“ನಾನು ಹೈಕಮಾಂಡ್‌ಗೆ ನಿಷ್ಠನಾಗಿದ್ದು, ಆದೇಶವನ್ನು ಪಾಲಿಸುತ್ತೇನೆ. ಆದರೆ ಗುಲಾಮನಲ್ಲ” ಎಂದು ಹಾಸ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದರು.
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, “ನನಗೆ ನಾನೇ ಹೈಕಮಾಂಡ್. ನಮ್ಮ ಮತದಾರರೇ ನನಗೆ ಹೈಕಮಾಂಡ್. ರಾಜ್ಯ ಘಟಕದ ಅಧ್ಯಕ್ಷ, ರಾಷ್ಟ್ರೀಯ ಅಧ್ಯಕ್ಷರು ಇದ್ದಾರೆ. ಅವರಿಗೆ ಕೊಡಬೇಕಾದ ಗೌರವ ಕೊಡುತ್ತೇವೆ. ಅವರ ಮಾತು ಯಾವುದು ಕೇಳಬೇಕೋ ಅದನ್ನು ಕೇಳುತ್ತೇವೆ. ಅವರ ಮಾತನ್ನು ಧಿಕ್ಕರಿಸುವುದಿಲ್ಲ” ಎಂದು ಹೇಳಿದರು.
ʼರಾಜಣ್ಣ ಕೆಪಿಸಿಸಿ ಅಧ್ಯಕ್ಷರ ರೀತಿ ಆಡುತ್ತಿದ್ದಾರೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ನಾನು ಅವರ ಅಪ್ಪ ಅಂತ ಹೇಳಿ. ಅದಕ್ಕಿಂತ ಮೇಲೆ ಯಾರಾದರೂ ಇದ್ದರೆ, ಅದಕ್ಕೂ ಅಪ್ಪನೇ. ನನ್ನ ನಡವಳಿಕೆಯನ್ನು ಜನರು ಮೆಚ್ಚಬೇಕಷ್ಟೆ. ಮುಖಂಡರನ್ನು ಮೆಚ್ಚಿಸುವ ನಡವಳಿಕೆ ನನಗೆ ಬೇಕಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ: ಸಚಿವ ಕೆ ಎನ್ ರಾಜಣ್ಣ ವಿಶ್ವಾಸ
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, “ಯಾರು ಕಮಿಷನ್ ಕೇಳುತ್ತಿದ್ದಾರೆಂದು ದೂರು ಕೊಡಬೇಕಲ್ಲ ಅವರು?” ಎಂದು ಕೇಳಿದರು.