ಮಹಾತ್ಮ ಜ್ಯೋತಿಬಾ ಪುಲೆ ಅವರ 198ನೇ ಜಯಂತಿಯನ್ನು ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಭೀಮ ಆರ್ಮಿ ಸಂಘಟನೆ ವತಿಯಿಂದ ಶುಕ್ರವಾರ ಆಚರಿಸಲಾಯಿತು.
“ಜ್ಯೋತಿಬಾ ಪುಲೆ ಅವರು 1827 ಏಪ್ರಿಲ್ 11 ರಂದು ಮಹಾರಾಷ್ಟ್ರದ ಸತಾರ ಎಂಬಲ್ಲಿ ಜನಿಸಿ, ಚಿಕ್ಕಂದಿನಿಂದಲೇ ಬುದ್ಧಿಶಾಲಿಯಾಗಿದ್ದ ಜ್ಯೋತಿಬಾ ಫುಲೆ ಉತ್ತಮ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡಿದರು ಹಾಗೂ ಸಿರಿವಂತ ಕುಟುಂಬದಲ್ಲಿ ಜನಿಸಿದ ಪುಲೆ ತನ್ನ ಸಹಪಾಠಿಗಳಂತೆ ಬದುಕುತ್ತಿದ್ದರು. ಮೇಲ್ವರ್ಗದಲ್ಲಿ ಜನಿಸಿದರು ಸದಾ ಕೆಳ ವರ್ಗದ ಜನರ ಒಳಿತಿನ ಬಗ್ಗೆ ಚಿಂತಿಸುತ್ತಿದ್ದರು, ಚಿಕ್ಕಂದಿನಿಂದಲೇ ಸ್ತ್ರೀ ಶೋಷಣೆ ,ದಲಿತರ ಮೇಲಿನ ಅಸಮಾನತೆ, ಶಿಕ್ಷಣದಿಂದ ವಂಚಿತರಾಗಿದ್ದ ಭಾರತದ ಬಹು ಜನರ ಬಗ್ಗೆ ಚಿಂತಿಸುತ್ತಿದ್ದರು. ಭಾರತದ ಸಾಮಾಜಿಕ ಪಿಡುಕುಗಳಾದ ಸ್ತ್ರೀ ಅಸಮಾನತೆ, ಜಾತಿ ವ್ಯವಸ್ಥೆ ಮೌಲ್ಯ ಕಂದಾಚಾರ ಇವುಗಳ ವಿರುದ್ಧ ಹೋರಾಡಲು ಸಿದ್ದರಾದರು ಇದಕ್ಕೆ ಇವರು ಶಿಕ್ಷಣವನ್ನು ದೊಡ್ಡ ಅಸ್ತ್ರವನ್ನಾಗಿ ಬಳಸಿದರು. ಎಸ್ ಸಿ, ಎಸ್ ಟಿ , ಒ ಬಿ ಸಿ ಹಾಗೂ ಎಲ್ಲಾ ಜನಾಂಗದ ಮಹಿಳೆಯರು ವಿದ್ಯಾವಂತರಾಗಿದ್ದಾರೆ ಎಂದರೆ, ಇದಕ್ಕೆ ಮೂಲ ಕಾರಣ ಜ್ಯೋತಿಬಾ ಪುಲೆ ಹಾಗೂ ಅವರ ಪತ್ನಿ ಸಾವಿತ್ರಿಬಾಯಿ ಪುಲೆ” ಎಂದು ಕಾರ್ಯಕ್ರಮದಲ್ಲಿ ಶಿಕ್ಷರಾದ ಸಂಪತ್ ತಿಳಿಸಿದರು.
ಸಂವಿಧಾನವೇ ಶ್ರೇಷ್ಠ ಗ್ರಂಥವೆಂದು ಒಪ್ಪಿಕೊಂಡು ಸಂವಿಧಾನದ ಆಶ್ರಯದಲ್ಲಿ ಸುಖ ಜೀವನ ನಡೆಸುತ್ತಿದ್ದೇವೆ ಎಂದರೆ, ಇದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮೂಲ ಕಾರಣ ಜ್ಯೋತಿಬಾ ಪುಲೆ ಎಂದೇ ಹೇಳಬಹುದು. ಭಾರತದಲ್ಲಿ ಆರಂಭವಾದ ಸಮಾನತೆಯ ಕ್ರಾಂತಿಯು ಬುದ್ಧನ ಕಾಲದಿಂದ ಬಸವಣ್ಣನವರಿಗೆ ಹಿಡಿದು ಬಾಬಾ ಸಾಹೇಬರು ಬರೆದ ಸಂವಿಧಾನದಲ್ಲಿ ಅಂತ್ಯವಾಗುತ್ತದೆ. ಇದರ ಮಧ್ಯೆ ಭಾರತದ ಪಾಲಿನ ಜನರಿಗೆ ಮುಖ್ಯ ಘಟ್ಟವಾಗುವುದು, ಜ್ಯೋತಿಬಾ ಪುಲೆ ಅವರ ಸಾಮಾಜಿಕ ಕ್ರಾಂತಿ ಎಂದು ಭೀಮ್ ಆರ್ಮಿ ಸಂಘಟನೆಯ ಕೀರ್ತಿ ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ l ವಳಲಹಳ್ಳಿ ಗ್ರಾ.ಪಂ ಉಪಾಧ್ಯಕ್ಷರಾಗಿ ಹೆಚ್ ಆರ್ ಸುಧಾಕರ್ ಅವಿರೋಧ ಆಯ್ಕೆ
ಈ ವೇಳೆ ಮುಖಂಡರಾದ ರಾಕೇಶ್ ನಾಗರಾಜ್, ಹರೀಶ್ ಕೊನೆರ್ಲು, ವಕೀಲರಾದ ಉಮೇಶ್, ಭೀಮ್ ಆರ್ಮಿ ವಿದ್ಯಾರ್ಥಿ ಘಟಕದ ಸಂಚಾಲಕರಾದ ರಾಕೇಶ್ , ರಕ್ಷಿತ್, ಪ್ರತಾಪ್ ಅಜ್ಜೇನಹಳ್ಳಿ ವಿದ್ಯಾರ್ಥಿಗಳಾದ ಗಗನ್ ಹಾಗೂ ವಿನಯ್ ಇನ್ನಿತರರಿದ್ದರು.
