ಹಾಸನ l ಬೆಳೆ ಬೆಳೆಯಲು, ಜಮೀನು ಅಳತೆ ಮಾಡಲು ಸುತ್ತಮುತ್ತಲಿನವರು ಬಿಡುತ್ತಿರಲಿಲ್ಲ

Date:

Advertisements

ಸುಮಾರು 20-25 ವರ್ಷದಿಂದ ಹಾಸನ ಜಿಲ್ಲೆ, ಹಾಸನ ತಾಲ್ಲೂಕಿನ ಕಸಬ ಹೋಬಳಿಯ ದೊಡ್ಡ ಬಾಗನಹಳ್ಳಿ ಸಮೀಪವಿರುವ ಅಗಿಲೆ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಕೃಷ್ಣಯ್ಯ ಕುಟುಂಬದವರು ವಾಸವಾಗಿದ್ದಾರೆ.

Screenshot 2025 01 23 22 02 05 56 7352322957d4404136654ef4adb64504
ಮುಳ್ಳಿನ ಗಿಡ ಗಂಟಿಗಳನ್ನು ಬೇರು ಸಮೇತ ತೆಗೆದು ಹಾಕಿರುವುದು

ಸುತ್ತಮುತ್ತಲಿನ ಸವರ್ಣೀಯರು ಕೃಷ್ಣಯ್ಯ ಅವರ ಜಮೀನು ಅಳತೆ ಮಾಡಲು ಹಾಗೂ ಬೆಳೆ ಬೆಳೆಯಲು ಬಿಡುತ್ತಿರಲಿಲ್ಲ. ಕುಟುಂಬದವರಿಗೆ 1981-82 ರಲ್ಲಿ ಸರ್ಕಾರದಿಂದ ಸರ್ವೇ ನಂ. 226/1ರಲ್ಲಿ 2 ಎಕರೆ 6 ಗುಂಟೆ ಜಮೀನು ದರಖಾಸ್ತು ಯೋಜನೆಯಲ್ಲಿ ಮಂಜೂರಾಗಿರುತ್ತದೆ.

ಈ ಜಮೀನನ್ನು ಅಳತೆ ಮಾಡಿ ಹದ್ದು ಬಸ್ತು ಮಾಡಿಸಲು ಅರ್ಜಿ ನೀಡಿದ್ದು, ಪರವಾನಗಿ ಭೂಮಾಪಕರು ಸ್ಥಳಕ್ಕೆ ಬಂದು ಭೂಮಿಯನ್ನು ಅಳತೆ ಮಾಡಲು ಮುಂದಾದಾಗ, ಅಲ್ಲಿ ಮುಳ್ಳಿನ ಗಿಡ ಗಂಟೆಗಳು ಬೆಳೆದಿದ್ದು ಭೂಮಿಯನ್ನು ಅಳತೆ ಮಾಡಲು ಸಾಧ್ಯವಾಗಿರಲಿಲ್ಲವೆಂದು ಅರ್ಜಿಯನ್ನು ವಿಲೆವಾರಿ ಮಾಡಿದರು ಎಂದು ಕುಟುಂಬಸ್ಥರು ಮಾಹಿತಿ ತಿಳಿಸಿದರು.

Advertisements
Screenshot 2025 01 23 21 59 39 36 7352322957d4404136654ef4adb64504
ಭೂಮಿ ಅಳತೆ ಮಾಡುವ ಸಂದರ್ಭ.

ಕಳೆದ ತಿಂಗಳು ಅಂದರೆ ದಿನಾಂಕ:-06-11-2024 ರಂದು ಜಮೀನಿನಲ್ಲಿ ಬೆಳೆದಿರುವ ಗಿಡ ಗಂಟೆಗಳನ್ನು ತೆರವುಗೊಳಿಸುತ್ತಿರುವ, ಸಂಧರ್ಭದಲ್ಲಿ ಅಕ್ಕ ಪಕ್ಕದ ಜಮೀನಿನವರು ಈ ಜಾಗ ಸರ್ಕಾರಿ ಜಮೀನು ಇದನ್ನೇಕೆ ತೆರವುಗೊಳಿಸುತ್ತಿರುವೆ ಎಂದು ಜಮೀನು ಮಾಲೀಕರಾದ ಕೃಷ್ಣಯ್ಯ ಅವರ ಮೇಲೆ ಐದಾರು ಜನ ಹಲ್ಲೆ ಮಾಡಿದ್ದರು ಎಂದು ಕುಟುಂಬದವರು ಈದಿನ.ಕಾಮ್ ಗೆ ಮಾಹಿತಿ ನೀಡಿದರು.

Screenshot 2025 01 23 21 59 24 43 7352322957d4404136654ef4adb64504
ದಲಿತ ಕುಟುಂಬದವರ ಮೇಲೆ ಸುತ್ತಲಿನವರು ಹಲ್ಲೆ ಮಾಡಿದಾಗ ಕೇಸ್ ದಾಖಲಿಸಿರುವುದು.

ಇದರಿಂದ ಮನನೊಂದ ಕುಟುಂಬದವರು ಅಂದಿನ ದಿನವೇ ಭೀಮ್ ಆರ್ಮಿ ಸಂಘಟನೆಗೆ ಮನವಿ ಸಲ್ಲಿಸಿದ್ದರು. ಆ ದಿನವೇ ಸಂಘಟನೆಯವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಹಲ್ಲೆ ಮಾಡಿರುವವರನ್ನು ಬಂಧಿಸಲಾಗಿತ್ತು. ಈಗ ಎರಡ್ಮೂರು ತಿಂಗಳಲ್ಲಿ ಭೀಮ್ ಆರ್ಮಿ ಸಂಘಟನೆ ಹಾಗೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯೊಂದಿಗೆ ಜಮೀನು ಅಳತೆ ಮಾಡಲು ಯಶಸ್ವಿಗೊಂಡಿದೆ.

ಇದನ್ನೂ ಓದಿದ್ದೀರಾ?ಹಾಸನ | ಗೊಟ್ರುವಳ್ಳಿ ಗ್ರಾಮದ ಖಾತೆ ಸಂಖ್ಯೆ 97/112ರ ನಿವೇಶನ ಮರುಸರ್ವೇಗೆ ಜಿಲ್ಲಾಧಿಕಾರಿ ಆದೇಶ

ಇದಕ್ಕೆ ಸಂಭಂದಿಸಿದಂತೆ ಹಲ್ಲೆ ಮಾಡಿದವರ ಮೇಲೆ ಕೇಸು ದಾಖಲಾಗಿ ವಿಚಾರಣೆ ಹಂತದಲ್ಲಿದ್ದಾಗ, ಕೆಲವು ದಿನಗಳಿಂದ ಅಕ್ಕಪಕ್ಕದ ಜಮೀನಿನವರು ಯಾವುದೇ ತೊಂದರೆ ನೀಡುವುದಿಲ್ಲ ಎಂದಾಗ, ಕೃಷ್ಣಯ್ಯ ಅವರ ಜಮೀನನ್ನು ಅಳತೆ ಮಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯೊಂದಿಗೆ, ಜಮೀನನ್ನು ಅಳತೆ ಮಾಡಿಸಲಾಗಿದೆ ಎಂದು ಭೀಮ್ ಆರ್ಮಿ ಸಂಘಟನೆ ಜಿಲ್ಲಾಧ್ಯಕ್ಷ ಈದಿನ.ಕಾಮ್ ಜೊತೆ ಮಾಹಿತಿ ನೀಡಿದರು.

ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಸಮಾಜದಲ್ಲಿ ಜನರು ಎಲ್ಲರೂ ಒಂದಾಗಿ ಕೂಡಿ ಬಾಳಿದರೆ ಈ ರೀತಿಯ ಘಟನೆಗಳಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸಬಹುದು.

WhatsApp Image 2024 10 24 at 12.02.30
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಹೊಳಲ್ಕೆರೆ ತಾಲ್ಲೂಕು ಚಿತ್ರದುರ್ಗ ಜಿಲ್ಲೆ ರಾಮಗಿರಿ ವ್ಯಾಪ್ತಿಯಲ್ಲಿ ಬರುವ ಅಂಬ್ಲಿಹಳ್ಳಿ ವ್ಯಾಪ್ತಿಯಲ್ಲಿ ಬರುವ ಮಾದೇಗೌಡ್ರ ಜಾಮೀನು ಅಳತೆ ಮಾಡಿಸಿದಾಗ ಪಕ್ಕದ ಜಮೀನಿನ ಜಾಗವು ಬಂದಿರುತ್ತದೆ ,ಪಕ್ಕದ ಜಮೀನಿನ ಮಾಲಿಕರೂ ಅಳತೆ ಮಾಡಿಸಿದಾಗಲೂ ಸಹ ಅವರ ಜಮೀನಿನ ಜಾಗ ಬಂದಿದ್ದರೂ ಬಿಟ್ಟುಕೊಡುತ್ತಿಲ್ಲ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X