ಹಾಡಹಗಲೇ ಮನೆಗೆ ನುಗ್ಗಿ ₹15 ಲಕ್ಷ ನಗದು ಹಾಗೂ ಸುಮಾರು ₹7 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಹಾಸನ ನಗರದ ಹೊಸ ಬಸ್ ನಿಲ್ದಾಣದ ಎದುರು ಕೆಎಚ್‌ಬಿ ಬಡಾವಣೆಯಲ್ಲಿ ಸಂಭವಿಸಿದೆ.
ಕೆಎಚ್‌ಬಿ ಕಾಲೋನಿ ನಿವಾಸಿ ಸಚಿನ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಡಿಸೆಂಬರ್ 5ರಂದು ಬೆಳಿಗ್ಗೆ ಪತ್ನಿ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದಾರೆ. ಸಂಜೆ ಮನೆಗೆ ವಾಪಸ್ ಬಂದಾಗ ಮುಂದಿನ ಬಾಗಿಲು ತೆರೆದಿತ್ತು. ಗಾಬರಿಯಲ್ಲಿಯೇ ಮನೆಯೊಳಗೆ ಪ್ರವೇಶ ಮಾಡಿದಾಗ ಎರಡು ರೂಂಗಳ ಬೀರುವಿನ ಬಾಗಿಲು ತೆರೆದುಕೊಂಡಿತ್ತು. ಒಂದು ರೂಂನಲ್ಲಿ ಇಡಲಾಗಿದ್ದ ₹15 ಲಕ್ಷ ಮತ್ತು ಇನ್ನೊಂದು ರೂಂನಲ್ಲಿ ಇಡಲಾಗಿದ್ದ 105ಗ್ರಾಂ ಇದ್ದ ವಿವಿಧ ರೀತಿಯ ಒಡವೆಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ.
ಖದೀಮರು ಮನೆ ಪ್ರವೇಶ ಮಾಡಲು ಕಬ್ಬಿಣದ ಆಯುಧದಿಂದ ಮುಂಬಾಗಿಲು ಮೀಟಿ ಕಳ್ಳತನ ಮಾಡಿರುವುದು ಕೇವಲ ನಾಲ್ಕೈದು ಗಂಟೆಗಳಲ್ಲಿ ಮಾತ್ರ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ₹15 ಲಕ್ಷ ನಗದು ಹಾಗೂ 120 ಗ್ರಾಂ ತೂಕದ ಚಿನ್ನ ಮತ್ತು ಬೆಳ್ಳಿಯ ಆಭರಣ ಸೇರಿ ಒಟ್ಟು ₹22 ಲಕ್ಷ ಮೌಲ್ಯಗಳೆಂದು ತಿಳಿದುಬಂದಿದೆ. ಈ ಕಳ್ಳತನ ಮಾಡಿರುವ ಚೋರರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕಂದಗೂಳ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಅಂಬೇಡ್ಕರ ಯುವಕ ಸಂಘ ಪ್ರತಿಭಟನೆ
₹15 ಲಕ್ಷ ನಗದು ಹಾಗೂ ₹7 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು ₹22 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ ಎಂದು ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.