ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಸಾಲ ನೀಡಿ ಅಕ್ರಮವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದು, ಕೆಲ ಬಡ್ಡಿ ದಂಧೆಕೋರರು ತಿಂಗಳಿಗೆ ಶೇ. 40ರಂತೆ, ವಾರಕ್ಕೆ ಶೇ. 10ರಂತೆ ಹಾಗೂ ಮನಬಂದಂತೆ ಬಡ್ಡಿ ದಂಧೆ ನಡೆಸುತ್ತಿದ್ದಾರೆ ಎಂದು ಸನ್ಯಾಸಿಹಳ್ಳಿ ಗ್ರಾಮದ ಯುವಕ ಶ್ರೀನಿವಾಸ್ ಆರೋಪಿಸಿದ್ದಾರೆ.
“ಬರಗಾಲ ಆವರಿಸಿರುವ ಇಂತಹ ಸಂದರ್ಭದಲ್ಲಿ ಜನರು ಸಂಕಷ್ಟದಿಂದ ಜೀವನ ಸಾಗಿಸುವಂತಾಗಿದೆ. ಕೂಲಿನಾಲಿ ಮಾಡಿ ಬೆವರು ಹರಿಸಿ ತಂದ ಹಣವನ್ನು ವಾರದ ಬಡ್ಡಿ ಕಟ್ಟುವಂತಾಗಿದ್ದು, ನಿತ್ಯದ ಜೀವನೋಪಾಯಕ್ಕೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಅಕ್ರಮ ಬಡ್ಡಿ ದಂಧೆಯಿಂದ ಬಹುತೇಕ ಕುಟುಂಬಗಳ ಜೀವನ ದುಸ್ತರವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮದ್ಯದಂಗಡಿ ತೆರೆಯಲು ಪರವಾನಗಿ ನೀಡದಂತೆ ಗ್ರಾಮೀಣ ಕೂಲಿಕಾರರ ಸಂಘಟನೆ ಆಗ್ರಹ
“ಸಾಲ ಪಡೆದ ಹಣಕ್ಕೆ ಬಡ್ಡಿ ನೀಡದಿದ್ದರೆ ಹಣ ನೀಡಿದವರು ಹಲವು ಬಗೆಯಲ್ಲಿ ದೌರ್ಜನ್ಯ ಮಾಡುತ್ತಾರೆ. ತಮ್ಮ ಗ್ರಾಮದಲ್ಲೇ ಚೀಟಿ ಹೆಸರಿನಲ್ಲಿ ಪ್ರತಿ ಸೋಮವಾರ ಅಕ್ರಮ ಬಡ್ಡಿ ದಂಧೆ ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆಯವರು ತನಿಖೆ ನಡೆಸಿ ಬಡ ಕುಟುಂಬಗಳ ಜೀವ ಉಳಿಸಬೇಕು” ಎಂದು ನೂಂದ ಯುವಕ ಶ್ರೀನಿವಾಸ್ ಅವಲತ್ತುಕೊಂಡಿದ್ದಾರೆ.