ವಿದ್ಯುತ್ ತಂತಿ ಸ್ಪರ್ಶಿಸಿ ಲಕ್ಷ್ಮಣ (50) ಎಂಬ ವ್ಯಕ್ತಿ ಮೃತಪಟ್ಟಿರುವ ಘಟನೆ, ಹಾಸನ ಜಿಲ್ಲೆ ಆಲೂರು ತಾಲೂಕಿನ ಕಾಮತಿ ಕೂಡುಗೆಯ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಕಾಮತಿ ಕೂಡುಗೆಯ ಗ್ರಾಮದ ತೋಟ ಒಂದರಲ್ಲಿ ಕಾಳು ಮೆಣಸು ಕುಯುವ ಸಂದರ್ಭದಲ್ಲಿ 11 ಕೆವಿ ವಿದ್ಯುತ್ ಸ್ಪರ್ಷಿಸಿದ್ದರಿಂದ ಲಕ್ಷ್ಮಣ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಜಮೀನು ಮಾಲೀಕರು ವಿದ್ಯುತ್ ತಂತಿಯನ್ನು ತೆಗಿಸದೆ, ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ತೋಟದಲ್ಲಿ ಮೆಣಸು ಕುಯಿಸಲು ಹೋಗಿದರಿಂದ ಈ ಘಟನೆ ಸಂಭವಿಸಿದೆ, ಎಂದು ಗ್ರಾಮಸ್ಥರು ಜಮೀನು ಮಾಲೀಕನ ವಿರುದ್ಧ ಆರೋಪ ಮಾಡಿದ್ದಾರೆ.
ಇದನ್ನೂ ಓದಿದ್ದೀರಾ?ದುಂಡು ಮೇಜಿನ ಸಭೆ | ಪಕ್ಷ ಭೇದ ಮರೆತು ಹಾಸನ ವಿವಿ ಉಳಿಸುವೆವು: ಸಂಸದ ಶ್ರೇಯಸ್ ಎಂ ಪಟೇಲ್
ಮೃತಪಟ್ಟ ಲಕ್ಷಣ ಕುಟುಂಬದವರ ನೋವಿನ ಆಕ್ರಂದನ ಮುಗಿಲು ಮುಟ್ಟಿದೆ, ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
