ಹಾಸನ ನಗರದ ಕಾರ್ಮಿಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪರುಶುರಾಮ ಎಂಬುವವರು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಅಥಿತಿಯಾಗಿದ್ದಾರೆ.
ಹಾಸನ ನಗರದ ಹೋಟೆಲ್ ಮಾಲೀಕ ಅರುಣ್ ಅವರಿಂದ ಕಾರ್ಮಿಕ ಅಧಿಕಾರಿ ಪರಶುರಾಮ ಎಂಬುವವರು ₹10,000 ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹಿರಿಯ ಕಾರ್ಮಿಕ ನಿರೀಕ್ಷಕ ಪರಶುರಾಮ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.
ಹೋಟೆಲ್ ಮಾಲೀಕ ಅರುಣ್ ಅವರಿಂದ ₹10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ದೂರು ದಾಖಲಿಸಿಕೊಂಡಿದ್ದ, ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಬಾಲು ಹಾಗೂ ಶಿಲ್ಪಾ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಲಂಚ ಸ್ವೀಕರಿಸುತ್ತಿದ್ದುದ್ದನ್ನು ಕಂಡ ಕೂಡಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ l ಪ್ರೇಯಸಿ ಕೊಲೆಗೆ ಯತ್ನ; ಆರೋಪಿ ಮೋಹಿತ್ ಬಂಧನ
ಲಂಚ ಸ್ವೀಕರಿಸುತ್ತಿದ್ದ ಪರಶುರಾಮ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.