ಪೌತಿ ಖಾತೆ ಆಂದೋಲನ ನಿರ್ವಹಿಸದಂತೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಗ್ರಾಮ ಆಡಳಿತಾಧಿಕಾರಿಗಳ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಅರಸೀಕೆರೆ ತಾಲೂಕಿನ ಜಾಜೂರು ವೃತ್ತದ ಗ್ರಾಮ ಆಡಳಿತಾಧಿಕಾರಿ ಶಿವಾನಂದ್ ನಾಯ್ಕ ಅವರನ್ನು ಅಮಾನತುಗೊಳಿಸಿ ಹಾಸನ ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಆದೇಶಿಸಿದ್ದಾರೆ.

“ಹುಬ್ಬಳ್ಳಿ ತಹಶೀಲ್ದಾರ್ಗೆ ಕರೆ ಮಾಡಿ, ಪೌತಿ ಖಾತೆ ಆಂದೋಲನದ ಬಗ್ಗೆ ಪ್ರಶ್ನಿಸಿರುವ ಹಾಗೂ ಆಂದೋಲನ ನಿರ್ವಹಿಸದಂತೆ ಪ್ರಚೋದನೆ, ಸರ್ಕಾರಿ ಕೆಲಸಗಳಲ್ಲಿ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ತೋರಿ, ಕರ್ತವ್ಯಲೋಪ ಎಸಗಿದ ಆರೋಪದಡಿ ಶಿವಾನಂದ್ ನಾಯ್ಕ ಅವರನ್ನು ಅಮಾನತು ಮಾಡಲಾಗಿದೆ” ಎಂದು ಜಿಲ್ಲಾಧಿಕಾರಿ ಸಿ ಸತ್ಯಭಾಮಾ ತಿಳಿಸಿದರು.
ಇದನ್ನೂ ಓದಿದ್ದೀರಾ? ಹಾಸನ | ಅರಣ್ಯ ಅಧಿಕಾರಿಗಳಿಗೆ ನಿಂದನೆ; ಶಾಸಕ ಹೆಚ್ ಕೆ ಸುರೇಶ್ ವಿರುದ್ಧ ಕ್ರಮಕ್ಕೆ ಒತ್ತಾಯ
“ಗ್ರಾಮ ಆಡಳಿತಾಧಿಕಾರಿಗಳ ಹೋರಾಟ 7ನೇ ದಿನವೂ ಮುಂದುವರಿದಿದೆ. ಬೇಡಿಕೆ ಈಡೇರಿಸುವ ಬದಲು ಸರ್ಕಾರ ಈ ರೀತಿ ಅಮಾನತು ಆದೇಶ ಹೊರಡಿಸಿದೆ. ಸರ್ಕಾರದ ಗಮನ ಸೆಳೆಯಲು ನಡೆಸುತ್ತಿರುವ ಹೋರಾಟದಿಂದ ಹಿಂದೆ ಸರಿಯುವುದಿಲ್ಲ” ಎಂದು ಶಿವಾನಂದ್ ನಾಯ್ಕ ಪಟ್ಟು ಹಿಡಿದಿದ್ದಾರೆ.
