ನಮ್ಮ ತಂದೆ ದೇವೇಗೌಡರಿಗೆ 1962ರಿಂದ ರಾಜಕೀಯ ಜನ್ಮ ನೀಡಿ ಶಕ್ತಿ ತುಂಬಿದ ಹಾಸನ ಜಿಲ್ಲೆಯಲ್ಲಿ ಆಗದೇ ಉಳಿದಿರುವ ಯೋಜನೆ ಪೂರ್ಣಗೊಳಿಸಿ, ಸಮಗ್ರ ಅಭಿವೃದ್ಧಿ ಮಾಡಿದ ನಂತರವೇ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್.ಡಿ.ರೇವಣ್ಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಾಸಕ ಹೆಚ್ ಡಿ ರೇವಣ್ಣ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು ದೇವೇಗೌಡರು ರಾಜಕೀಯವಾಗಿ ಹಲವು ಸ್ಥಾನಮಾನ, ಸಿಎಂ-ಪಿಎಂ ಆಗಲು ಹಾಸನ ಹಾಗೂ ಕನಕಪುರ ಲೋಕಸಭಾ ಕ್ಷೇತ್ರದ ಜನರೇ ಕಾರಣ ಎಂದರು. ದೇವೇಗೌಡರಲ್ಲದೆ, ನಾನು ಜೊತೆಗೆ ದಿ.ಪ್ರಕಾಶ್, ಈಗ ಸ್ವರೂಪ್ ಮೊದಲಾದವರು ಗೆಲ್ಲಲು ಜನರೇ ಕಾರಣರಾಗಿದ್ದಾರೆ. ಕೆಲವೊಮ್ಮೆ ಎಂಟಕ್ಕೆ ಎಂಟೂ ಈ ಸ್ಥಾನ ಗೆಲ್ಲಿಸಿದ್ದನ್ನು ನಾವು ಮರೆಯುವುದಿಲ್ಲ, ನನ್ನ ಕೊನೆ ಉಸಿರು ಇರೋವರೆಗೂ ಜಿಲ್ಲೆಯಲ್ಲಿ ಬಾಕಿ ಕೆಲಸ ಮುಗಿಸಲು ಸಿದ್ದವಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿದ್ದೀರಾ?ಹಾಸನ | ಮತ್ತೆ ನಾಲಿಗೆ ಹರಿಬಿಟ್ಟ ಸೂರಜ್ ರೇವಣ್ಣ; ಪಕ್ಷದ ಮುಖಂಡರಿಗೆ ಅಶ್ಲೀಲವಾಗಿ ನಿಂದನೆ
ಈ ಹಿಂದೆ ಕುಮಾರಸ್ವಾಮಿ ಹಾಸನ ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡಿರುವುದರಲ್ಲಿ ಸ್ವಲ್ಪ ಬಾಕಿ ಇದೆ. ಯಾವುದೇ ಅಡೆತಡೆ ಬಂದರೂ ಪೂರ್ಣಗೊಳಿಸುವೆ. ಹಾಸನ, ಹೊಳೆನರಸೀಪುರ ತಾಲ್ಲೂಕಿನಲ್ಲಿ ರಿಂಗ್ ರೋಡ್ ಮಾಡಿಸಲು ಪ್ರಯತ್ನ ನಡೆಯುತ್ತಿದೆ. ಜಿಲ್ಲೆಗೆ ಏನೆಲ್ಲ ಅಭಿವೃದ್ಧಿ ಕೆಲಸ ಆಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಡಿದ್ದೇನೆ. ಹಾಸನ ಜಿಲ್ಲೆಯ ಜನರು ನೀಡಿರುವ ಸಹಕಾರ ಮರೆಯಲ್ಲ. ರಾಜ್ಯ ಸರ್ಕಾರ ಕೊಟ್ಟರೆ ಸಂತೋಷ, ಇಲ್ಲವಾದರೆ ಕೇಂದ್ರದ ನೆರವಿನಿಂದಲೇ ಅಭಿವೃದ್ಧಿ ಮಾಡುವುದಾಗಿ ಶಾಸಕ ಹೆಚ್ ಡಿ ರೇವಣ್ಣ ತಿಳಿಸಿದರು.
