ
9ರಂದು ಕಾರ್ಯಕ್ರಮ ಆಯೋಜಿಸಲಾಗಿದೆ.
ಕನ್ನಡ, ಕರ್ನಾಟಕ ಮತ್ತು ಇಡೀ ಭಾರತಕ್ಕೇ ಹೆಮ್ಮೆ ತರುವ ಸಂಗತಿಯಾಗಿದೆ. ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿದೆ. ಸಮೃದ್ಧ ಹಾಗೂ ಶಾಸ್ತ್ರೀಯ ಭಾಷೆಯಾದ ನಮ್ಮ ಕನ್ನಡ ಭಾಷೆ ಇಂದು ಹಲವು ಸಮಸ್ಯೆಗಳು ಮತ್ತು ದಾಳಿಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕನ್ನಡ ಸತ್ವ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಬಹಳ ಸಂತಸದ ವಿಷಯ ಎಂದು ಜನಪರ ಸಂಘಟನೆ ಮುಖಂಡರು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ l ಅಕ್ರಮ ಸಂಬಂಧ: ಕುಟುಂಬಸ್ಥರನ್ನು ಕೊಲೆ ಮಾಡಲು ಯತ್ನಿಸಿದ ಪತ್ನಿ
ಹಿರಿಯ ಸಾಹಿತಿ, ನ್ಯಾಯವಾದಿ ಹಾಗೂ ಜನಪರ ಚಳುವಳಿಗಳ ಒಡನಾಡಿ ಶ್ರೀಮತಿ ಬಾನು ಮುಷ್ತಾಕ್ ಮತ್ತು ಕನ್ನಡ ಕೃತಿಯನ್ನು ಅತ್ಯಂತ ಸಮರ್ಥವಾಗಿ ಅನುವಾದಿಸಿ ಕನ್ನಡಕ್ಕೆ ಜಾಗತಿಕ ಮನ್ನಡೆಗಳಿಸಲು ಕಾರಣರಾದ ನಮ್ಮ ಪಕ್ಕದ ಜಿಲ್ಲೆಯವರಾದ ಶ್ರೀಮತಿ ದೀಪಾ ಭಾಸ್ತಿ ಅವರನ್ನು ಹೃದಯ ಪೂರ್ವಕವಾಗಿ ಅಭಿನಂಧಿಸಬೇಕಾಗಿರುವುದು ಎಲ್ಲ ಕನ್ನಡಿಗರ ಕರ್ತವ್ಯವಾಗಿದೆ. ಕನ್ನಡ, ಕರ್ನಾಟಕ ನಮ್ಮ ಹಾಸನ, ಜಿಲ್ಲೆ, ರಾಜ್ಯ ಮತ್ತು ಇಡೀ ದೇಶಕ್ಕೇ ಹೆಸರು ತಂದ ಶ್ರೀಮತಿ ಭಾನು ಮುಷ್ತಾಕ್ ಮತ್ತು ಶ್ರೀಮತಿ ದೀಪಾ ಭಾಸ್ತಿ ಅವರಿಗೆ ‘ಒಂದು ನಾಗರಿಕ ಸನ್ಮಾನ’ ಮಾಡಿ ಗೌರವಿಸುವುದು ನಮ್ಮೆಲ್ಲರ ಆಧ್ಯತೆಯ ಕೆಲಸವಾಗಿದೆ. ಆದ್ದರಿಂದ ಎಲ್ಲರೂ ಕಾರ್ಯಕ್ರಮಕ್ಕೆ ತಪ್ಪದೆ ಭಾಗವಹಿಸಬೇಕೆಂದು ಜನಪರ ಸಂಘಟನೆಯ ಒಕ್ಕೂಟದಿಂದ ತಿಳಿಸಿದರು.