ಆಗಷ್ಟೇ ಜನಿಸಿದ ನವಜಾತ ಶಿಶುವನ್ನು ರಾಜಕಾಲುವೆಯಲ್ಲಿ ಬಿಸಾಡಿ ಹೋಗಿರುವ ಘಟನೆ ಹಾಸನ ತಾಲೂಕಿನ ಕುವೆಂಪು ನಗರದಲ್ಲಿ ಸೋಮವಾರ ನಡೆದಿದೆ.
ನವಜಾತ ಶಿಶುವಿನ ಮೃತದೇಹ ಕೊಳಚೆ ನೀರಿನಲ್ಲಿ ಪತ್ತೆಯಾದ ಹಿನ್ನಲೆ, ಸ್ಥಳೀಯರು ಸಮೀಪದ ಕೆ.ಆರ್.ಪುರಂ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲಿಸಿದಾಗ ಹೆಣ್ಣು ಶಿಶುವಿನ ಮೃತ ದೇಹವೆಂದು ಗೊತ್ತಾಗಿದೆ.
ಇದನ್ನೂ ಓದಿದ್ದೀರಾ?ಹಾಸನ l ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕ ಸಾವು
ನವಜಾತ ಶಿಶುವಿನ ಮೃತದೇಹದಲ್ಲಿ ಕರುಳ ಬಳ್ಳಿಯಿರುವುದರಿಂದ ಹುಟ್ಟಿದ ತಕ್ಷಣ ತಂದು ಬಿಸಾಡಿ ಹೋಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೃತ್ಯ ಎಸಗಿರುವವರನ್ನು ಪತ್ತೆ ಹಚ್ಚಲು ತನಿಖೆ ಪ್ರಾರಂಭವಾಗಿದೆ.
