ಹಾಸನ | ಮನೆಯಂಗಳದಲ್ಲೇ ಅಂತ್ಯಸಂಸ್ಕಾರಕ್ಕೆ ಮುಂದಾದ ಪ್ರಕರಣ; ಸೂರನ್ನೂ ಕಳೆದುಕೊಳ್ಳುವ ಭೀತಿ

Date:

Advertisements

ಶವವನ್ನು ಹೂಳಲು ಜಾಗವಿಲ್ಲದೆ ಮನೆಯಂಗಳದಲ್ಲೇ ಅಂತ್ಯಸಂಸ್ಕಾರ ಮಾಡುವ ಪ್ರಯತ್ನ ನಡೆಸಿದ್ದ ಕುಟುಂಬವೊಂದು ತಾವು ವಾಸವಿರುವ ಸ್ಥಳವನ್ನೂ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಶಂಭುನಾಥಪುರದ ಗಿಡ್ಡಯ್ಯ ಅವರು ಶನಿವಾರ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಊಳಲು ಜಾಗವಿಲ್ಲದೆ, ಮನೆಯ ಕಂಗಳದಲ್ಲಿಯೇ ಅಂತ್ಯಸಂಸ್ಕಾರ ಮಾಡಲು ಅವರ ಕುಟುಂಬ ನಿರ್ಧಿಸಿತ್ತು.

ಘಟನೆ ಬಗ್ಗೆ ತಿಳಿದ ಸಿಪಿಐಎಂ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರ ತಂಡ ಅವರು ಗಿಡ್ಡಯ್ಯ ಮನೆಗೆ ಭೇಟಿ ನೀಡಿ,ಕುಟುಂಬದ ಸಮಸ್ಯೆಗಳ ಬಗ್ಗೆ ಆಲಿಸಿತ್ತು. ಆ ವೇಳೆ, ಆ ಕುಟುಂಬಕ್ಕೆ ಇರುವ ಸೂರನ್ನೂ ಕಳೆದುಕೊಳ್ಳುವ ಆತಂಕವಿದೆ. ಕುಟುಂಬಸ್ಥರು ಆ ಮನೆ ತಮ್ಮದೆಂದು ಹೇಳಿಕೊಳ್ಳಲು ಯಾವುದೇ ದಾಖಲೆಗಳಿಲ್ಲ ಎಂಬುದನ್ನು ತಂಡ ಗಮನಿಸಿದೆ.

ಕುಟುಂಬದಲ್ಲಿ ಐವರು ಸದಸ್ಯರು ವಾಸ ಮಾಡುತ್ತಿದ್ದು, ಅವರಲ್ಲಿ ಗಿಡ್ಡಯ್ಯ ಶನಿವಾರ ನಿಧನರಾಗಿದ್ದಾರೆ. ಇಬ್ಬರು ಗಂಡು ಮಕ್ಕಳು ಸೇರಿ ನಾಲ್ವರು ಶಿಥಿಲಗೊಂಡಿರುವ ಸಣ್ಣ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದಾರೆ. ಈ ಜಾಗ ತಮ್ಮದೆಂದು ಗ್ರಾಮದ ನಲ್ಲೂರ ಎಂಬುವವರು ದಾವೆ ಹೂಡಿದ್ದಾರೆ. ಮನೆಯ ಜಾಗವೂ ತಮ್ಮ ಕೈಪ್ಪುವ ಆತಂಕದಲ್ಲಿದ್ದು, ಮನೆ ಉಳಿಸಿಕೊಳ್ಳಲು ಕುಟಂಬ ಹೋರಾಟ ನಡೆಸುತ್ತಿದೆ.

Advertisements

“ನಮ್ಮ ಕುಟುಂಬಕ್ಕೆ ನಮ್ಮದೆಂದು ಹೇಳಿಕೊಳ್ಳಲು ಒಂದಿಂಚೂ ಜಾಗವಿಲ್ಲ. ಶವಸಂಸ್ಕಾರಕ್ಕೆ ಜಾಗ ಇರುವುದು ಐದಾರು ಕಿ.ಮೀ ದೂರದಲ್ಲಿ. ಅಲ್ಲಿವರೆಗೆ ಹೊತ್ತುಕೊಂಡು ಹೋಗಲು ಸಾಧ್ಯವಾಗದೆ, ಅನಿವಾರ್ಯವಾಗಿ ಮನೆಯಂಗಳದಲ್ಲೇ ಅಂತ್ಯಸಂಸ್ಕಾರಕ್ಕೆ ನಿರ್ಧರಿದ್ದೆವು” ಎಂದು ಕುಟುಂಬಸ್ಥ ನಿಂಗರಾಜು ಹೇಳಿದರು.

ಸೂರು ಕೊಟ್ಟರು ದಾಖಲೆ ಕೊಡಲಿಲ್ಲ:

ಇಂದಿರಾಗಾಂಧಿ ಪ್ರಧಾನಿ ಆಗಿದ್ದ ವೇಳೆ 20 ಅಂಶಗಳ ಜಾರಿ ಸಂದರ್ಭದಲ್ಲಿ ಶಂಭುನಾಥಪುರದ ದಲಿತರಿಗೆ ಅರಕಲಗೂಡು-ಹಾಸನ ಹೆದ್ದಾರಿಯಲ್ಲಿ ಸರ್ವೆ ನಂ. 35/6ರಲ್ಲಿ 13 ಗುಂಟೆ, 35/7ರಲ್ಲಿ 12 ಗುಂಟೆ ಮತ್ತು 35/8ರಲ್ಲಿ 7 ಗುಂಟೆ ಜಾಗವನ್ನು ಸಕಲೇಶಪುರ ಉಪವಿಭಾಗಾಧಿಕಾರಿ ಭೂಸ್ವಾಧೀನಪಡಿಸಿಕೊಂಡು ಹಂಚಿದ್ದಾರೆ. ಬಳಿಕ ಹೊನ್ನವಳ್ಳಿ ಮಂಡಲ ಪಂಚಾಯಿತಿಯವರು ಗಿಡ್ಡಯ್ಯ ಅವರ ತಂದೆಗೆ ಒಂದು ಮನೆಯನ್ನು ನೀಡಿದ್ದಾರೆ. ನಂತರದ 20 ವರ್ಷಗಳ ನಂತರ ಮನೆ ದುರಸ್ತಿಗೆ ಹೆಂಚು ಮತ್ತು ಮರದ ಸಾಮಗ್ರಿಗಳನ್ನು ನೀಡಿದ್ದಾರೆ. ಮಂಡಲ ಪಂಚಾಯಿತಿ ಹೋಗಿ ಗ್ರಾಮಪಂಚಾಯಿತಿ ಬಂದ ಬಳಿಕ ಗ್ರಾಮ ವಡ್ಡರಹಳ್ಳಿ ಗ್ರಾಮ ಪಂಚಾಯಿತಿಗೆ ಸೇರ್ಪಡೆಯಾಗಿದ್ದು, ಈ ಎಲ್ಲ ದಾಖಲೆಗಳನ್ನು ವರ್ಗಾಯಿಸಲಾಗಿದೆ.

ವಡ್ಡರಹಳ್ಳಿ ಪಂಚಾಯಿತಿಯಿಂದ ಗಿಡ್ಡಯ್ಯ ಅವರ ಸೊಸೆ ಕವಿತಾ ಅವರಿಗೆ ಮನೆಯನ್ನು ಮಂಜೂರು ಮಾಡಿದ್ದು, ಇದೇ ಜಾಗಕ್ಕೆ ಚಕ್ಕುಬಂದಿ ಹಾಕಿ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಗ್ರಾಮಪಂಚಾಯಿತಿಯವರೇ ನಿಂತು ನೊಂದಾಯಿಸಿದ್ದಾರೆ. ಆದರೂ ಈ ಜಾಗ ಇವರದ್ದಲ್ಲ. ನಿವೇಶನ ಉದ್ದೇಶಕ್ಕೆ ಭೂ ಸ್ವಾಧೀನಪಡಿಸಿಕೊಂಡ ಬಳಿಕವೂ ದಾಖಲೆಗಳು ಬೇರೆಯವರ ಹೆಸರಿನಲ್ಲಿ ಉಳಿದುಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಹಾಗೆ ಉಳಿದುಕೊಂಡಿದೆ.

ದಾಖಲೆ ಆಧಾರದಲ್ಲಿ ಅರಕಲಗೂಡು ಹಿರಿಯ ಸಿವಿಲ್ ನ್ಯಾಯಾಲಯ ನಲ್ಲೂರ ಬಿನ್ ನಲ್ಲೂರ ಅವರು ಈ ಜಾಗದ ಮಾಲೀಕತ್ವ ಹೊಂದಿದ್ದಾರೆಂದು ತೀರ್ಪು ನೀಡಿದೆ. ಈ ವೇಳೆ 2007ರಲ್ಲಿ ಪಹಣಿ ಮತ್ತು ಮ್ಯುಟೇಷನ್ ರಚನೆಯಾಗಿದೆ. ಅದಕ್ಕೂ ಮೊದಲು ಜಾಗದ ಮಾಲೀಕತ್ವ ಯಾರದು ಎಂಬ ಆಂಶವನ್ನು ನ್ಯಾಯಾಲಯ ವಿಚಾರಿಸಿಲ್ಲ. ಜೊತೆಗೆ ಭೂಸ್ವಾಧೀನವಾಗಿದ್ದ ಜಮೀನಿನ ಮೇಲೆ ಹಿಂದಿನ ಮಾಲೀಕರಿಗೆ ಅಧಿಕಾರವಿಲ್ಲ ಎಂಬ ಕಿರಿಯ ಸಿವಿಲ್ ನ್ಯಾಯಾಲಯದ ಆದೇಶವನ್ನು ಪರಿಗಣಿಸಿಲ್ಲ. ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಹಿರಿಯ ಸಿವಿಲ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈಗ ನಾವು ವಾಸ ಮಾಡುತ್ತಿರುವ ಜಾಗವನ್ನು ಕಳೆದುಕೊಳ್ಳವ ಸ್ಥಿತಿಗೆ ಬಂದಿರುವುದಾಗಿ ಕುಟುಂಬದ ಸದಸ್ಯರು ಅಲವತ್ತುಕೊಂಡಿದ್ದಾರೆ. ಈ ಸಂಬಂಧ ನವೀನ್‌ ಕುಮಾರ್‌ ಅವರು ಕಾನೂನಿನ ನೆರವು ನೀಡುವ ಭರವಸೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಹಾಸನ | ಮನೆ ಮುಂದೆಯೇ ಶವ ಹೂಳಲು ಮುಂದಾದ ದಲಿತ ಕುಟುಂಬ

ಗಿಡ್ಡಯ್ಯ ಅವರ ಮಗ ದೇವರಾಜು ಕುಟುಂಬ ಕೂಲಿ ಕೆಲಸ ಮಾಡಿಕೊಂಡಿದ್ದು, ಕುಟುಂಬ ನಿರ್ವಹಣೆ ಜೊತೆಗೆ ಜಾಗದ ವಿಚಾರಣೆಗೆಂದು ಹಲವು ಸಂಘಗಳಲ್ಲಿ ಸಾಲ ಪಡೆದು ಬಡ್ಡಿ ವ್ಯೂಹದಲ್ಲಿ ಸಿಲುಕಿಕೊಂಡಿರುವುದರಿಂದ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಕಳುಹಿಸುತ್ತಿರುವುದೂ ಈ ವೇಳೆ ಕಂಡುಬಂದಿದೆ. ಇದನ್ನು ಆಕ್ಷೇಪಿಸಿದ ನವೀನ್ ಕುಮಾರ್, ‌ʼಮಕ್ಕಳನ್ನು ಯಾವುದೇ ಕಾರಣಕ್ಕೂ ಶಾಲೆ ಬಿಡಿಸಿ ಕೂಲಿ ಕೆಲಸಕ್ಕೆ ಕಳುಹಿಸುವುದು ಅಪರಾಧ. ಇದರಿಂದ ಮಕ್ಕಳ ಭವಿಷ್ಯ ನಾಶವಾಗುತ್ತದೆʼ ಎಂದು ತಿಳಿಸಿದ್ದು, ಮಕ್ಕಳನ್ನು ಹಾಸ್ಟೆಲ್‌ನಲ್ಲಿಟ್ಟು ಓದಿಸುವಂತೆ ಸಲಹೆ ನೀಡಿದರು.

ನಿಯೋಗದಲ್ಲಿ ದಲಿತ ಹಕ್ಕುಗಳ ಸಮಿತಿಯ ಅಶೋಕ್ ಅತ್ನಿ, ಬಾನುಗೊಂದಿ ಲಿಂಗರಾಜು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X