ಹಾಸನ ತಾಲೂಕಿನ ನಿಟ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಡೆದ 2025ರ ಮೇ 15ರಿಂದ ಮುಂದಿನ 5 ವರ್ಷದವರೆಗೆ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಯ ಸಾಮಾನ್ಯ ಚುನಾವಣೆಯಲ್ಲಿ ಸಾಲಗಾರಲ್ಲದ ಮತಕ್ಷೇತ್ರದಿಂದ ಬಾಬು ಅವರು ಮುನ್ನಡೆ ಸಾಧಿಸುವ ಮೂಲಕ ಆಡಳಿತ ಮಂಡಳಿಗೆ ಚುನಾಯಿತರಾಗಿದ್ದಾರೆ.
ಸಾಲಗಾರರಲ್ಲದ ಮತಕ್ಷೇತ್ರದಿಂದ ಇಬ್ಬರು ಸ್ಪರ್ಧಿಸಿದ್ದು, ಬಾಬು ಅವರು ಜಯಶೀಲರಾಗಿದ್ದು, ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ.
ಸಾಲಗಾರರ ಕ್ಷೇತ್ರದಿಂದ ಪರಿಶಿಷ್ಟ ಜಾತಿ-01, ಪರಿಶಿಷ್ಟ ಪಂಗಡ – 01 ಹಿಂದುಳಿದ ವರ್ಗ – 02(ಪ್ರವರ್ಗ ಎ -01, ಪ್ರವರ್ಗ ಬಿ- 01), ಹಾಗೂ ಸಾಮಾನ್ಯ -05 ಸೀಟುಗಳಿಗೆ ಚುನಾವಣೆ ನಡೆದಿತ್ತು.

ಸಾಲಗಾರ ಮತಕ್ಷೇತ್ರ ಹಾಗೂ ಸಾಲಗಾರರಲ್ಲದ ಮತಕ್ಷೇತ್ರದಿಂದ ಒಂದು ಸ್ಥಾನ ಸೇರಿದಂತೆ ಒಟ್ಟು 12 ಸ್ಥಾನಗಳಿಗೆ ಮೀಸಲಿರಿಸಿದ ಮತಕ್ಷೇತ್ರದಿಂದ ನಿಟ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಚುನಾವಣೆಗೆ ಸ್ಪರ್ಧಿಸಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಂಗಾರದ ಷೇರು ಹೂಡಿಕೆ, ವೈದ್ಯನಿಗೆ 2.40 ಕೋಟಿ ರೂ. ಆನ್‌ಲೈನ್ ವಂಚನೆ, ಎಫ್‌ಐಆರ್.
ಸಹಕಾರ ಸಂಘಗಳ ನಿಯಮಗಳು 1960, ನಿಯಮ 14ಜಿ ನಲ್ಲಿನ ಉಪಬಂಧು ಅನುಸಾರ ಮೀಸಲು ಮತಕ್ಷೇತ್ರದಿಂದ ಕ್ರಮಬದ್ಧವಾಗಿ 12 ಮಂದಿ ಚುನಾಯಿತರಾಗಿದ್ದಾರೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಸನ ತಾಲೂಕು ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ.

ಸಾಲಗಾರರ ಮತಕ್ಷೇತ್ರದಿಂದ ಸಾಮಾನ್ಯ ವರ್ಗದ 5 ಮಂದಿ ಅಭ್ಯರ್ಥಿಗಳು ಜಯಶೀಲರಾಗಿದ್ದು, ಹಿಂದುಳಿದ ವರ್ಗದಿಂದ ಇಬ್ಬರು, ಮಹಿಳಾ ಮೀಸಲು ಕ್ಷೇತ್ರದಿಂದ ಇಬ್ಬರು ಹಾಗೂ ಎಸ್‌ಸಿ/ಎಸ್‌ಟಿ ಮತಕ್ಷೇತ್ರದಿಂದ ಇಬ್ಬರು ಚುನಾಯಿತರಾಗಿದ್ದಾರೆ.