ಸುಮಾರು ₹1.50 ಲಕ್ಷ ಮೌಲ್ಯದ ಹಂದಿಗಳ ಕಳ್ಳತನವಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಂದನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಪ್ರತಿವಾರ ಚಂದನಹಳ್ಳಿ ಅಮ್ಮನ ದೇವಾಲಯದ ಬಳಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ಹಬ್ಬ ಬಂದ ಕಾರಣ ದಾವಣಗೆರೆ ಹಾಗೂ ಹೈದರಾಬಾದ್ ಭಾಗಗಳಿಂದ ಶನಿವಾರ ರಾತ್ರಿ ವ್ಯಾಪಾರಕ್ಕಾಗಿ ತರಿಸಿದ್ದ ಸುಮಾರು ₹3.5 ಲಕ್ಷ ಮೌಲ್ಯದ ಹಂದಿಗಳನ್ನು ತಮ್ಮ ಶೆಡ್‌ನಲ್ಲಿ ಶೇಖರಿಸಲಾಗಿತ್ತು.

ಸಂತ್ರಸ್ತ ಶೇಖರ್ ಮಾಧ್ಯಮಗಳೊಂದಿಗೆ ಮಾತನಾಡಿ, “ಹಂದಿಗಳಿಗೆ ಮೇವು ಹಾಕಲು ಬಂದ ಸಮಯದಲ್ಲಿ ಸುಮಾರು 25ಕ್ಕೂ ಹೆಚ್ಚು ಅಂದರೆ ₹1.50 ಲಕ್ಷ ಮೌಲ್ಯದ ಹಂದಿಗಳ ಕಳ್ಳತನವಾಗಿದೆ. ನಾನು ಮತ್ತು ನನ್ನ ಸ್ನೇಹಿತ ಮುರುಳಿ ಸೇರಿ ಸಾಲ ಮಾಡಿ ಸುಮಾರು ₹3.50 ಲಕ್ಷ ಮೌಲ್ಯದ ಹಂದಿಗಳನ್ನು ಖರೀದಿ ಮಾಡಿದ್ದೇವೆ” ಎಂದು ಮಾಹಿತಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ವಿದ್ಯುತ್ ತಂತಿ ತುಳಿದು ಮೂರು ಕರಡಿ ಸಾವು
ಪ್ರಕರಣಕ್ಕೆ ಸಂಬಂಧಿಸಿದಂತೆ ಅರೇಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ. ದೂರು ನೀಡಿದ ಕೂಡಲೇ ಠಾಣೆಗೆ ಎಲ್ಲ ವ್ಯಾಪಾರಸ್ಥರನ್ನು ಕರೆದು ಸರಿಯಾಗಿ ವ್ಯಾಪಾರ ಮಾಡುವಂತೆ ತಿಳಿ ಹೇಳಿದ್ದಾರೆ. ಕಳ್ಳತನ ಮಾಡಿರುವವರು ಯಾರೆಂದು ಪತ್ತೆಹಚ್ಚಿ ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.