ಜನ ವಸತಿ ಪ್ರದೇಶದಲ್ಲಿ ಅಪರಿಚಿತ ಕಾರು ಪತ್ತೆಯಾಗಿರುವ ಘಟನೆ, ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿಯ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ಬೆಳಗಿನ ಜಾವ 4.30 ಸಮಯದಲ್ಲಿ ಎರಡು ಕಾರುಗಳು ಬಂದಿದ್ದು, ಎರಡು ಕಾರುಗಳಲ್ಲಿ ಒಂದು ಕಾರನ್ನು ಜನವಸತಿ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ನಿಲ್ಲಿಸಿ ಹೋಗಿರುತ್ತಾರೆ. ಅದೇ ಗ್ರಾಮದ ಜನರು ಇದರ ಬಗ್ಗೆ ಗಮನ ಹರಿಸದೆ ಅವರ ದಿನ ನಿತ್ಯ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ಇದನ್ನೂ ಓದಿದ್ದೀರಾ?ಹಾಸನ l ರಸ್ತೆ ಮಧ್ಯದಲ್ಲಿ ಕಾಡಾನೆ ಕಳೇಬರ ಪತ್ತೆ
ಕಲ್ಲಹಳ್ಳಿ ಗ್ರಾಮದ ಜನರನ್ನು ಕೆಲಸಕ್ಕೆ ಕರೆದುಕೊಂಡು ಬಂದ ಕಾರಿನ ಚಾಲಕ ನೋಡಿ ಊರಿನ ಜನರಿಗೆ ತಿಳಿಸಿದ್ದಾರೆ. ಕಾರಿನ ಒಳಗೆ ಮತ್ತು ಮೇಲಿನ ಭಾಗ ರಕ್ತ ಕಲೆಗಳಿಂದ ಕೂಡಿದ್ದು, ಗ್ರಾಮಸ್ಥರಲ್ಲಿ ಆತಂಕಗೊಂಡು ಯಸಳೂರು ಪೊಲೀಸ್ ಠಾಣೆಗೆ ತಿಳಿಸುತ್ತಾರೆ. ಈ ಘಟನೆ ಕುರಿತು ಸ್ಥಳಕ್ಕೆ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಿಖರ ಕಾರಣ ತನಿಖೆಯ ಬಳಿಕ ತಿಳಿಯಬೇಕಿದೆ ಎಂದು ತಿಳಿಸಿದರು.