ʼಶಕ್ತಿ ಯೋಜನೆʼ ಪ್ರಣಾಳಿಕೆ ಬರೆದವನೇ ನಾನು. ಐದು ವರ್ಷವೂ ಶಕ್ತಿ ಯೋಜನೆ ಅನುಷ್ಠಾನದಲ್ಲಿ ಇರಲಿದೆಯೆಂದು ಅಂದೇ ಹೇಳಿದ್ದೇನೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಸ್ಪಷ್ಟಪಡಿಸಿದರು.
ಹಾಸನ ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಯೋಜನೆಯನ್ನು ಏಕೆ ದುರುಪಯೋಗ ಮಾಡುತ್ತಿದ್ದೀರೆಂದು ಕೆಲವರು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ‘ಎಕ್ಸ್’ ಮೂಲಕ ಕೇಳಿದ್ದಾರೆ. ಅವರೂ ಕೂಡಾ ಅದನ್ನೇ ಹೇಳಿದ್ದಾರೆ. ಆದರೆ, ಸರ್ಕಾರದ ಮಟ್ಟದಲ್ಲಿ ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ, ತೀರ್ಮಾನವೂ ಆಗಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂ.ಗ್ರಾಮಾಂತರ | ರಾಜ್ಯೋತ್ಸವ ಪ್ರಶಸ್ತಿಗೆ ಸಾವಯವ ಕೃಷಿಕ ಶಿವನಾಪುರ ರಮೇಶ್ ಆಯ್ಕೆ
“ಗ್ಯಾರಂಟಿ ನಿಲ್ಲಿಸುವುದಾಗಿ ವಿರೋಧ ಪಕ್ಷದವರು ಗೊಂದಲ ಸೃಷ್ಟಿಮಾಡಿದ್ದಾರೆ. ಆದರೆ ಯಾವುದೇ ಯೋಜನೆ ನಿಲ್ಲುವುದಿಲ್ಲ” ಎಂದರು.