ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವೈದ್ಯ ನರ್ಸಿಂಗ್ ಮತ್ತು ಪ್ಯಾರ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ಈದಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಪ್ಯಾರ ಮೆಡಿಕಲ್ ಕಾಲೇಜಿನಲ್ಲಿ ಆಚರಿಸಲಾಯಿತು.
69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪುರಸ್ಕೃತರಿಗೆ ಸನ್ಮಾನಿಸಿ ಅಭಿನಂದನಾ ಸಮಾರಂಭವನ್ನು ಯಶಸ್ವಿನಿಂದ ನೆರವೇರಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಡಾ ಹೆಚ್ ಎಲ್ ಮಲ್ಲೇಶ್ ಗೌಡ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ನಾವೆಲ್ಲರೂ ಬೆಳಸಬೇಕು. ಕರ್ನಾಟಕದಲ್ಲಿ ಕನ್ನಡ ಭಾಷೆ ಅಸ್ತಿತ್ವದಲ್ಲಿರಬೇಕು. ನಾಡು, ನುಡಿ ಜಾನಪದ ಕಲೆಗನ್ನೋಳಗೊಂಡ ಕನ್ನಡ ಭಾಷೆ ಸ್ಥಿರವಾಗಿರಲಿ. ಎಲ್ಲರೂ ಹೆಚ್ಚಾಗಿ ಕನ್ನಡ ಭಾಷೆ ಮಾತಾಡುತ್ತಾ ಹಾಗೆಯೇ ಬೇರೆ ಭಾಷೆಯನ್ನೊಂದಿರುವ ಜನರಿಗೆ ಕನ್ನಡ ಭಾಷೆ ಕಲಿಸುವ ಪ್ರಯತ್ನ ಮಾಡೋಣ ಎಂದು ತಿಳಿಸಿದರು.
ಶ್ರೀಮತಿ ಜಯಂತಿ ಚಂದ್ರಶೇಖರ್ ಸಾಹಿತ್ಯ, ಹಳ್ಳಿ ವೆಂಕಟೇಶ್ ಸಾಹಿತ್ಯ, ಎಎಸ್ ಕೃಷ್ಣೆಗೌಡ ಪೌರಾಣಿಕ ರಂಗಭೂಮಿ, ಮಂಜು ಮೊಟ್ಟನವಿಲೆ ಜಾನಪದ ಸಂಗೀತ, ಎಸ್ ಆರ್ ಕಂಠಿ ಶೈಲಜ ಬಿವಿ ಭರತನಾಟ್ಯ ಇವರಿಗೆ ಗೌರವಿಸಿ, ಪ್ರಶಸ್ತಿ ನೀಡಲಾಯಿತು. ವಿಶೇಷ ಸನ್ಮಾನಿತರಾದ ರಿತೇಶ್ ಎಂ ವಿಜ್ಞಾನ ಹಾಗೂ ತಂತ್ರಜ್ಞಾನ, ತಿಲಕ್ ನಾರಾಯಣ ಎನ್,ಎಲ್ ಭಾರತೀಯ ಸೇನೆ, ಗೌರವ ನೀಡುವ ಮೂಲಕ ಸನ್ಮಾನಿಸಲಾಯಿತು.
ಇದನ್ನು ಓದಿದ್ದೀರಾ? ಹಾಸನ l ನಿಖಿಲ್ ಕುಮಾರಸ್ವಾಮಿ ಸೋಲಿಗೆ ಜೆಡಿಎಸ್ ನಾಯಕರೇ ಕಾರಣ: ಸಂಸದ ಶ್ರೇಯಸ್ ಪಟೇಲ್
ಈ ವೇಳೆ ಕಸಾಪ ಅಧ್ಯಕ್ಷರಾದ ಎಚ್ ಎನ್ ಲೋಕೇಶ್, ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಅರುಣ್ ಕುಮಾರ್, ಜಿಲ್ಲಾ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಬೊಮ್ಮೇಗೌಡ, ಮಮತೇಶ್, ತಾಲೂಕು ಕಸಾಪ ಸಂಘಟನ ಕಾರ್ಯದರ್ಶಿಯಾದ ಜಬಿವುಲ್ಲಾ ಬೇಗ್, ಪದಾಧಿಕಾರಿಗಳಾದ ಮಲ್ಲೇಗೌಡ್ರು, ಯಶೋಧಾ ಜೈನ್, ಗೋವಿಂದ್, ರಾಜ್, ಶಿವನಗೌಡ ಪಾಟೀಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸೂಪರ್ ವರದಿ ಧನ್ಯವಾದಗಳು