ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಾಡುಮನೆ ಗ್ರಾಮದಲ್ಲಿ ಸರ್ವೆ ನಂಬರ್ 76 ರ ವ್ಯಾಪ್ತಿಯಲ್ಲಿದ್ದ, 22.3 ಎಕರೆ ಕಾಫಿ ತೋಟವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು.

ಬೆಂಗಳೂರು ಮೂಲದ ಮನೋಹರ್ ಅಯ್ಯರ್ ಎಂಬ ವ್ಯಕ್ತಿ ಅನಧಿಕೃತವಾಗಿ ಸಾಗುವಳಿ ಮಾಡಿದ್ದ, ಸರ್ವೆ ನಂಬರ್ 76 ರ ವ್ಯಾಪ್ತಿಯಲ್ಲಿದ್ದ, 22.3 ಎಕರೆ ಕಾಫಿತೋಟವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತೆರವುಗೊಳಿದ್ದಾರೆ.

ಮೂರ್ಖಣ್ಣಗುಡ್ಡ ವ್ಯಾಪ್ತಿಯ ಸೇಕ್ಷನ್ 4 ರಕ್ಷಿತಾರಣ್ಯಕ್ಕೆ ಈ ಕಾಫಿ ತೋಟ ಸೇರ್ಪಡೆಯಾಗಿದೆ ಎಂದು ವಲಯ ಅರಣ್ಯಾಧಿಕಾರಿ ಹೇಮಂತ್ ಅವರು ಭೂಮಿಗೆ ಸಂಬಂಧಿಸಿದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ತೋಟದ ಮಾಲೀಕರು ನ್ಯಾಯಾಲಯಕ್ಕೆ ಭೂಮಿ ದಾಖಲೆ ಸಲ್ಲಿಸಲು ವಿಫಲರಾದ ಹಿನ್ನಲೆಯಲ್ಲಿ, ಫ್ರೆಬ್ರವರಿ 27ರಂದು 64ಎ ಅಡಿಯಲ್ಲಿ ಭೂಮಿ ವಶಕ್ಕೆ ನ್ಯಾಯಾಲಯ ಆದೇಶಿಸಿತ್ತು. ಈ ಕುರಿತು ವಲಯ ಅರಣ್ಯಾಧಿಕಾರಿ ಹೇಮಂತ್ ನೇತೃತ್ವದಲ್ಲಿ ಶನಿವಾರ ಸುಮಾರು 50ಕ್ಕೂ ಅಧಿಕ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 10ಕ್ಕೂ ಅಧಿಕ ಯಂತ್ರಗಳನ್ನು ಬಳಸಿ ತೋಟದಲ್ಲಿದ್ದ, ಕಾಫಿಗಿಡಗಳನ್ನು ತೆರವುಗೊಳಿಸಿ ತೋಟವನ್ನು ಅರಣ್ಯ ಇಲಾಖೆಗೆ ವಶಪಡಿಸಿಕೊಂಡು ನಾಮ ಫಲಕ ಆಳವಡಿಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ l ಆನೆ ದಾಳಿ; ಪ್ರಾಣಾಪಾಯದಿಂದ ಕಾರ್ಮಿಕ ಪಾರು
ಈ ಜಾಗಕ್ಕೆ ಹಲವು ಬಗೆಯ ಅರಣ್ಯ ಗಿಡಗಳನ್ನು ನೆಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದರು. ಈ ವೇಳೆ ಕಾರ್ಯಚರಣೆಯಲ್ಲಿ ಉಪ ವಲಯಾಧಿಕಾರಿಗಳಾದ ಮಹದೇವಪ್ಪ, ದರ್ಶನ್, ಮಂಜುನಾಥ್ ಹಾಗೂ ಅರಣ್ಯ ಸಿಬ್ಬಂದಿಯವರು ಹಾಗೂ ಇನ್ನಿತರರಿದ್ದರು.